ಶೆಟ್ಟರ್ ಮೇಲೆ 300 ಕೋಟಿ ತಿಂದ ಆರೋಪ

Jagadish Shettar got Rs 300crore kickback Siddaramaiah
ಬೆಂಗಳೂರು, ಮಾ.12: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೇಲೆ ದೊಡ್ಡ ಆರೋಪ ಮಾಡಿದ್ದಾರೆ. ಬಿಡಿಎ ನಿವೇಶನ ಹಂಚಿಕೆಯಲ್ಲಿ ಕೋಟೀಗಟ್ಟಲೆ ಹಣ ಕಿಕ್ ಬ್ಯಾಕ್ ಸಿಕ್ಕಿದೆ ಎಂದಿದ್ದಾರೆ.

ನಾಡಪ್ರಭು ಕೆಂಪೇಗೌಡ ಲೇಔಟ್ ನಿವೇಶನ ಹಂಚಿಕೆಗಾಗಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸುಮಾರು 300 ಕೋಟಿ ರು ಲಂಚ ಪಡೆದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಶೆಟ್ಟರ್ ಕಿಕ್ ಬ್ಯಾಕ್ ಪಡೆದಿದ್ದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕೆಂಪೇಗೌಡ ಲೇಔಟ್ ಯೋಜನೆಯನ್ನು ಅವಶ್ಯಕತೆ ಇಲ್ಲದಿದ್ದರೂ 1,069 ಕೋಟಿ ರು ಗಳಿಂದ 2,800 ಕೋಟಿ ರು ಗಳಿಗೆ ಏರಿಸಲಾಯಿತು. ಸರ್ಕಾರದ ಕ್ರಮವನ್ನು ಮುಖ್ಯ ಇಂಜಿನಿಯರ್ ವಿರೋಧಿಸಿದ್ದಕ್ಕೆ ಆತನನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಲಾಗಿದೆ.

ಆರ್ಥಿಕ ಇಲಾಖೆ ಅಂದಾಜು ಲೆಕ್ಕಾಚಾರದ ಪ್ರಕಾರ ಬಿಡ್ಡಿಂಗ್ ಮೊತ್ತ ಶೇ 10 ರಷ್ಟು ಹೆಚ್ಚಾಗಿದ್ದರೆ ಡೀಲ್ ವಜಾ ಗೊಳ್ಳಬೇಕಾಗುತ್ತದೆ. ಆದರೆ, ಬಿಜೆಪಿ ಸರ್ಕಾರ ಯೋಜನಾ ವೆಚ್ಚ ಏರಿಸಿದ್ದಲ್ಲದೆ ಸಮರ್ಥನೆಯನ್ನು ನೀಡಿದೆ. 2,800 ಕೋಟಿ ರು ನಿಂದ 2,200 ಕೋಟಿ ರುಗೆ ಇಳಿಸಲಾಗಿದೆ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ ಮೇಲೆ ಸರ್ಕಾರ ತನ್ನ ಯೋಜನಾ ಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಈ ಅಕ್ರಮದಲ್ಲಿ ಜಗದೀಶ್ ಶೆಟ್ಟರ್ ನೇರ ಫಲಾನುಭವಿಯಾಗಿದ್ದಾರೆ.

ಬಿಡಿಎ ಗೆ 700 ರಿಂದ 800 ಕೋಟಿ ರು ನಷ್ಟವಾಗಿದೆ. ಸರ್ಕಾರದ ದುರಾಸೆಯಿಂದ ಸಾಮಾನ್ಯ ಜನರಿಗೆ ಭಾರಿ ನಷ್ಟ ಕಾದಿದೆ. ಕೆಂಪೇಗೌಡ ಲೇಔಟ್ ನ ಪ್ರತಿ ಚದರ ಅಡಿಗಳಿಗೆ 800 ರು ನಂತೆ ಪಾವತಿ ಬೇಕಿದ್ದ ಜನ ಸಾಮಾನ್ಯರು ಈಗ 1200 ಪ್ರತಿ ಚ.ಅ ಗೆ ಪಾವತಿಸುವ ಪರಿಸ್ಥಿತಿಯನ್ನು ಬಿಜೆಪಿ ಸೃಷ್ಟಿಸಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+