ಯಡಿಯೂರಪ್ಪ ಸುತ್ತ ಮತ್ತೊಂದು ಭೂಹಗರಣದ ಹುತ್ತ

ಭೂಮಿ ಯಾವುದು?: ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿಯ ವಾರ್ಡ್ ನಂ 98, ಸರ್ವೇ ನಂ 251ರಲ್ಲಿ ಸಾರ್ವಜನಿಕ ಆಸ್ಪತ್ರೆ, ಪಾರ್ಕ್ ಮತ್ತು ಪೊಲೀಸ್ ಠಾಣೆಗಾಗಿ ಮೀಸಲಿಟ್ಟಿದ್ದ 5 ಎಕರೆ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ.
ಹಿಂದಿನ ಮೂವರು ಸಿಎಂಗಳು ಬಿಡಿಎ ಪರವಾಗಿ ಡಿನೋಟಿಫಿಕೇಶನ್ ಮಾಡಿ ಎಂದಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗೆ 'ನೆರವಾಗಲು' ಮುಖ್ಯಮಂತ್ರಿ ಯಡಿಯೂರಪ್ಪ ಅದನ್ನು ಬಿಡಿಎ ಪರ ಭೂಸ್ವಾಧೀನ ಪ್ರಕ್ರಿಯೆಗೊಳಪಡಿಸದೆ, ಅಪರಾಧವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
1994ರಲ್ಲಿ ಮೊದಲಿಗೆ 6 ಎಕರೆ 16 ಗುಂಟೆ ಭೂಮಿಯನ್ನು ಬಿಡಿಎ ಸ್ವಾಧೀನಪಡಿಸಿಕೊಂಡು ನಿವೇಶನದ ಅಭಿವೃದ್ಧಿಗಾಗಿ 30 ಲಕ್ಷ ರೂ. ವ್ಯಯಿಸಿದೆ. ಆ ನಂತರ ಅದೇ ವರ್ಷ ರತ್ಮಮ್ಮ ಮತ್ತು ಆನಂದ್ ಎಂಬವರು ಶಾಲೆ ನಿರ್ಮಾಣಕ್ಕಾಗಿ ಈ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂದು ಸಲ್ಲಿಸಿದ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಜೆಎಚ್ ಪಟೇಲ್, ಎಸ್ಎಂ ಕೃಷ್ಣ , ಮತ್ತು ಎಚ್ ಡಿ ಕುಮಾರಸ್ವಾಮಿ ಅವರ ಬಳಿಗೆ ಬಂದ ಪ್ರಸ್ತಾವನೆಯನ್ನು ಮೂರೂ ಮುಖ್ಯಮಂತ್ರಿಗಳು ತಿರಸ್ಕರಿಸಿದ್ದಾರೆ.
ನಂತರ ಎಟಿ ರಾಮಸ್ವಾಮಿ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯನ್ವಯ ಸಿಟಿ ಸಿವಿಲ್ ನ್ಯಾಯಾಲಯ ಮೂಲ ದಾವೆ ಸಂಖ್ಯೆ: 4377/2008, 4378/2008ರ ದಾವೆಗಳ ಮೇಲೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ತಾತ್ಕಾಲಿಕ ಆದೇಶವನ್ನು ನೀಡಿದೆ. ನಂತರವೂ ಈ ಪ್ರಸ್ಥಾವನೆಯನ್ನು ಮುಖ್ಯಮಂತ್ರಿಯಾಗಿದ್ದ ಯಡಯೂರಪ್ಪ ಬಿಡಿಎ ಕಮೀಷನರ್ ಆಗಿದ್ದ ಸಿದ್ದಯ್ಯ ನೀಡಿದ ಎಲ್ಲ ಸೂಚನೆ, ಎಚ್ಚರಿಕೆಗಳನ್ನೂ ತಿರಸ್ಕರಿಸಿ 12-1-2010ರಂದು ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲು ಸೂಚಿಸಿದ್ದಾರೆ ಎಂದು ದೂರಲಾಗಿದೆ.
ಈ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಟ್ಟಿರುವುದರ ಹಿಂದೆ ಆರ್ ಅಶೋಕ್, ಶೋಭಾ ಕರಂದ್ಲಾಜೆ, ರಾಜಾರಾಜೇಶ್ವರಿ ನಗರದ ಶಾಸಕ ಶ್ರೀನಿವಾಸ್ ಮತ್ತಿತರರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವಿದೆ ಎಂದೂ ಅವರು ಆರೋಪಿಸಿದ್ದಾರೆ.












Click it and Unblock the Notifications