ವೀರಪ್ಪ ಮೋಯ್ಲಿ ಮೇಲೆ ಭ್ರಷ್ಟಾಚಾರದ ಕರಿನೆರಳು

ಕುಟುಂಬ ನಡೆಸುತ್ತಿರುವ ಮತ್ತು ಅವರೇ ಅಧ್ಯಕ್ಷರಾಗಿರುವ ಕಿಸಾನ್ ಸಭಾ ಟ್ರಸ್ಟಿ(ಕೆಎಸ್‌ಟಿ)ಗೆ ಐಟಿಸಿ ಕಂಪನಿಯಿಂದ 2012ರ ಸೆಪ್ಟೆಂಬರ್‌ನಲ್ಲಿ ಹಣ ಹರಿದುಬಂದಿದೆ. ಮೋಯ್ಲಿ ಅವರ ಮಗ ಹರ್ಷ ಮೋಯ್ಲಿ ಮತ್ತು ಅವರ ಬಿಸಿನೆಸ್ ಪಾರ್ಟನರ್ ಆಗಿರುವ ಸುಧೀರ್ ಕೆ. ಪ್ರಭು ಎಂಬುವರ ನಡುವೆ ನಡೆದ ಈಮೇಲ್ ಸರಣಿಯಿಂದ ಈ ಹಗರಣದ ಮಾಹಿತಿ ಸೋರಿಕೆಯಾಗಿದೆ.
"ಮುಂದಿನ 5 ವರ್ಷಗಳವರೆಗೆ ಕೆಎಸ್‌ಟಿಯ ಎಲ್ಲ ಖರ್ಚುವೆಚ್ಚಗಳನ್ನು ಐಟಿಸಿ ಕಂಪನಿ ಒಪ್ಪಿಕೊಂಡಿದೆ ಎಂದು ಡ್ಯಾಡ್ ದೃಢಪಡಿಸಿದ್ದಾರೆ. ಹಾಗಾಗಿ, ಕಾರ್ಕಳ ಮತ್ತು ಚಿಕ್ಕಬಳ್ಳಾಪುರದ ಶಾಲೆಗಳ 2011-12ರ ಎಲ್ಲ ಖರ್ಚುವೆಚ್ಚಗಳ ವಿವರಗಳನ್ನು ಐಟಿಸಿ ಕಂಪನಿಗೆ ಕೂಡಲೆ ಒದಗಿಸಬೇಕು" ಎಂದು ಪ್ರಭುಗೆ ಬರೆದ ಪತ್ರದಲ್ಲಿ ಹರ್ಷ ಮೊಯ್ಲಿ ತಿಳಿಸಿರುವುದು ಅವ್ಯವಹಾರವನ್ನು ಬಯಲಿಗೆಳೆದಿದೆ.
ಈ ಪತ್ರಕ್ಕೆ ಪ್ರತಿಯಾಗಿ ಹರ್ಷ ನಡೆಸುತ್ತಿರುವ ಕಂಪನಿಗಳ ನಿರ್ದೇಶಕರಾಗಿರುವ ಪ್ರಭು, "ಕಾರ್ಕಳದ ಶಾಲೆಗೆ ಮೂಲ ಬಂಡವಾಳ 1.71 ಕೋಟಿ ರು. ಮತ್ತು ಚಿಕ್ಕಬಳ್ಳಾಪುರದ ಶಾಲೆಗೆ 3.10 ಕೋಟಿ ರು. ಅಗತ್ಯವಿದೆ. ಅಲ್ಲದೆ ಪ್ರತಿವರ್ಷ ಶಾಲೆ ನಡೆಸಲು 50 ಲಕ್ಷ ರು. ಬೇಕಾಗುತ್ತದೆ. ಆದ್ದರಿಂದ 6 ಕೋಟಿ ರು. ಫಂಡಿಂಗ್ ಮಾಡಬೇಕೆಂದು ಕೇಳಬಹುದು" ಎಂದು ಉತ್ತರಿಸಿದ್ದಾರೆ.
ಇದಲ್ಲದೆ, ಹರ್ಷ ಅವರು ಹಣ ಹೂಡಿರುವ ಮೋಕ್ಷಯುಗ ಆಕ್ಸೆಸ್ ಕಂಪನಿಗೆ ಪೆಟ್ರೋಲಿಯಂ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಅಧ್ಯಕ್ಷ ಅನಂತ್ ರವಿ ಅವರನ್ನು ಸಲಹೆಗಾರರನ್ನಾಗಿ ಮಾಡಿದ್ದು ವೀರಪ್ಪ ಮೋಯ್ಲಿ ಅವರ ಮೇಲೆ ಸಂಶಯದ ನೆರಳು ಬೀಳುವ ಹಾಗೆ ಮಾಡಿದೆ. ಕಿಸಾನ್ ಸಭಾ ಟ್ರಸ್ಟ್‌ಗೆ ವೀರಪ್ಪ ಮೋಯ್ಲಿ ಅವರ ಹೆಂಡತಿ ಮಾಲತಿ ಮೋಯ್ಲಿ, ಮಗಳ ಹಂಸಾ ಮೋಯ್ಲಿ ಮತ್ತು ಅಮೆರಿಕಾದಲ್ಲಿ ಎಂಬಿಎ ಮಾಡಿರುವ ಮಗ ಹರ್ಷ ಮೋಯ್ಲಿ ಸದಸ್ಯರಾಗಿದ್ದಾರೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications