ಬ್ಯಾಂಕ್ ಉದ್ಯೋಗಿ ರುಪಾಲಿ ಕೊಂದಿದ್ದು ಅವನಲ್ಲ?

ಕಾಟನ್‌ಪೇಟೆಯ ಓಟಿಸಿ ರಸ್ತೆ ಯುಜಿ ರೀಗಲ್ ವಸತಿಗೃಹದಲ್ಲಿ ಬುಧವಾರ (ಫೆ.6) 25 ವರ್ಷದ ರೂಪಾಲಿ ಮಿಶ್ರಾ ದೇಹ ಗುರುತಿಸಲಾರದಷ್ಟು ಕೊಚ್ಚಿ ಹಾಕಲಾಗಿತ್ತು.ಪೊಲೀಸರ ಮೊದಲ ಅನುಮಾನ ರೂಪಾಲಿಳ ಗೆಳೆಯ ಸಂತೋಷ್ ಕುಮಾರ್ ಯಾದವ್ ಮೇಲೆ ತಿರುಗಿತ್ತು. ಆದರೆ, ಈಗ ಕೊಲೆ ನಡೆಸಿದ್ದರಲ್ಲಿ ಮಹಿಳೆಯೊಬ್ಬರ ಕೈವಾಡ ಇರುವುದಕ್ಕೆ ಬಲವಾದ ಸಾಕ್ಷಿ ಸಿಕ್ಕಿದೆ.
ಸಂತೋಷ್ ಕುಮಾರ್ ಕಾಟನ್ ಪೇಟೆಯಿಂದ ಕಲಾಸಿಪಾಳ್ಯದ ಗಲ್ಲಿಯೊಂದರಲ್ಲಿರುವ ಲಾಡ್ಜ್ ನಲ್ಲಿ ತಂಗಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಲಾಸಿಪಾಳ್ಯದಲ್ಲಿ ಉಳಿದುಕೊಂಡಿದ್ದ ಸಂತೋಷ್ ಅಲ್ಲಿ ಕೊಲೆಗೆ ಬಳಸಿದ ಚಾಕು ಹಾಗೂ ಕರವಸ್ತ್ರವನ್ನು ಮರೆತು ಹೋಗಿದ್ದಾನೆ. ಎಂದಿದ್ದ ಕಾಟನ್ ಪೇಟೆ ಪೊಲೀಸರಿಗೆ ಸಂತೋಷ್ ಜೊತೆ ಇನ್ನೊಬ್ಬ ಮಹಿಳೆ ಇರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದು ಬಂದಿದೆ.
ಬಹುಶಃ ಆ ನಿಗೂಢ ಮಹಿಳೆ ಸಂತೋಷ್ ಹಾಗೂ ರೂಪಾಲಿ ಇಬ್ಬರಿಗೂ ಕಾಮನ್ ಫ್ರೆಂಡ್ ಆಗಿರುವ ಸಾಧ್ಯತೆಯಿದೆ. ಮೂವರು ಕಾಟನ್ ಪೇಟೆ ವಸತಿಗೃಹಕ್ಕೆ ಬಂದಿದ್ದಾರೆ. ರೂಪಾಲಿ ಹಾಗೂ ಸಂತೋಷ್ ಲಾಂಜ್ ದಾಟುತ್ತಿದ್ದಂತೆ ಮೂರನೇ ವ್ಯಕ್ತಿ ಅಲ್ಲಿಂದ ಕಣ್ಮರೆಯಾಗಿರುವುದು ಕಂಡು ಬಂದಿದೆ.
ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿ ಕೈವಾಡದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮಹಿಳೆಯನ್ನು ಟ್ರ್ಯಾಕ್ ಮಾಡಲಾಗುತ್ತಿದ್ದು, ಇಷ್ಟರಲ್ಲೇ ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕಾಟನ್ ಪೇಟೆ ಪೊಲೀಸರು ಹೇಳಿದ್ದಾರೆ.
ಈ ನಡುವೆ ರೂಪಾಲಿ ಶವವನ್ನು ಆಕೆಯ ಮನೆಯವರಿಗೆ ಹಸ್ತಾಂತರಿಸಲಾಗಿದೆ. ಛಿದ್ರ ಛಿದ್ರವಾದ ದೇಹ ಕಂಡ ರೂಪಾಲಿ ಮನೆಯವರ ರೋದನ ಮುಗಿಲು ಮುಟ್ಟಿದೆ. ಕಾನ್ ಪುರ ಮೂಲದ ಮಧ್ಯಮ ವರ್ಗದ ಮನೆಯಿಂದ ಉದ್ಯೋಗಾರ್ಥಿಯಾಗಿ ಬೆಂಗಳೂರಿನಲ್ಲಿದ್ದ ರೂಪಾಲಿ ದುರಂತ ಅಂತ್ಯದ ಕಥೆ ಕೇಳಿ ಆಕೆ ಊರಿನವರು ಕೊರಗಿದ್ದಾರೆ.
ಯುಜಿ ರೀಗಲ್ ವಸತಿಗೃಹದ ಕೊಠಡಿ ಸಂಖ್ಯೆ 265 ರಲ್ಲಿ ಹೆಣವಾಗಿ ಮಲಗಿದ್ದ ರೂಪಾಲಿ ದೇಹದ ಮೇಲೆ ಸುಮಾರು 10 ಕಡೆ ಇರಿತ, ಕೊಲೆಗೂ ಮುನ್ನ ಬಲವಂತವಾಗಿ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿತ್ತು. ಮೃತದೇಹವನ್ನು ಲಾಡ್ಜಿನಿಂದ ಹೊರಗೆ ಸಾಗಿಸಲಾಗದಷ್ಟು ಕೊಳತೆ ಹೋಗಿದ್ದರಿಂದ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಪರೀಕ್ಷೆ ನಡೆಸಬೇಕಾಗಿತ್ತು.












Click it and Unblock the Notifications