60ರ ಮುದುಕನಿಂದ 19ರ ಯುವತಿಯ ಅತ್ಯಾಚಾರ

Sixty year old abuses Nineteen year old girl
ಬಳ್ಳಾರಿ, ಫೆ. 3 : ತನ್ನ ಮಗಳ ವಯಸ್ಸಿನ 19 ವರ್ಷದ ಯುವತಿಯನ್ನು 60 ವರ್ಷದ ಮುದುಕನೊಬ್ಬ ಅತ್ಯಾಚಾರ ಮಾಡಿ ನಿರ್ಜನ ರಸ್ತೆಯಲ್ಲಿ ಬಿಸಾಕಿಹೋದ ಆಘಾತಕಾರಿ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದ್ದು, ಎರಡು ದಿನಗಳ ನಂತರ ಯುವತಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ.

ಅತ್ಯಾಚಾರಕ್ಕೊಳಗಾದ ನಂತರ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಯುವತಿಯನ್ನು ಎರಡು ದಿನಗಳ ನಂತರ ರಕ್ಷಿಸಲಾಗಿದ್ದು, ಆಕೆಗೆ ಪ್ರಜ್ಞೆ ಇನ್ನೂ ಮರಳಿಲ್ಲ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಯುವತಿಯ ಪಾಲಕರು ನೀಡಿರುವ ದೂರಿನ ಆಧಾರದ ಮೇಲೆ ಹಗರಿಬೊಮ್ಮನಹಳ್ಳಿಯ ಕಾಂಟ್ರಾಕ್ಟರ್ ಅಬೂಬಕರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅದೇ ಗ್ರಾಮದ ಯುವತಿಯನ್ನು ಅಪಹರಿಸಿದ ಅಬೂಬಕರ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ನಿರ್ಜನ ಸ್ಥಳದಲ್ಲಿ ಬಿಸಾಕಿ ಪರಾರಿಯಾಗಿದ್ದಾನೆ. ಸಾರ್ವಜನಿಕರು ಆಕೆಯನ್ನು ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಸಾವಿಗೀಡಾದರೆ ಅಥವಾ ಕೋಮಾಗೆ ಜಾರಿದರೆ ನಿರ್ದಾಕ್ಷಿಣ್ಯವಾಗಿ ಮರಣದಂಡನೆ ಶಿಕ್ಷೆಗೊಳಪಡಿಸಬೇಕೆಂಬ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಆ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿಯೂ ಆಗಿದೆ. ಸಂಸತ್ತಿನಲ್ಲಿ ಈ ಸುಗ್ರೀವಾಜ್ಞೆಗೆ ಸಂಸತ್ತಿನಲ್ಲಿ ಅಂಕಿತ ದೊರೆಯುವುದೊಂದು ಬಾಕಿಯಿದೆ.

ದೇಶದಲ್ಲಿ ಇಷ್ಟೆಲ್ಲ ನಡೆಯುತ್ತಿದೆ, ಅತ್ಯಾಚಾರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು ಎಂದು ಈ ಅರವತ್ತು ವರ್ಷದ ಹಗರಿಬೊಮ್ಮನಹಳ್ಳಿಯ ಮುದುಕನಿಗೆ ಗೊತ್ತಾಗುವುದಾದರೂ ಹೇಗೆ? ಮಗಳ ವಯಸ್ಸಿನ 19 ವರ್ಷದ ಯುವತಿಯನ್ನು ಅತ್ಯಾಚಾರಕ್ಕೊಳಪಡಿಸಿ, ಹಣ್ಣುತಿಂದು ಬಿಸಾಡಿದ ಸಿಪ್ಪೆಯಂತೆ ರಸ್ತೆಯಲ್ಲಿ ಆಕೆಯನ್ನು ಬಿಸಾಡಿದ ಈ ದುರುಳ ಎಂಥ ಶಿಕ್ಷೆಗೆ ಅರ್ಹ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+