ವೀರಸೇನಾನಿ ನಾಡಿನಲ್ಲಿ ಕನ್ನಡ ಸೇನಾನಿಗಳ ಕಲರವ

ಮತ್ತು, ಆ ಸಮ್ಮೇಳಮದ ಅಧ್ಯಕ್ಷತೆಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಎಂಎಂ ಕಲ್ಬುರ್ಗಿ ಅವರು ವಹಿಸುವುದು ಬಹುತೇಕ ಖಚಿತವಾಗಿದೆ.
80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸಿಕೊಳ್ಳಲು ಕೊಡಗು, ಬಳ್ಳಾರಿ, ಹಾವೇರಿ, ಮಂಡ್ಯ ಮತ್ತು7 ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಮನವಿ ಸಲ್ಲಿಸಿದ್ದವು. ಪ್ರಸ್ತುತ ಬಿಜಾಪುರದಲ್ಲಿ ನಡೆಯುತ್ತಿರುವ 79ನೇ ಸಮ್ಮೇಳನಕ್ಕೆ ಇಂದು ತೆರೆಬೀಳಲಿದೆ.
ಮುಂದಿನ ಸಮ್ಮೇಳನ ಇಲ್ಲಿ ನಡೆಯಬೇಕು ಎಂದು ನಿರ್ಣಯಿಸಲು ಸಂಪ್ರದಾಯದಂತೆ ಮುನ್ನಾ ದಿನವಾದ ನಿನ್ನೆ ಭಾನುವಾರ ಇಲ್ಲಿ ಸಭೆ ನಡೆಯಿತು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಹಸ್ಯ ಮತದಾನದ ಮೂಲಕ ಕೊಡಗು ಜಿಲ್ಲೆಗೆ ಆತಿಥ್ಯ ಒಲಿಯಿತು.
ಒಟ್ಟು 41 ಮತಗಳ ಪೈಕಿ ಕೊಡಗು ಜಿಲ್ಲೆಗೆ 27 ಮತ ಲಭಿಸಿದೆ. ಹಾವೇರಿ ಜಿಲ್ಲೆಯಲ್ಲಿ ಈ ಸಮ್ಮೇಳನ ನಡೆಸಬೇಕು ಎಂಬುದು ಆ ಭಾಗದ ಜನ ಮತ್ತು ಕಸಾಪ ಪ್ರತಿನಿಧಿಗಳ ಒತ್ತಡವಾಗಿತ್ತು. ಬಿಜಾಪುರ ಮತ್ತು ಗಂಗಾಔತಿಯಲ್ಲಿ ಈ ಹಿಂದಿನ ಸಮ್ಮೇಳನಗಳು ನಡೆದಿರುವುದರಿಂದ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಕನ್ನಡ ಜಾತ್ರೆಯನ್ನು ನಡೆಸಲು ಕಸಾಪ ನಿರ್ಣಯ ಕೈಗೊಂಡಿತು.
ಇನ್ನು ಸಂಭಾವ್ಯ ಅಧ್ಯಕ್ಷ ಡಾ. ಎಂಎಂ ಕಲ್ಬುರ್ಗಿ ಅವರು ಬಿಜಾಪುರದ ಆದಿಲ್ ಶಾಹಿಗಳ ಕಾಲದಲ್ಲಿ ರಚಿತಗೊಂಡ ಸಮಗ್ರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದು, ಕನ್ನಡ ಸೇವೆಯಲ್ಲಿ ತಮ್ಮನ್ನು ಅಪಾರವಾಗಿ ಗುರುತಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ಅವರದೇ ನಾಡಿದಲ್ಲಿ ಪ್ರಸ್ತುತ ನಡೆಯುತ್ತಿರುವ ಸಮ್ಮೇಳನದಲ್ಲಿ ಅಧ್ಯಕ್ಷ ಗೌರವ ಅವರಿಗೇ ಪ್ರಾಪ್ತಿಯಾಗುವುದು ಬಹುತೇಕ ಖಚಿತವಾಗಿತ್ತು, ಆದರೆ ರಾಜಕೀಯ ಕಾರಣಗಳಿಗಾಗಿ ಆ ಗೌರವ ಅವರ ಕೈತಪ್ಪಿತ್ತು.












Click it and Unblock the Notifications