ರಜೆ ಗೋಳು: ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ

ಆಗಲೇ ಮತ್ತೊಂದು ಅಂತಹ ಘಟನೆ ನಡೆದಿದೆ. ಆದರೆ ಯಾರದೇ ಪ್ರಾಣ ಹೋಗಿಲ್ಲ. ಬದಲಿಗೆ ಪೇದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ರಾಜಾನುಕುಂಟೆ ಘಟನೆ ನಡೆದ 15 ದಿನಗಳಲ್ಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮಿರ್ಜಿ ಸಾಹೇಬರು ಪೇದೆಗಳು ಮೊದಲು ರಜೆ ಕೊಟ್ಟುಬಿಡಿ ಎಂದು ಫರ್ಮಾನು ಹೊರಡಿಸಿದ್ದರು ಎಂಬುದು ಗಮನಾರ್ಹ. ಆದರೆ ಪಕ್ಕದ ಕೋಲಾರ ಜಿಲ್ಲಾ ಪೊಲೀಸರು ಮಿರ್ಜಿ ಸಾಹೇಬರ ಅಧಿಕಾರ ವ್ಯಾಪ್ತಿಗೆ ಬರೋಲ್ಲ. ಹಾಗಾಗಿ
ಕೋಲಾರ ಜಿಲ್ಲೆ ಬಂಗಾರ ಪೇಟೆಯಲ್ಲಿ ರಜೆ ಗೋಳಿನ ಪ್ರಸಂಗವೊಂದು ಇಂದು ಬೆಳಗ್ಗೆ ನಡೆದಿದೆ. ಅನಿಲ್ ಎಂಬ ಪೇದೆ ಎಸ್ ಡಿಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ನಾಳೆಯೇ ಪರೀಕ್ಷೆ. 'ಸ್ವಾಮಿ ನಾಳೆ ಪರೀಕ್ಷೆ ಬರೆಯಬೇಕಾಗಿದೆ. ಹಾಗಾಗಿ ರಜೆ ಕೊಡಿ' ಎಂದು ತಮ್ಮ ಮೇಲಧಿಕಾರಿ ಇನ್ಸ್ ಪೆಕ್ಟರ್ ಜಗದೀಶರನ್ನು ಕೇಳಿಕೊಂಡಿದ್ದಾನೆ. ಆದರೆ ಆಯಪ್ಪ ಒಪ್ಪಿಲ್ಲ.
ಅದಕ್ಕೇ ಅನಿಲ ಏನು ಮಾಡಿದನೆಂದರೆ ಬೇತಮಂಗಲದಲ್ಲಿರುವ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ನಿದ್ದೆ ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿದೆ. ಅನಿಲ್ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಈ ಪೊಲೀಸ್ ಅಧಿಕಾರಿಗಳಿಗೆ ಯಾವಾಗ ಬುದ್ಧಿಬರುತ್ತದೋ...?












Click it and Unblock the Notifications