ಉ. ಪ್ರದೇಶದಿಂದ ಪ್ರಧಾನಿ ಅಭ್ಯರ್ಥಿ ಮೋದಿ ಸ್ಪರ್ಧೆ

modi-successor-to-ab-vajpayee-may-contest-from-up
ಕಾನ್ಪುರ, ಫೆ.12‌: ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಶತಾಯಗತಾಯ ಭಾರತದ ಮುಂದಿನ ಪ್ರಧಾನಿಯನ್ನಾಗಿಸಲು ಬಿಜೆಪಿ ಕೂಟ ಸರ್ವಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಒಂದೊಂದೇ ಸಾಧ್ಯತೆ/ಅವಕಾಶವನ್ನು ಮೋದಿ ಮೇಲೆ ಪ್ರಯೋಗಿಸಲು ಅಣಿಯಾಗುತ್ತಿದೆ.

ಮೋದಿ ಸದ್ಯಕ್ಕೆ ಗುಜರಾತಿಗೆ ಸೀಮಿತವಾಗಿದ್ದಾರೆ. ಅವರು ಅಲ್ಲಿಯೇ ಇದ್ದುಬಿಟ್ಟರೆ ರಾಷ್ಟ್ರಮಟ್ಟದ ನಾಯಕ ಎಂದು ಪ್ರತಿಬಿಂಬಿಸಲು ತೊಡಕಾಗುತ್ತದೆ. ಹಾಗಾಗಿ ಬೇರೆ ರಾಜ್ಯಗಳಲ್ಲೂ ಅವರ ಇರುವನ್ನು ಸಾಬೀತುಪಡಿಸಬೇಕು ಎಂದು ಬಿಜೆಪಿ ಮುಂದಾಲೋಚನೆಯಲ್ಲಿ ತೊಡಗಿದೆ.

ಹಾಗೆಂದೇ 2014ರ ಸಾರ್ವತ್ರಿಕ ಚುನಾವಣೆಗೆ ಮೋದಿಯನ್ನು ರಾಜಕೀಯವಾಗಿ ಪ್ರಧಾನ ಪಾತ್ರ ನಿರ್ವಹಿಸುವ ಉತ್ತರಪ್ರದೇಶದಿಂದ ಕಣಕ್ಕಿಳಿಸುವ ಸಾಧ್ಯತೆಯ ಬಗ್ಗೆ ಮಾತನಾಡಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮೋದಿ ಲಖ್ನೋ ಅಥವಾ ಫೈಜಾಬಾದ್ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಲಕ್ಷಣಗಳಿವೆ.

ಮೋದಿ ವಾಜಪೇಯಿ ಉತ್ತರಾಧಿಕಾರಿ: ಬಿಜೆಪಿ ಸಂಸದೀಯ ಮಂಡಳಿ ಇಂತಹ ನಿಲುವನ್ನು ತಳೆದಿದ್ದು, ಮೋದಿಯನ್ನು ಉತ್ತರಪ್ರದೇಶದಿಂದ ಕಣಕ್ಕಿಳಿಸುವ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದೆ. ಇದು ಅತ್ಯಂತ ಸಮಂಜಸ ಕ್ರಮವಾದೀತು ಎಂದು ಗುಜರಾತ್ ಬಿಜೆಪಿ ಘಟಕದ ಕಾರ್ಯದರ್ಶಿ ರಾಜೇಶ್ ಪಟೇಲ್ ಕಾನ್ಪುರದಲ್ಲಿ ಹೇಳಿದ್ದಾರೆ.

ಮೋದಿಯನ್ನು ಉತ್ತರಪ್ರದೇಶದಿಂದ ಕಣಕ್ಕಿಳಿಸುವುದರಿಂದ ಬಿಜೆಪಿ ವತಿಯಿಂದ ಸಕಾರಾತ್ಮಕ ಸಂದೇಶ ರವಾನೆಯಾದಂತಾಗುತ್ತದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅತ್ಯಂತ ಸೂಕ್ತ ಉತ್ತರಾಧಿಕಾರಿಯಾಗುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+