ಕಾಂಗೈಗೆ ಎಂಟ್ರಿ ಕೊಟ್ಟ ಸ್ವತಂತ್ರ ಶಿವರಾಜ್ ತಂಗಡಗಿ

Independent MLA Shivaraj Thangadagi to join Congress on March 15
ಕೊಪ್ಪಳ, ಮಾ.8: ಜಿಲ್ಲೆಯ ಕನಕಗಿರಿ ಕ್ಷೇತ್ರದ ಪಕ್ಷೇತರ ಶಾಸಕ ಶಿವರಾಜ್ ತಂಗಡಗಿ ನಿಜಕ್ಕೂ ಸ್ವತಂತ್ರರಾಗಿದ್ದಾರೆ. ಇತ್ತೀಚೆಗೆ ಒಂದೇ ಸಮನೆ ಕಾಂಗ್ರೆಸ್ ಬಾಗಿಲು ಬಡಿಯುತ್ತಿದ್ದ ತಂಗಡಗಿ, ಕೊನೆಗೂ ಕಾಂಗ್ರೆಸ್ ಸೇರುವುದು ಖಚಿತವಾಗಿದೆ.

ಇದಕ್ಕೆ 'ಸ್ಥಳೀಯ ಫಲಿತಾಂಶ' ಹೊರಬಿದ್ದ ಬಳಿಕ, ಮಾರ್ಚ್ 15ರಂದು ಮಹೂರ್ತ ನಿಗದಿಯಾಗಿದೆ ಎಂದು ಕ್ವೀನ್ಸ್ ರೋಡ್ ಮೂಲಗಳು ಖಚಿತಪಡಿಸಿವೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಅವರು ಇದಕ್ಕೆ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಇದೇ ವೇಳೆ, ಇನ್ನಿಬ್ಬರು ಸರ್ವಸ್ವತಂತ್ರರಾದ ನರೇಂದ್ರಸ್ವಾಮಿ ಮತ್ತು ವೆಂಕಟರಮಣಪ್ಪ ಅವರುಗಳು ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧದ ನಡುವೆಯೂ ಕಾಂಗ್ರೆಸ್ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದಾರೆ. ಸುರಪುರದ ಬಿಜೆಪಿ ಶಾಸಕ ರಾಜುಗೌಡರಿಗೂ ಸ್ಥಳೀಯರ ವಿರೋಧವಿದ್ದರೂ ಕಾಂಗೈ ಸೇರ್ಪಡೆ ಹಾದಿ ಸುಗಮವಾಗಿದೆ.

ಈ ಮೂವರೂ ತಂಗಡಗಿ ಸೇರ್ಪಡೆಯಾದ ಮರುದಿನವೇ ಕಾಂಗ್ರೆಸಿಗೆ ಸೇರುವುದು ನಿಕ್ಕಿಯಾಗಿದೆ. ಇನ್ನು ವರ್ತೂರು ಪ್ರಕಾಶ್ ಮತ್ತು ಡಿ ಸುಧಾಕರ್ ಸೇರ್ಪಡೆ ಪೆಂಡಿಂಗ್ ನಲ್ಲೇ ಇದೆ.
ಹಸ್ತೋದಕ: ಈ ಮಧ್ಯೆ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹವಾ ಇದೆ ಎಂದು ಈಗಿಂದಲೇ ಬಿರುಗಾಳಿ ಊದುವ ಕಾರ್ಯವೂ ನಡೆಯುತ್ತಿದೆ. ಹಾಗಾಗಿ, ಆಡಳಿತಾರೂಢ ಬಿಜೆಪಿ ಮತ್ತು ಜೆಡಿಎಸ್ ನಿಂದಲೂ ಸಾಕಷ್ಟು ಮಂದಿ ಕಾಂಗ್ರೆಸ್ ಮುಂದೆ ಅರ್ಜಿ ಹಿಡಿದು ನಿಂತಿದ್ದಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವುದಾದರೆ ಯಾರು ಬೇಕಾದರೂ ಬರಲಿ ಎಂಬ ಮಾತು ಕಾಂಗ್ರೆಸ್ ನಾಯಕರ ನಾಲಿಗೆಯ ಮೇಲೆ ಹರಿದಾಡುತ್ತಿದೆ.

ಗೂಳಿಹಟ್ಟಿ ಶೇಖರ್ ನಡೆ ಕಾಂಗ್ರೆಸ್ಸಿನತ್ತಲೋ, ಬಿಜೆಪಿಗೇ ಸೀಮಿತವೋ ಎಂಬುದು ಇಂಟರೆಸ್ಟಿಂಗ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+