ಭಾನುವಾರದ ಸ್ಪೆಷಲ್ ಗೆ ಬ್ರೇಕ್ ಹಾಕಿದ ಈರುಳ್ಳಿ

Onion price rise
ಬೆಂಗಳೂರು, ಫೆ.3: ಭಾನುವಾರ ಬಂತೆಂದರೆ ಎಲ್ಲರ ಮನೆಯಲ್ಲಿ ಏನೋ ಒಂದು ಸ್ಪೆಷಲ್ ಇದ್ದೇ ಇರುತ್ತದೆ. ಸರಿ ಮಾರುಕಟ್ಟೆಗೆ ಹೋಗಿ ಈರುಳ್ಳಿ ತರೋಣ ಎಂದು ಹೊರಟವರಿಗೆ ಶಾಕ್ ಕಾದಿದೆ. ಈರುಳ್ಳಿ ಬೆಲೆ ಸುಡುವಂತಿದೆ. ಮೀಡಿಯಂ ಸೈಜ್ ಈರುಳ್ಳಿ ಬೆಲೆ ಕೇಳಿದರೆ ಈರುಳ್ಳಿ ತಗೊಳ್ಳೇದೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತೀರ.

ಆದರೆ ಈರುಳ್ಳಿ ಇಲ್ಲದೆ ಯಾವ ಅಡುಗೆ ಮಾಡಲು ಸಾಧ್ಯ. ಎಷ್ಟೇ ಸಿಂಗಪಲ್ಲಾಗಿ ಏನೋ ಒಂದು ಅಡುಗೆ ಮಾಡೋಣ ಎಂದರೂ ಈರುಳ್ಳಿ, ಟೊಮೆಟೋ ಬೇಕೆ ಬೇಕು. ಇವರೆಡೂ ತರಕಾರಿಗಳು ಅಡುಗೆಗೆ ಇದ್ದರೇನೆ ಕೈ ಓಡುವುದು. ಈರುಳ್ಳಿ ಕೆ.ಜಿಗೆ ರು.30 ರಿಂದ ರು.35 ಇದೆ.

ಹಾಪ್ ಕಾಮ್ಸ್ ನಲ್ಲಿ ಮಧ್ಯಮ ಗಾತ್ರದ ಈರುಳ್ಳಿ ಬೆಲೆ ರು.33. ಈರುಳ್ಳಿ ಬೆಲೆ ಕೇಳಿದರೆ ಸಿಂಪಲ್ಲಾಗಿ ರಸಂ ಮಾಡಿಕೊಂಡು ತಿನ್ನುವುದು ಕಷ್ಟ. ಭಾನುವಾರ ಎಂದರೆ ಸ್ಪೈಸಿ ಅಡುಗೆ ಮಾಡುವವರೆ ಅಧಿಕ. ಆದರೆ ಈರುಳ್ಳಿ ಬೆಲೆ ಹೆಚ್ಚಿರುವುದು ನಿಜಕ್ಕೂ ಭಾನುವಾರದ ಸಂಭ್ರಮಕ್ಕೆ ತಣ್ಣೀರೆರಚಿದೆ.

ರಾಜ್ಯದಲ್ಲಿ ಮಳೆ ಕೈಕೊಟ್ಟಿರುವುದು, ಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಕಾರಣ. ಆದರೆ ಈರುಳ್ಳಿ ಬೆಳೆಗಾರನಿಗೇನಾದರೂ ಲಾಭ ಆಗಿದೆಯೇ ಎಂದರೆ. ಅದೂ ಇಲ್ಲ. ಈರುಳ್ಳಿ ಧಾರಣೆ ಕೆ.ಜಿಗೆ ರು.40ರ ಮೇಲೆ ದಾಟಿದರೆ ಆಗ ಒಂಚೂರು ಜೇಬಿಗೆ ಹಣ ಬರಬಹುದು. ಈಗ ಏನಿದ್ದರೂ ಹಾಕಿದ ಬಂಡವಾಳ ಬಂದಿದೆ ಅಷ್ಟೇ ಎನ್ನುತ್ತಾರೆ ರೈತರು.

ರಾಜ್ಯದ ಬೆಳಗಾವಿ, ಗದಗ, ಹುಬ್ಬಳ್ಳಿ, ಧಾರವಾಡ, ವಿಜಾಪುರ, ರಾಯಚೂರು, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಆದರೆ ಇಳುವರಿ ಕುಸಿದ ಕಾರಣ ಉತ್ಪಾದನೆ ಕುಸಿದಿದೆ. ಮಹಾರಾಷ್ಟ್ರದಿಂದ ಸರಬರಾಜಾಗುತ್ತಿದ್ದ ಈರುಳ್ಳಿ ನಿಂತಿದೆ. ಈ ಎಲ್ಲಾ ಕಾರಣಗಳ ಪರಿಣಾಮ ಗ್ರಾಹಕರ ಕಣ್ಣಲ್ಲಿ ನೀರು ಬರುವಂತಾಗಿದೆ. ಬೆಲೆ ಹೀಗೇ ಮುಂದುವರಿದರೆ ಕಣ್ಣೀರು ರಕ್ತಕಣ್ಣೀರಾಗುವ ಸಾಧ್ಯತೆಗಳಿವೆ. ಸರ್ಕಾರ ಈ ಬಗ್ಗೆ ಆದಷ್ಟು ಬೇಗ ಗಮನಹರಿಸಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+