ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಜೆಡಿಎಸ್ ಗೆದ್ದೇ ಗೆಲ್ಲುತ್ತೆ ಎನ್ನಬಹುದಾದ 26 ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿದೆ. ಕೆ. ಆರ್ ಪೇಟೆಯಿಂದ ಮಾಜಿ ಸಭಾಪತಿ ಕೃಷ್ಣ ಅವರು ಸ್ಪರ್ಧೆಗಿಳಿಯುತ್ತಿದ್ದಾರೆ. ಮಿಕ್ಕಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಿಂದ, ಚೆಲುವರಾಯಸ್ವಾಮಿ ಅವರು ನಾಗಮಂಗಲ ಕ್ಷೇತ್ರದಿಂದ, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆಗಿಳಿಯುವುದು ಖಚಿತವಾಗಿದೆ. ಅನಿತಾ ಕುಮಾರಸ್ವಾಮಿ ಅವರು ಮಧುಗಿರಿ ಕ್ಷೇತ್ರದಿಂದ ಚನ್ನಪಟ್ಟಣಕ್ಕೆ ಶಿಫ್ಟ್ ಆಗುತ್ತಿದ್ದಾರೆ.
ಹೊಸ ಪ್ರಯೋಗ : ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ ಮುನ್ನ ಯಾವುದೇ ಆಪರೇಷನ್ ಗಳಿಗೆ ಬಲಿಯಾಗದಂತೆ ಪ್ರತಿಜ್ಞೆ ಮಾಡಿಸಿಕೊಳ್ಳಲಾಗುತ್ತೆ [ ಬೆಂಗಳೂರಿನ ಸಂಭಾವ್ಯ ಅಭರ್ಥಿಗಳ ಪಟ್ಟಿ ನೋಡಿ]
* ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ನಾಮಪತ್ರ ಸಲ್ಲಿಸಿ ರಣಕಹಳೆ ಮೊಳಗಿಸುವುದು(ಏಪ್ರಿಲ್ ಮೊದಲ ವಾರ?)
* 100ಕ್ಕೂ ಅಧಿಕ ವಿಧಾನಸಭಾ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಒಮ್ಮೆಗೆ ಪ್ರಕಟಿಸುವುದು.
* ಪಕ್ಷದ ಹಾಲಿ 26 ಶಾಸಕರಿಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
* ಪಕ್ಷದ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸಿ, ಪ್ರಚಾರ ಕಾರ್ಯ ಆರಂಭಿಸುವುದು.
* ಏ.10 ರೊಳಗೆ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಅಧಿಕೃತವಾಗಿ ಕಣಕ್ಕಿಳಿಯುವುದು
* ಸಾಮಾನ್ಯ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ.
ಎರಡನೇ ಸಂಭಾವ್ಯ ಪಟ್ಟಿಯಲ್ಲಿ ಯಾರಿದ್ದಾರೆ?:
* ಎಚ್ ಡಿ ಕುಮಾರಸ್ವಾಮಿ: ರಾಮನಗರ
* ಅನಿತಾ ಕುಮಾರಸ್ವಾಮಿ: ಚನ್ನಪಟ್ಟಣ
* ಎಚ್ ಸಿ ಬಾಲಕೃಷ್ಣ : ಮಾಗಡಿ
* ಎಚ್ ಡಿ ರೇವಣ್ಣ: ಹೊಳೆನರಸೀಪುರ
* ಸಿ.ಎಸ್ ಪುಟ್ಟರಾಜು : ಪಾಂಡವಪುರ
* ಕೃಷ್ಣ : ಕೆ.ಆರ್ ಪೇಟೆ
* ಡಿ.ಸಿ ತಮ್ಮಣ್ಣ : ಮದ್ದೂರು
* ಚೆಲುವರಾಯಸ್ವಾಮಿ : ನಾಗಮಂಗಲ
* ಸಾ.ರಾ ಮಹೇಶ್ : ಕೆ.ಆರ್ ನಗರ
* ಜಿ.ಟಿ ದೇವೇಗೌಡ : ಚಾಮುಂಡೇಶ್ವರಿ
* ರಮೇಶ್ ಬಂಡಿ ಸಿದ್ದೇಗೌಡ : ಶ್ರೀರಂಗಪಟ್ಟಣ
* ಎಂ. ಶ್ರೀನಿವಾಸ್ : ಮಂಡ್ಯ
* ಚೆನ್ನಿಗಪ್ಪ : ದೊಡ್ಡಬಳ್ಳಾಪುರ
* ಚಂದ್ರಣ್ಣ : ದೇವನಹಳ್ಳಿ
* ಮುದ್ದ ಹನುಮೇಗೌಡ: ಕುಣಿಗಲ್
* ಮಧು ಬಂಗಾರಪ್ಪ : ಸೊರಬ
* ಶ್ರೀಕಾಂತ್ : ಶಿವಮೊಗ್ಗ
* ಗೌರಿಶಂಕರ್ : ತುಮಕೂರು ಗ್ರಾಮಾಂತರ
* ವಾಸು : ಗುಬ್ಬಿ
* ವೀರಭದ್ರಯ್ಯ : ಮಧುಗಿರಿ
* ಸೇವಾಲಾಲ್ : ಕೊರಟಗೆರೆ
* ಶಿವಲಿಂಗೇಗೌಡ : ಅರಸೀಕೆರೆ
* ವೈಎಸ್ ವಿ ದತ್ತ: ಕಡೂರು
* ಜವರಾಯಿಗೌಡ : ಬೇಲೂರು
ಅವಕಾಶವಾದಿಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು, ರಿಯಲ್ ಎಸ್ಟೇಟ್, ಗಣಿ ಉದ್ಯಮಿಗಳಿಗೆ, ಒತ್ತಡ ಹಾಕುವವರಿಗೆ ಟಿಕೆಟ್ ನೀಡಲಾಗುವುದಿಲ್ಲ. ಶಿಫಾರಸಿಗೆ ಬೇಕಾದರೆ ಓಗೊಡುತ್ತೇವೆ. ಪಕ್ಷದ ಸಂಸದೀಯ ಮಂಡಳಿ ಸಭೆ 19 ರಂದು ನಡೆಯಲಿದೆ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಚರ್ಚೆ ನಡೆಸಿ ಪಟ್ಟಿ ಪ್ರಕಟಿಸಲಾಗುವುದು. ಮಾ.22, 23ರಂದು 160 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications