ತಿಹಾರ್ ಜೈಲಿನಲ್ಲಿ ಮಹಿಳಾ ಕೈದಿ ಆತ್ಮಹತ್ಯೆ

ಈ ಎರಡು ಘಟನೆಗಳು ಭಾರೀ ಭದ್ರತೆ ಇದೆ ಎಂದು ಹೇಳಲಾಗಿರುವ ತೀಹಾರ್ ಜೈಲಿನಲ್ಲಿಯೇ ಕೈದಿಗಳಿಗೆ ನೀಡಲಾಗಿರುವ ಭದ್ರತೆ ಮತ್ತು ಅವರಿಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಅನೇಕ ಪ್ರಶ್ನೆಗಳೇಳುವಂತೆ ಮಾಡಿವೆ.
30 ವರ್ಷದ ಮಹಿಳೆ ಬಂದೀಖಾನೆಯ ಸರಳುಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ತಿಳಿಯುತ್ತಿದ್ದಂತೆ ಆಕೆಯನ್ನು ದೀನ್ ದಯಾಳ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಯ ಮಧ್ಯದಲ್ಲಿಯೇ ಆಕೆ ಕೊನೆಯುಸಿರೆಳೆದಿದ್ದಾಳೆ.
ಅದೇ ಬಂದೀಖಾನೆಯಲ್ಲಿ ಇನ್ನಿಬ್ಬರು ಮಹಿಳಾ ಕೈದಿಗಳು ಇದ್ದರಾದರೂ ಆಕೆ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಅವರಿಬ್ಬರೂ ಹೊರಗೆ ಹೋಗಿದ್ದರು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ದೆಹಲಿ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ರಾಮ್ ಸಿಂಗ್ ತಾನಿದ್ದ ಖಾನೆಯಲ್ಲಿ ಸರಳಿಗೆ ಬಟ್ಟೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. 9 ಅಡಿ ಮೇಲಿದ್ದ ಸರಳಿಗೆ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದ ಆತನ ಕುಟುಂಬದವರು, ರಾಮ್ ಸಿಂಗ್‌ನನ್ನು ಜೈಲಿನ ಅಧಿಕಾರಿಗಳೇ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ದೆಹಲಿ ಅತ್ಯಾಚಾರದ ಘಟನೆಯ ಇತರ ಆರೋಪಿಗಳು ತಮ್ಮನ್ನು ತೀಹಾರ್ ಜೈಲಿನಿಂದ ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದರು. ಈಗ ಅವರನ್ನು ಸಿಸಿಟಿವಿ ಇರುವ ಬೇರೆ ಕೋಣೆಗೆ ಸ್ಥಳಾಂತರಿಸಲಾಗಿದೆ ಮತ್ತು ಇತರ ಕೈದಿಗಳಿದ್ದಲ್ಲಿಯೂ ಭದ್ರತೆಯನ್ನು ಹೆಚ್ಚಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications