ಈ ವರ್ಷದ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು

Kodimath Seer
ಕೊಪ್ಪಳ, ಫೆ. 18 : ವಿವಿಧ ಕ್ಷೇತ್ರಗಳ ಭವಿಷ್ಯ ನುಡಿಯುವ ಸ್ವಾಮೀಜಿಯಾಗಿಯೇ ಪ್ರಸಿದ್ಧಿ ಪಡೆದಿರುವ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಈ ವರ್ಷದ ಭವಿಷ್ಯ ಹೇಳಿದ್ದಾರೆ. ಕೊಪ್ಪಳದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ರಾಜಕೀಯ, ಸಾಮಾಜಿಕ ಕ್ಷೇತ್ರಗಳ ವಿವಿಧ ವಿದ್ಯಮಾನಗಳ ಕುರಿತು ತಮ್ಮ ಭವಿಷ್ಯ ನುಡಿದಿದ್ದಾರೆ.

ರಾಜಕೀಯ ಕ್ಷೇತ್ರದ ಬಗ್ಗೆ ಸ್ವಾಮೀಗಳು ಹೇಳುವ ಭವಿಷ್ಯ ಬಹುತೇಕ ನಿಜವಾಗಿವೆ. 2013ರಲ್ಲಿಯೂ ರಾಜಕೀಯ ಅಸ್ಥಿರತೆ ಮುಂದುವರೆಯಲಿದೆ. ಯಾವ ಪಕ್ಷಗಳು ಅಧಿಕಾರಕ್ಕೆ ಬಂದರೂ ಸುಲಭವಾಗಿ ಆಡಳಿತ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಜನಪ್ರತಿನಿಧಿಗಳ ಆಟಾಟೋಪ ಕಂಡು ಜನರು ಹತಾಶರಾಗಿದ್ದಾರೆ. ಆದರೆ, ರಾಜಕೀಯ ನಾಯಕರನ್ನು ದಾರಿಗೆ ತರುವಷ್ಟು ಅವರು ಬುದ್ಧಿವಂತರಾಗಿದ್ದಾರೆ. ಚುನಾವಣಾ ವೇಳೆಯಲ್ಲಿ ಅವರು ತಮ್ಮ ನಿರ್ಧಾರ ತಿಳಿಸಲಿದ್ದಾರೆ. ಜನರ ದೃಢ ನಿರ್ಧಾರದಿಂದಾಗಿ ಈ ಬಾರಿಯೂ ರಾಜಕೀಯ ಅಸ್ಥಿರತೆ ಉಂಟಾಗಲಿದೆ ಎಂದಿದ್ದಾರೆ.

ರಾಜ್ಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯ ಬಗ್ಗೆಯೂ ಮಾತನಾಡಿದ ಅವರು, 2 ವರ್ಷಗಳ ಸತತ ಬರಗಾಲದಿಂದ ತತ್ತರಿಸುವ ರಾಜ್ಯದಲ್ಲಿ ಈ ಬಾರಿ ಅಕಾಲಿಕ ಮಳೆ ಬೀಳಲಿದೆ. ಹಲವೆಡೆ ಅಕಾಲಿಕ ಮಳೆ ಸುರಿದು ನೈಸರ್ಗಿಕ ವೈಪರಿತ್ಯ ಉಂಟಾಗಲಿದೆ ಎಂದರು.

ಇದರಿಂದಾಗಿ ಪ್ರಾಕೃತಿಕ ಸಮತೋಲನ ಹದಗೆಡಲಿದ್ದು, ಪ್ರಕೃತಿ ವಿಕೋಪಗಳು ಹೆಚ್ಚಾಗಿ ಸಂಭವಿಸಬಹುದು ಎಂದು ಸ್ವಾಮೀಜಿ ಹೇಳಿದ್ದಾರೆ. 2012ರಲ್ಲಿ ಸ್ವಾಮೀಜಿ ಹೇಳಿದ ಹಲವಾರು ಸಂಗತಿಗಳು ಸತ್ಯವಾಗಿದ್ದವು. ಈ ಬಾರಿ ಹೇಳಿರುವ ಭವಿಷ್ಯ ಏನಾಗಲಿದೆ ಎಂದು ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+