'ಏ ಮೇರೆ ವತನ್ ಕೆ ಲೋಗೋಂ'ಗೆ 50ರ ಪ್ರಾಯ!

ನವದೆಹಲಿ, ಜ.26: ದೇಶ ಗಣರಾಜ್ಯವಾಗಿ ಮಾರ್ಪಟ್ಟ 14 ವರ್ಷಗಳ ತರುವಾಯ ದಿವಿನಾದ ಜ. 27ರಂದು ದೀದಿ ಲತಾ ಮಂಗೇಶ್ಕರ್ ಅವರು ದೇಶವಾಸಿಗಳ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುವಂತಹ ಹಾಡೊಂದನ್ನು ಪ್ರಧಾನಿ ಜವಾಹರಲಾಲ ನೆಹರೂ ಅವರ ಸಮ್ಮುಖದಲ್ಲಿ ದೆಹಲಿಯ ಸ್ಟೇಡಿಯಂನಲ್ಲಿ ಸಾವಿರಾರು ಜನರೆದುರು ಸುಶ್ರಾವ್ಯವಾಗಿ ಹಾಡಿದ್ದರು. ಆ ಹಾಡಿಗೆ ಇಂದಿಗೆ ಸರಿಯಾಗಿ 50 ವರ್ಷ!

ಮುಂದೆ, ರಾಷ್ಟ್ರಗೀತೆಯಷ್ಟೇ ಜನಪ್ರಿಯವಾದ ಆ ಹಾಡು ಯಾವುದಪ್ಪಾ ಅಂದರೆ 'ಏ ಮೇರೆ ವತನ್ ಕೇ ಲೋಗೋಂ, ಝರಾ ಆಂಖ್ ಮೆ ಭರ್‌ಲೋ ಪಾನಿ...' ಈಗಲೂ ಅಷ್ಟೇ ಈ ಹಾಡು ಕಿವಿಗೆ ಬಿದ್ದಾಕ್ಷಣ ದೇಶಭಕ್ತರ ಕಣ್ಣಾಲಿಗಳು ತುಂಬಿಬರುತ್ತವೆ.

patriotic-song-ae-mere-watan-ke-50-yrs-lata-mangeshkar

ಈ ಹಾಡು ಕೇಳಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಸಹ ಕಣ್ಣೀರಾಗಿದ್ದರು. 1962ರ ಭಾರತ-ಚೀನಾ ಯುದ್ಧದಲ್ಲಿ ಸೋಲುಂಡು ನೋವನುಭವಿಸುತ್ತಿದ್ದ ಹೃದಯಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿತ್ತು ಆ ಹಾಡು...

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಮಹಾಕವಿ ಪ್ರದೀಪ್ ಅವರು ಈ ಗೀತೆಯನ್ನು ರಚಿಸಿದ್ದರು. ಯುದ್ಧ ಮುಗಿದ ಕೆಲವೇ ದಿನಗಳ ಬಳಿಕ ಈ ಹಾಡು ರೂಪುಗೊಂಡಿತ್ತು. ಮುಂಬೈನ ಕಡಲ ತಡಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ 'ಏ ಮೇರೆ ವತನ್ ಕೆ ಲೋಗೋಂ' ಸಾಲುಗಳು ಪ್ರದೀಪ್ ಅವರಿಗೆ ಹೊಳೆದಿತ್ತಂತೆ.

ನೈಜ ದೇಶಭಕ್ತಿಯನ್ನು ಚಿಮ್ಮಿಸುವ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ ಸಿ ರಾಮಚಂದ್ರ ಅವರಾಗಲಿ, ಸ್ವತಃ ಲತಾ ಅವರಾಗಲಿ, ಸಾಹಿತ್ಯಕಾರ ಪ್ರದೀಪ್ ಅವರಾಗಲಿ ಒಂದು ನಯಾ ಪೈಸೆಯನ್ನು ಪಡೆಯದೆ ದೇಶಭಕ್ತಿಯನ್ನು ಹೊಮ್ಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+