ಸಿಎಂ ಶೆಟ್ಟರ್ ಕೆಳಗಿಳಿಸಿದರೆ ಯಡಿಯೂರಪ್ಪ ಭಸ್ಮ

ಬಿಜೆಪಿ ಬಿಟ್ಟು ಕೆಜೆಪಿ ಸೇರುವುದು ಸ್ವತಃ ಯಡಿಯೂರಪ್ಪ ಪುತ್ರ ಮತ್ತು ಸಂಸದ ಬಿ ವೈ ರಾಘವೇಂದ್ರ ಅವರಿಗೂ ಮನಸಿಲ್ಲ. ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ಮೊದಲು ತನ್ನ ಮಗನ ರಾಜೀನಾಮೆಯನ್ನು ಪಡೆಯಲಿ ಎಂದು ಬೇಳೂರು ಸವಾಲೆಸೆದಿದ್ದಾರೆ.
ತಂದೆ ಯಡಿಯೂರಪ್ಪನ ಮೇಲೆ ಪುತ್ರನಿಗೇ ವಿಶ್ವಾಸವಿಲ್ಲ. ಹಾಗಾಗಿಯೇ ರಾಘವೇಂದ್ರ ಬಿಜೆಪಿ ಬಿಡಲು ಬಯಸುತ್ತಿಲ್ಲ. ಯಡಿಯೂರಪ್ಪ ಮೊದಲು ತನ್ನ ಮನೆ ತೂತನ್ನು ಸರಿ ಮಾಡಿಕೊಳ್ಳಲಿ ಎಂದು ಬೇಳೂರು ವ್ಯಂಗ್ಯವಾಡಿದ್ದಾರೆ.
ಇಂದು ರಾಜೀನಾಮೆ ನೀಡಿದ ಉದಾಸಿ ಮತ್ತು ಶೋಭಾ ಕರಂದ್ಲಾಜೆ ವಿರುದ್ದ ಟೀಕಾಪ್ರಹಾರ ನಡೆಸಿದ ಬೇಳೂರು, ನಾಲ್ಕೂವರೆ ವರ್ಷಗಳ ಮಂತ್ರಿಗಿರಿ ಅನುಭವಿಸಿ ಈಗ ಬಿಜೆಪಿ ಬಗ್ಗೆ ಮಾತನಾಡುವ ನಿಮಗೆ ನೈತಿಕತೆ ಅನ್ನೋದು ಏನಾದರೂ ಉಳಿದಿದೆಯಾ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ಅನುಯಾಯಿಗಳು ಪಕ್ಷ ತೊರೆಯುವವರು ತೊರೆಯಲಿ. ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಬಿಜೆಪಿ ನಿಮಗೆ ಎಲ್ಲವನ್ನೂ ನೀಡಿದೆ ಎನ್ನುವುದನ್ನು ಮರೆಯಬೇಡಿ ಎಂದು ಬೇಳೂರು ಸಲಹೆ ನೀಡಿದ್ದಾರೆ.











Click it and Unblock the Notifications