ಹುಷಾರು, ಟೈಗರ್ ಅಶೋಕ್ ಕೈಯಲ್ಲಿದೆ ರಿವಾಲ್ವರು!

bb-ashok-kumar-needs-protection-bng-police-yet-to-yeild
ಬೆಂಗಳೂರು, ಫೆ.20: ಬಿಬಿ ಅಶೋಕ್ ಕುಮಾರ್ ... ಒಂದು ಕಾಲದಲ್ಲಿ ಈ ಹೆಸರು ಕೇಳಿಯೇ ಅಪರಾಧಿಗಳ ಚಡ್ಡಿ ಒದ್ದೆಯಾಗುತ್ತಿತ್ತು. ಅಶೋಕ್ ಕುಮಾರ್ ಅಲಿಯಾಸ್ ಟೈಗರ್ ಎಂಬ ಆ ಖಡಕ್ ಪೊಲೀಸ್ ಅಧಿಕಾರಿಗೆ ನಿವೃತ್ತಿಯಾದ ಮೇಲೆ ತಮ್ಮ ರಕ್ಷಣೆಗಾಗಿಯೇ ಪೊಲೀಸ್ ಕಚೇರಿಗಳನ್ನು ಅಲೆಯುವಂತಾಗಿದೆ. ಈ ಮಧ್ಯೆ 'ಯಾವುದಕ್ಕೇ ಆಗಲಿ ಕಿಸೆಯಲ್ಲಿ ಅದಿರಲಿ' ಅಂತ ಪರವಾನಗಿ ಪಡೆದಿರುವ ರಿವಾಲ್ವರ್ ಒಂದನ್ನು ಅಶೋಕ್ ಇಟ್ಟುಕೊಂಡಿದ್ದಾರೆ.

ಪ್ರಾಣ ಒತ್ತೆಯಿಟ್ಟು ತಮ್ಮ ಇಲಾಖೆಗಾಗಿ ದುಡಿದ ನಿಷ್ಠಾವಂತ ಅಧಿಕಾರಿಯನ್ನು ರಕ್ಷಿಸಿಕೊಳ್ಳುವಲ್ಲಿ ಪೊಲೀಸರಿಗೆ ಎಂದಿನ ಅಸಡ್ಡೆ/ಆಲಕ್ಷ್ಯ. ತನಗೆ ಜೀವ ಬೆದರಿಕೆ ಇದೆ ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ (ACP) ಬಿಬಿ ಅಶೋಕ್ ಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ ಇಲಾಖೆ ಇದುವರೆಗೂ ಕ್ಯಾರೇ ಅಂದಿಲ್ಲ.

ಇತ್ತೀಚೆಗೆ ರೌಡಿಗಳು ಮತ್ತು ಭೂಗತ ಪಾತಕಿಗಳ ಮೊಬೈಲ್ ಮಾತುಕತೆಯನ್ನು ಆಲಿಸಿದ್ದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಶೋಕ್ ಕುಮಾರ್ ಪ್ರಾಣಕ್ಕೆ ಸಂಚಕಾರವಿರುವುದಾಗಿ ತಿಳಿಸಿದ್ದರು.

'ಕೊಡಗಿನ ಕಲಿ ಅಶೋಕ್ ಕುಮಾರ್ ಸೇವೆಯಲ್ಲಿದ್ದಾಗ ಅವರಿಂದ ತಾನು ತೊಂದರೆಗೊಳಗಾಗಿದ್ದೆ. ಅದಕ್ಕೆ ಸೇಡು ತೀರಿಸಿಕೊಳ್ಳಬೇಕು' ಎಂದು ರೌಡಿಯೊಬ್ಬ ಹೇಳಿದ್ದನ್ನು ಆ ಅಧಿಕಾರಿ ಕೇಳಿಸಿಕೊಂಡು, ಅದನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಕಿವಿಗೆ ಹಾಕಿದ್ದರು. ತಕ್ಷಣ ಎಚ್ಚೆತ್ತ ಅಶೋಕ್ ಕುಮಾರ್ ತಮ್ಮ ರಕ್ಷಣೆಯ ಕಡೆ ಗಮನಹರಿಸಿದರು.

'ಜೀವ ಬೆದರಿಕೆ ಕುರಿತು ನಮ್ಮ ಬಾತ್ಮಿದಾರರಿಂದ ಮಾಹಿತಿ ಬಂದಿದೆ. ತಮಗೆ ಪೊಲೀಸ್ ಪ್ರೊಟೆಕ್ಷನ್ ನೀಡಬೇಕು' ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಮತ್ತು ರಾಜ್ಯ ಗುಪ್ತದಳದ ಐಜಿಪಿ ಗೋಪಾಲ್ ಹೊಸೂರ್ ಅವರನ್ನು ಫೆ. 5ರಂದು ಭೇಟಿ ಮಾಡಿ, ಅಶೋಕ್ ಮನವಿ ಮಾಡಿಕೊಂಡರು.

ಆದರೆ ಇಬ್ಬರೂ ಇದುವರೆಗೂ ಆ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇಲಾಖೆಗೆ ಅಂಟಿರುವ ಉದಾಸೀನತೆ/ನಿರ್ಲಕ್ಷ್ಯ ಇಲ್ಲೂ ಢಾಳಾಗಿ ಪ್ರದರ್ಶನಗೊಂಡಿದೆ. TC Ashokji!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+