ಚೀನಾ ಪಠ್ಯಪುಸ್ತಕದಲ್ಲಿ ಮಹಾತ್ಮ ಗಾಂಧಿ ವಿಚಾರಧಾರೆ!

ನವದೆಹಲಿ, ಮಾ.18: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಇಂದು ನಮ್ಮ ದೇಶಕ್ಕೆ ಎಷ್ಟು ಪ್ರಸ್ತುತ? ಎಂದು ಪ್ರಶ್ನಿಸುವ ಮಂದಿ ಭಾರತದಲ್ಲಿ ಅನೇಕರು ಸಿಗಬಹುದು. ಆದರೆ ನೆರೆಯ ಚೀನಾ ಸದ್ದಿಲ್ಲದೆ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜೀವನಗಾಥೆ ಮತ್ತು ಬೋಧನೆಗಳನ್ನು ಯುವ ಪೀಳಿಗೆಗೆ ತಲುಪಿಸುತ್ತಿದೆ. ಮೊದಲು ಅಲ್ಲಿನ ಪಂಡಿತೋತ್ತಮರಿಗೆ ಮಾತ್ರವೇ ಗಾಂಧಿ ಬಗ್ಗೆ ಅರಿವಿತ್ತು.

ನಮ್ಮ ಈಗನ ಪೀಳಿಗೆಗೆ ಮಹಾತ್ಮಾ ಗಾಂಧಿಜೀ ಅಂದರೆ ಗಾಂಧಿ ತಾತಾ ಎಂದು ಹೇಳಿ ಸುಮ್ಮನಾಗುತ್ತಾರೆ. ಆದರೆ ಚೀನಾದಲ್ಲಿನ ಮಕ್ಕಳೂ ಹಾಗಾಗಬಾರದು ಎಂದು ಪೂರ್ವ ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದ ಶಿಕ್ಷಣದವರೆಗೆ ಮಹಾತ್ಮ ಗಾಂಧೀಜಿ ಅವರ ಕುರಿತಾದ ವಿಷಯಗಳು ಪಠ್ಯ ಕ್ರಮದಲ್ಲಿ ಹಾಸುಹೊಕ್ಕಿವೆ. ಹೇ ರಾಮ್ !

China follows Gandhiji teachings as a part of curriculum
ಮಹಾತ್ಮಾ ಅವರ ಬೋಧನೆಗಳು, ಅಹಿಂಸಾತ್ಮಾಕ ಹೋರಾಟದ ಬಗ್ಗೆ ತಿಳಿದುಕೊಳ್ಳಲು ಆ ವಿದ್ಯಾರ್ಥಿಗಳೂ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಾಂಧೀಜಿ ಅವರ ಅಹಿಂಸಾ ಚಳವಳಿ ಹಾಗೂ ಅವರ ಉಪದೇಶಗಳ ಬಗ್ಗೆ ಚೀನಿಯರು ಭಾರೀ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ.

ಮಾಜಿ ಭಾರತೀಯ ರಾಜತಾಂತ್ರಿಕರಾಗಿರುವ ಪಿಎ ನಜರೆತ್‌ ಅವರ Gandhi's Outstanding Leadership ಎಂಬ ಇಂಗ್ಲಿಷ್‌ ಕೃತಿಯನ್ನು ಚೀನಿ ಭಾಷೆಗೆ ತರ್ಜುಮೆ ಮಾಡಿರುವ ಚೀನಾದ ವಿದ್ವಾಂಸ ಕನ್ಯೂ ಶಾಂಗ್‌ ಹೇಳುವಂತೆ ಗಾಂಧಿ ಕುರಿತಾದ ಪಠ್ಯಗಳು ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿವಿಧ ಹಂತಗಳಲ್ಲಿ ಸೇರ್ಪಡೆಯಾಗಿದ್ದು, ಹೆಚ್ಚಿನ ಮಕ್ಕಳು ಗಾಂಧೀಜಿಯವರ ಅಹಿಂಸಾತ್ಮಾಕ ಹೋರಾಟ ಹಾಗೂ ಉಪದೇಶಗಳ ಬಗ್ಗೆ ಅರಿತುಕೊಂಡಿದ್ದಾರೆ.

ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿ ಗಾಂಧಿ ಬಗ್ಗೆ ಚಿತ್ರ ರೂಪದಲ್ಲಿ ಮಕ್ಕಳಿಗೆ ತಿಳಿವಳಿಕೆ ನಿಡಲಾಗುತ್ತಿದೆ. ಇನ್ನು, ಮಾಧ್ಯಮಿಕ ತರಗತಿಗಳಲ್ಲಿ ಮಕ್ಕಳಿಗೆ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಕನಿಷ್ಠ ಒಂದು ಪಾಠವಾದರೂ ಇದೆ ಎಂದು ಸೌತ್‌ ಚಿಂಗ್‌ ನಾರ್ಮಲ್‌ ಯುನಿವರ್ಸಿಟಿಯ ವಿದೇಶ ಅಧ್ಯಯನ ಶಾಲೆಯಲ್ಲಿ ಪ್ರಾಧ್ಯಾಪಕರಾಗಿರುವ ಶಾಂಗ್‌ ತಿಳಿಸಿದರು. ಶಾಂಗ್‌ ಅವರು ಗಾಂಧಿ ಮತ್ತು ನೆಹರೂ ಅವರ ಕುರಿತಂತೆ ಪಿಎಚ್‌ಡಿ ಪ್ರಬಂಧವನ್ನೂ ಬರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+