ಇಪ್ಪತ್ತು ವರ್ಷ ಬಿಜೆಪಿ ಅಧಿಕಾರಕ್ಕೆ ಬರೋಲ್ಲ:ಬಿಎಸ್ ವೈ

B.S.Yeddyurappa
ಬೆಂಗಳೂರು, ಮಾ.19 : ಕರ್ನಾಟಕದ ಬಿಜೆಪಿಗೆ ಇಪ್ಪತ್ತು ವರ್ಷಗಳ ಅವಧಿ ನೀಡುತ್ತೇನೆ. ಮತ್ತೊಮ್ಮೆ ಪಕ್ಷವನ್ನು ಅಧಿಕಾರ ಬಂದು ತೋರಿಸಲಿ ಎಂದು ಕೆಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

ರಾಜಾಜಿನಗರದ ಸಿದ್ದಗಂಗಾ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ವೀರಶೈವ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಡಿದ ಯಡಿಯೂರಪ್ಪ, ಬಿಜೆಪಿ ಸ್ವತಂತ್ರವಾಗಿ 125 ಸ್ಥಾನಗಳನ್ನು ಪಡೆದಿದ್ದರೆ ನಾನು ಪಕ್ಷ ಬಿಡುವ ಅವಶ್ಯಕತೆ ಇರಲಿಲ್ಲ. ಸ್ವತಂತ್ರವಾಗಿ ಪ್ರಾದೇಶಿಕ ಪಕ್ಷ ಕಟ್ಟುವ ಅನಿವಾರ್ಯತೆಯೂ ಇರಲಿಲ್ಲ ಎಂದರು.

ಪಕ್ಷವನ್ನು ರಾಜ್ಯಾದ್ಯಂತ ಕಟ್ಟಿ ಬೆಳೆಸಿ, ಅಧಿಕಾರದ ಗದ್ದುಗೆ ವರೆಗೆ ತೆಗೆದುಕೊಂಡು ಹೋಗಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ತಿಳಿಯದ ಬಿಜೆಪಿ ನಾಯಕರಿಗೆ 20 ವರ್ಷಗಳ ಸಮಯಾವಕಾಶ ನೀಡುತ್ತೇನೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿ ಎಂದು ಬಹಿರಂಗ ಸವಾಲು ಹಾಕಿದರು.

ಒಂದು ಲಕ್ಷ ಕೋಟಿಯ ಬಜೆಟ್ ಮಂಡಿಸಬೇಕು ಎಂಬುದು ನನ್ನ ಮಹ್ವತದ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮುಂದಿನ ವಿಧಾನಭಸೆ ಚುನಾವಣೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರುತ್ತದೆ ಆಗ, 2 ಲಕ್ಷ ಕೋಟಿ ರೂ.ಗಳ ಬಜೆಟ್ ಮಂಡಿಸುತ್ತೇನೆ ಎಂದು ಅವರು ವಿಶ್ಚಾಸ ವ್ಯಕ್ತಪಡಿಸಿದರು.

ರಾಜಕೀಯ ನಿವೃತ್ತಿ ಪಡೆಯುತ್ತೇನೆ : ನನ್ನನ್ನು ಅಪರಾಧಿ ಎನ್ನುವ ಬಿಜೆಪಿ ನಾಯಕರು, ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿರುವ ಗಣಿಗಾರಿಕೆ ವರದಿಯ ತನಿಖೆಯನ್ನು ಕಾನೂನು ಸಚಿವರ ಮೂಲಕವೇ ನಡೆಸಲಿ. ನನ್ನ ವಿರುದ್ಧದ ಆರೋಪಗಳು ಸಾಬೀತಾದರೆ ಅಂದಿನಿಂಲೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದರು.

ನನ್ನ ಬೆಂಬಲಿಗರು ಪಕ್ಷ ಸೇರುತ್ತಾರೆ : ಬಿಜೆಪಿ ಸರ್ಕಾರದಲ್ಲಿರುವ ನನ್ನ ಬೆಂಬಲಿಗರು ಶೀಘ್ರದಲ್ಲೇ ಕೆಜೆಪಿ ಸೇರಲಿದ್ದಾರೆ. ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಪಕ್ಷ ಸೇರುವ ಅಂತಿಮ ದಿನಾಂಕ ಮಾತ್ರ ನಿಗದಿಯಾಗಿಲ್ಲ ಎಂದು ತಿಳಿಸಿದರು.

ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವೀರಶೈವ ವಿದ್ಯಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಕೆಜೆಪಿ ರಾಜಾಜಿನಗರದ ಕ್ಷೇತ್ರದ ಅಧ್ಯಕ್ಷ ಎಚ್.ಆರ್.ಮಲ್ಲಿಕಾರ್ಜುನಯ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+