ರೈಲ್ವೆ ಕ್ರಾಸಿಂಗ್ ದುರಂತ ತಡೆಗೆ ಕ್ರಮ : ಬನ್ಸಾಲ್

Pawan Kumar Bansal
ನವದೆಹಲಿ, ಫೆ.26 : ಮುಂಬರುವ ಲೋಕಸಭಾ ಚುಣಾವಣೆ ಗಮದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ಖಾತೆ ಸಚಿವ ಪವನ್ ಕುಮಾರ್ ಬನ್ಸಾಲ್ 2013ರ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಭಾಷಣ ಪ್ರಾರಂಭಿಸಿಸುವ ಮುನ್ನ ಅಲಹಾಬಾದ್ ರೈಲ್ವೆ ಸೇತುವೆ ಕುಸಿತ ಘಟನೆ ನೆನಪಿಸಿಕೊಂಡ ಸಚಿವರು, ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರೈಲುಗಳಲ್ಲಿ ಪ್ರಯಾಣಿಸುವವರ ಸುರಕ್ಷತೆ ಒಂದೆಡೆಯಾದರೆ, ಮಾನವ ರಹಿತ ಲೆವೆಲ್ ಕ್ರಾಸಿಂಗ್ ಬಳಿ ರೈಲು ಬರುತ್ತಿರುವುದು ಗಮನಿಸದೇ ಹಳಿ ದಾಟುವಾಗ ರೈಲಿಗೆ ಸಿಲುಕಿ ಸಾಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಶೇ. 40ರಷ್ಟು ಅಪಘಾತಗಳು ಇಂತಹ ಮಾನವರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ಆಗುತ್ತಿವೆ ಎಂಬುದನ್ನು ಅವರು ಒಪ್ಪಿಕೊಂಡರು.

ನವದೆಹಲಿಯಲ್ಲಿ ಸಚಿವರು 2013-14ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸುತ್ತಿದ್ದರೆ, ಮಧ್ಯಪ್ರದೇಶದ ವಿಧಿಷಾದಲ್ಲಿ ರೇಲ್ವೆ ಹಳಿ ದಾಟುತ್ತಿದ್ದಾಗ ರೈಲಿಗೆ ಸಿಲುಕಿ ಇಬ್ಬರು ಮಕ್ಕಳು ದುರಂತ ಸಾವನ್ನಪ್ಪಿದ್ದಾರೆ. ಇದರಿಂದ ಕೆರಳಿದ ಜನರು ರೈಲ್ವೆ ನಿಲ್ದಾಣಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮೈಸೂರು ರೈಲ್ವೆ ವಿಭಾಗದಲ್ಲಿ ಕಳೆದ ವರ್ಷ ಕ್ರಾಸಿಂಗ್ ನಲ್ಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 300. ಹೊಸವರ್ಷದ ಎರಡನೇ ದಿನ ಅಂದರೆ ಜನವರಿ 2, 2013ರಂದು ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ನಿಲ್ದಾಣದ ಸಮೀಪ ಹಳಿ ದಾಟುವಾಗ ಒಬ್ಬ ಸಾಫ್ಟ್ ವೇರ್ ಇಂಜಿನಿಯರ್ ರೈಲಿಗೆ ಸಿಲುಕಿ ಮೃತಪಟ್ಟಿದ್ದರು.

ಬಜೆಟ್ ನಲ್ಲಿ ಕ್ರಾಸಿಂಗ್ ನಲ್ಲಿ ಆಗುವ ಅಪಘಾತಗಳ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಒಟ್ಟು 31,846 ಲೆವೆಲ್ ಕ್ರಾಸಿಂಗ್ ಗಳಿದ್ದು ಅದರಲ್ಲಿ 10,700 ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳಿವೆ. ಅವುಗಳ ಬಳಿ ಅಪಘಾತಗಳಾದಂತೆ ಎಚ್ಚರ ವಹಿಸಲಾಗುವುದು ಎಂದಿದ್ದಾರೆ. ಭವಿಷ್ಯದಲ್ಲಿ ಮಾನವರಹಿತ ಕ್ರಾಸಿಂಗ್‌ಗಳ ನಿರ್ಮಾಣ ಮಾಡುವುದಿಲ್ಲ ಘೋಷಿಸಿದ್ದಾರೆ.

ಎಲ್ಲಾ ಕ್ರಾಸಿಂಗ್ ಗಳಲ್ಲೂ ರೈಲು ಸಂರಕ್ಷಣಾ ಎಚ್ಚರಿಕೆ ವ್ಯವಸ್ಥೆ (Train Protection Warning System) ಅಳವಡಿಸಲಾಗುವುದು ಎಂದು ಹೇಳಿದ್ದಾರೆ. ಕಾಡಿನ ನಡುವೆ ಹಾದು ಹೋಗಿರುವ ಹಳಿಗಳಿಗೆ ಸಿಲುಕಿ ಆನೆಗಳು ಸಾವನ್ನಪ್ಪುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ರೈಲ್ವೆ ಬಜೆಟ್ ಮುಖ್ಯಾಂಶಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+