ರೇಪಿಸ್ಟುಗಳ ರಾಜಧಾನಿ ಬೆಂಗಳೂರಿಗೆ ತೃತೀಯ ಸ್ಥಾನ

ಬೆಂಗಳೂರು, ಫೆ.6: ಮೊನ್ನೆ ರಾತ್ರಿ ತಾವರೆಕೆರೆಯ ಬಟಾಬಯಲಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಅನ್ನು ಇನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲವಾದರೂ ಕರ್ನಾಟಕದ ರಾಜಧಾನಿ ಪೈಶಾಚಿಕ ರೇಪಿಸ್ಟುಗಳಿಗೆ ಪ್ರಶಸ್ತ ತಾಣ ಎಂಬುದು ದೃಢಪಟ್ಟಿದೆ. ಕೆಳಗಿನ ಚಿತ್ರವೇ ಎಲ್ಲವನ್ನೂ ಹೇಳುತ್ತಿದೆ.

ಕೇಂದ್ರ ಗೃಹ ಸಚಿವಾಲಯದ ತಾಜಾ ವರದಿಯ ಪ್ರಕಾರ ಭಾರತೀಯ ದಂಡ ಸಂಹಿತೆಯಡಿ ದಾಖಲಾದ ಪ್ರಕರಣಗಳನ್ನು ಗಣನೆಗೆ ತೆಗೆದುಕೊಂಡಾಗ ಬೆಂಗಳೂರು 3ನೆಯ ಸ್ಥಾನ ದಕ್ಕಿಸಿಕೊಂಡಿದೆ. ಒಟ್ಟು ಅತ್ಯಾಚಾರ ಪ್ರಕರಣಗಳಲ್ಲಿ ದೆಹಲಿ ಅಗ್ರ ಸ್ಥಾನ ಅಲಂಕರಿಸಿದೆ (ಇದರಲ್ಲಿ, ಇತ್ತೀಚೆಗೆ ಫಿಸಿಯೋಥೆರಪಿಸ್ಟ್ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್- ಹತ್ಯೆ ಪ್ರಕರಣ ಸೇರಿಲ್ಲ).

2009ರಿಂದ 2011ರ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ 6 ಪ್ರಮುಖ ಪ್ರಮುಖ ನಗರಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಗೃಹ ಸಚಿವಾಲಯ ಬಿಡುಗಡೆ ಮಾಡಿದೆ. ಅದರಲ್ಲಿ ವಾಣಿಜ್ಯ ರಾಜಧಾನಿ ಮುಂಬೈ 2ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ರಾಜಧಾನಿ ನಗರಗಳು ಕೂಡಾ ಮಹಿಳೆಯರಿಗೆ ಸುರಕ್ಷಿತವಾಗಿ ಉಳಿದಿಲ್ಲ ಎಂಬುದು ಸಾಬೀತಾಗಿದೆ.

molestation-cases-under-ipc-home-ministry-banglore-no-3

ಐಪಿಸಿ ಕಾಯ್ದೆಯಡಿ 2009-11ರ ಅವಧಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೀಗಿದೆ.
ನಗರ - ಇಸ್ವಿ -2009 -2010 -2011

ದೆಹಲಿ - 404 - 414 - 453
ಮುಂಬೈ - 182 - 194 - 221
ಬೆಂಗಳೂರು - 65 - 65 - 97
ಚೆನ್ನೈ - 39 - 47 - 76
ಹೈದರಾಬಾದ್‌ - 47 - 45 - 59
ಕೊಲ್ಕತಾ - 42 - 32 - 46

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+