ಸಂಧ್ಯಾ ಮೇಡಂರನ್ನು ಚುಚ್ಚು ಮಾತಿನಿಂದಲೇ ಕೊಂದರು

Mysore: Teacher Commits Suicide in School
ಮೈಸೂರು, ಫೆ.24: ಶಾಲಾ ಶಿಕ್ಷಕಿಯೊಬ್ಬರು ಸಹದ್ಯೋಗಿಗಳ ಚುಚ್ಚುಮಾತಿನಿಂದ ಬೇಸತ್ತು ಶಾಲೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಜಯಪುರ ಪೊಲೀಸ್ ಠಾಣೆ ವ್ಯಾಪಿಯಲ್ಲಿ ನಡೆದಿದೆ.

30 ವರ್ಷ ವಯಸ್ಸಿನ ಸಂಧ್ಯಾರಾಣಿ ಎಂಬ ಶಿಕ್ಷಕಿ ತನ್ನ ಸಾವಿಗೆ ಕಾರಣರಾದವರ ಹೆಸರುಗಳನ್ನು ಬರೆದು ತಮಗಾದ ನೋವನ್ನು ವಿವರಿಸಿ ತಮ್ಮ ತಾಯಿ ಹೆಸರಿಗೆ ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ.

ಮೆಟಗಳ್ಳಿ ನಿವಾಸಿಯಾಗಿದ್ದ ಸಂಧ್ಯಾ ಮೇಡಂ ನೋಡೋದಕ್ಕೆ ಸುಂದರವಾಗಿದ್ದರು. ಅಲ್ಲದೆ, ಮಕ್ಕಳಿಗೆ ಚೆನ್ನಾಗಿ ಪಾಠ ಮಾಡುತ್ತಿದ್ದರು. ಆದರೆ, ಸಹದ್ಯೋಗಿಗಳ ಅಸೂಯೆ ಆಕೆಯನ್ನು ಬಲಿ ತೆಗೆದುಕೊಂಡಿದೆ. ಮೂಲತಃ ಹೊಸಗುರ್ಗದವರಾದ ಸಂಧ್ಯಾರಾಣಿ ಅವರು 10 ವರ್ಷದ ಹಿಂದೆ ಯೊಗೇಶ್ ಎಂಬುವವರನ್ನು ಮದುವೆಯಾಗಿದ್ದರು, ಕಳೆದ 5 ವರ್ಷದ ಹಿಂದೆ ಯೋಗೇಶ್ ಅಕಾಲಿಕ ಮರಣ ಹೊಂದಿದ್ದರು.

ನಂತರ ತನ್ನ ತಾಯಿ ಹಾಗೂ ಮಗುವನ್ನು ಕರೆದುಕೊಂಡು ಮೈಸೂರಿಗೆ ಬಂದು ನೆಲೆಸಿದ್ದ ಸಂಧ್ಯಾರಾಣಿ, ಅರಸಿನಕೆರೆ ಶಾಲೆಯಲ್ಲಿ ಶಿಕ್ಷಕಿಯಾಗಿ ಉದ್ಯೋಗ ಮಾಡುತ್ತಿದ್ದರು. ಆದರೆ, ಆಕೆ ಶಾಲೆಯಲ್ಲಿ ನಿತ್ಯ ನರಕ ಅನುಭವಿಸುತ್ತಿದ್ದರು. ಕೊನೆ ತನ್ನ ಸಾವಿಗೆ ಕಾರಣರಾದವರ ಹೆಸರು ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

ಇದೇ ಮೊದಲಲ್ಲ. ಸಹದ್ಯೋಗಿಗಳು ನೀಡುತ್ತಿದ್ದ ಕಿರುಕುಳದ ಬಗ್ಗೆ ಆಕೆ ಹೆಡ್ ಮಾಸ್ಟರ್ ಗೂ ದೂರು ನೀಡಿದ್ದರು. ಆದರೆ, ಇದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. ಬದಲಿಗೆ ಕಿರುಕುಳ ಇನ್ನಷ್ಟು ಹೆಚ್ಚಾಯಿತು. ಮಕ್ಕಳು ಕೂಡಾ ದೂರು ನೀಡಿದ್ದಾರೆ. ಅಶ್ಲೀಲ ಮಾತುಗಳನ್ನು ಹೇಳುತ್ತಾರೆ. ಹಲವು ಶಿಕ್ಷಕರು ಮಕ್ಕಳಿಂದ ಮೈ ಕೈ ಒತ್ತಿಸಿಕೊಳ್ಳುತ್ತಿದ್ದರು. ಆದರೆ, ಸಂಧ್ಯಾ ಮೇಡಂ ಚೆನ್ನಾಗಿ ಪಾಠ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಶಿಕ್ಷಕರ ಜೊತೆ ಮಾತನಾಡಿದರೆ. ವಿದ್ಯಾರ್ಥಿಗಳ ಜೊತೆ ಕೂತರೆ, ಬಸ್ ಸ್ಟಾಪ್ ನಲ್ಲಿ ಗುರುತು ಪರಿಚಯದವರು ಮಾತನಾಡಿಸಿದರೆ ಸಾಕು ಅವರೊಂದಿಗೆ ಸಂಬಂಧ ಕಲ್ಪಿಸಿ ಗುಲ್ಲೆಬ್ಬಿಸಿಬಿಡುತ್ತಿದ್ದರು. ನಿತ್ಯ ಹತಾಶೆ, ನೋವು ನುಂಗಿಕೊಂಡಿದ್ದ ಸಂಧ್ಯಾರಾಣಿ ತನ್ನ ಮಗನಿಗಾಗಿ ಎಲ್ಲವನ್ನು ಸಹಿಸಿದ್ದರು ಎಂದು ತಿಳಿದು ಬಂದಿದೆ.

ಮಗಳ ಸಾವಿಗೆ ಸಹದ್ಯೋಗಿಗಳೇ ಕಾರಣ ಎಂದು ಸಂಧ್ಯಾರಾಣು ತಾಯಿ ಸುಶೀಲಮ್ಮ ದೂರಿದ್ದಾರೆ.' ಆಕೆ ಸುಂದರವಾಗಿರೋದು ಸಹ ಟೀಚರ್ಸ್ ಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಬೇರೆ ಟೀಚರ್ಸ್ ಗಳ ಸಂಬಂಧ ಕಲ್ಪಿಸಿದ್ದರು. ಪ್ರತಿದಿನ ತನಗಾದ ಹಿಂಸೆಯನ್ನು ಹೇಳಿಕೊಳ್ಳುತ್ತಿದ್ದಳು. ನಾನು ಕಳಂಕಿತೆ ಎಂದು ಮೊದಲು ಚೆನ್ನಾಗಿ ಮಾತನಾಡಿಸುತ್ತಿದ್ದ ಬೇರೆ ಟೀಚರ್ಸ್ ಗಳು ನನ್ನನ್ನು ದೂರ ಮಾಡಿದ್ರು. ಎಂದು ಗೋಳಾಡುತ್ತಿದ್ದಳು ಎಂದಿದ್ದಾರೆ.

ಡಿಡಿಪಿಐ ಬಸವರಾಜ್ : ಈ ಬಗ್ಗೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಇಲಾಖೆ ತನಿಖೆ ನಡೆಸಲಿದೆ. ಸಂಧ್ಯಾರಾಣಿ ಅವರ ತಾಯಿ ಅವರ ಹೇಳಿಕೆ, ಡೆತ್ ನೋಟ್ ಪರಿಶೀಲಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+