ಯಡಿಯೂರಪ್ಪ ಬಗ್ಗೆ ಹಗುರವಾಗಿ ಮಾತ್ನಾಡಬೇಡಿ: ರೇಣುಕಾ

ಆದಾಗ್ಯೂ, ನಾನೀಗ ಬಿಜೆಪಿಯಲ್ಲಿದ್ದೇನೆ. ಕೆಜೆಪಿ ಕುರಿತು ಚಿಂತನೆ ಮಾಡಿಲ್ಲ. ಬಿಜೆಪಿಯ ಗುರುತಿನಲ್ಲಿಯೇ ಹೊನ್ನಾಳಿ ಪಟ್ಟಣ ಪಂಚಾಯತ್ ಚುನಾವಣೆ ಗೆದ್ದಿದ್ದೇವೆ. ಕ್ಷೇತ್ರದ ಜನತೆಗೂ ಇದು ಗೊತ್ತಿದೆ. ಮುಂದಿನ ತೀರ್ಮಾನ ಕುರಿತು ಈಗ ಏನೂ ಹೇಳೊಲ್ಲ ಎಂದು ಅವರು ಸ್ಪಷ್ಟಪಡಿಸಿರುವುದು ಕುತೂಹಲಕಾರಿಯಾಗಿದೆ.
ತಾಜಾ ಆಗಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಯಾರೂ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಅಬಕಾರಿ ಸಚಿವರು ಫರ್ಮಾನು ಹೊರಡಿಸಿದ್ದಾರೆ. ಯಡಿಯೂರಪ್ಪ 40 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ಅವರು ನಾಡಿನ ಮುಖ್ಯಮಂತ್ರಿಯಾಗಿದ್ದವರು. ಅಂತಹವರ ವಿರುದ್ಧ ಹಗುರವಾಗಿ ಮಾತನಾಡುವುದು ಸರ್ವತಾ ಸಾಧುವಲ್ಲ ಎಂದು ವಿನಮ್ರವಾಗಿ ನುಡಿದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರವೀಂದ್ರನಾಥ ಅವರು ಯಡಿಯೂರಪ್ಪ, ದಿವಂಗತ ಮಾಜಿ ಸಂಸದ ಜಿ ಮಲ್ಲಿಕಾರ್ಜುನಪ್ಪ, ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಪದೇ ಪದೇ ಅಪಮಾನಿಸುವ ರೀತಿಯಲ್ಲಿ ಮಾತನಾಡುತ್ತಾರೆ. ಯಡಿಯೂರಪ್ಪ ಅವರನ್ನು ಹಲವಾರು ಬಾರಿ ಲೇವಡಿ ಮಾಡಿ ಮಾತನಾಡಿದ್ದಾರೆ. ಇದು ಅವರಿಗೆ ಶೋಭೆ ತರುವಂತಹುದಲ್ಲ ಎಂದು ರವೀಂದ್ರನಾಥರ ವಿರುದ್ಧ ಹರಿಹಾಯ್ದಿದ್ದಾರೆ ರೇಣುಕಾ.
ರವೀಂದ್ರನಾಥ್ ಸೇರಿದಂತೆ ಹಲವು ನಾಯಕರನ್ನು ಬೆಳೆಸುವಲ್ಲಿ ಯಡಿಯೂರಪ್ಪನವರ ಪಾತ್ರ ಪ್ರಮುಖವಾಗಿದೆ. ಆದರೆ, ರವೀಂದ್ರನಾಥ್ ಅವರು ಈಗ ಯಡಿಯೂರಪ್ಪಗೆ ವಯಸ್ಸಾಗಿದೆ. ಅವರು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಪದೇ ಪದೇ ಹೇಳಿಕೆ ನೀಡಿದ್ದಾರೆ. ತಮ್ಮನ್ನು ಬೆಳೆಸಿದ ನಾಯಕರ ವಿರುದ್ಧವೇ ಹಾಗೆ ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪರಿಗೆ ಇನ್ನೂ ಜನರ ಸೇವೆ ಮಾಡುವ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ.
ರವೀಂದ್ರನಾಥ್ ಸಹ 40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಪಕ್ಷದ ವರ್ಚಸ್ಸು, ಜನರ ಪ್ರೀತಿ ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಪದೇ ಪದೇ ದೊಡ್ಡ ನಾಯಕರ ವಿರುದ್ಧ ಲೇವಡಿ ಮಾಡಿ ಮಾತನಾಡುವುದರಿಂದ ಅವರು ಮತದಾರರ ದೃಷ್ಟಿಯಲ್ಲಿ ವಿಲನ್ ಆಗುತ್ತಾರೆ ಎಂದು ಅಭಿಪ್ರಾಯಪಟ್ಟರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications