ತೆಂಗಿನಕಾಯಿ ಕೊಳೆತು ಹೋಗಿದೆ - ಯಡಿಯೂರಪ್ಪ

BS Yeddyurappa
ಶಿವಮೊಗ್ಗ, ಮಾ.5 : ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ ತಪ್ಪು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಪಶ್ಚಾತಾಪ ಪಡುತ್ತಿದ್ದಂತೆಯೇ, ತಮ್ಮ ವಿರೋಧಿಯ ಮೇಲೆ ಯಡಿಯೂರಪ್ಪ ಗುಡುಗಿದ್ದಾರೆ.

ಈಶ್ವರಪ್ಪ ಕೊಡುವ ತೆಂಗಿನ ಕಾಯಿ ಕೊಳೆತು ಹೋಗಿದೆ. ಆದ್ದರಿಂದ ಕೆಜೆಪಿ ನೀಡುವ ತೆಂಗಿನಕಾಯಿ ತೆಗೆದುಕೊಳ್ಳಿ, ಕೆಜೆಪಿಯನ್ನು ಬೆಂಬಲಿಸಿ ಎಂದು ಯಡಿಯೂರಪ್ಪ ಮತದಾರರಿಗೆ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಈಶ್ವರಪ್ಪ ಜೆಡಿಎಸ್ ಅಪ್ಪ- ಮಕ್ಕಳ ಪಕ್ಷ, ಕಾಂಗ್ರೆಸ್ ತಾಯಿ-ಮಕ್ಕಳ ಪಕ್ಷ ಎಂದು ಟೀಕಿಸುತ್ತಿದ್ದ ಯಡಿಯೂರಪ್ಪ, ತಮ್ಮ ಮಗನನ್ನು ಸಂಸದನನ್ನಾಗಿ ಮಾಡಿ ಅವರು ಅಪ್ಪ ಮಕ್ಕಳ ಪಕ್ಷ ಕಟ್ಟಿತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಮಾಡಿ ರಾಷ್ಟ್ರೀಯ ಪಕ್ಷ ಬಿಜೆಪಿ ದೊಡ್ಡ ತಪ್ಪು ಮಾಡಿದೆ. ಈ ಬಗ್ಗೆ ಇಂದಿಗೂ ಪಶ್ಚಾತಾಪವಿದೆ ಎಂದು ಹೇಳಿಕೆ ನೀಡಿದ್ದರು. ಕೆಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಾ ಶಿವಮೊಗ್ಗದಲ್ಲಿದ್ದ ಯಡಿಯೂರಪ್ಪ ತಮ್ಮ ರಾಜಕೀಯ ಕಡು ವೈರಿ ಹೇಳಿಕೆಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಈಶ್ವರಪ್ಪ ಕಳೆದ ಬಾರಿ ಗೆದ್ದು ಬಂದಿದ್ದು ನನ್ನಿಂದ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಇಬ್ಬರು ಗೆದ್ದು ಬರಲಿ, ಉಳಿದವರು ಗೆದ್ದು ಅಧಿಕಾರ ಪಡೆಯುವ ಬಗ್ಗೆ ಆಮೇಲೆ ಆಲೋಚಿಸೋಣ ಎಂದು ಈಶ್ವರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.

ನನ್ನನ್ನು ಭ್ರಷ್ಟಾಚಾರಿ, ಜೈಲಿಗೆ ಹೋಗಿಬಂದವರು ಎಂದು ಟೀಕಿಸುವ ಈಶ್ವರಪ್ಪ ಬಣ್ಣ ಸದ್ಯದಲ್ಲೇ ಬಯಲಾಗಲಿದೆ. ಲೋಕಾಯುಕ್ತದಲ್ಲಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಈಶ್ವರಪ್ಪ ಎಷ್ಟು ಒಳ್ಳೆಯ ಮನುಷ್ಯ ಎಂದು ತಿಳಿಯಲಿದೆ ಎಂದು ಅವರು ಕುಟುಕಿದ್ದಾರೆ.

ನಾನು ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದೇನೆ ಎಂದು ಟೀಕಿಸುವ ಸಿಎಂ ಮತ್ತು ಡಿಸಿಎಂ ನಾನು ಜಾರಿಗೆ ತಂದ ಯೋಜನೆಗಳಿಗೆ ಇವರ ಫೋಟೋ ಹಾಕಿಕೊಂಡು ಮತ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತವರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಣೆ ಉಭಯ ನಾಯಕರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+