ಅಂತಿಮಘಟ್ಟ ಪ್ರವೇಶಿಸಿದ ಶೋಭಾ ರಾಜೀನಾಮೆ ಪ್ರಹಸನ

Shobha Karandlaje meets RSS leaders comply to resign Shettar Ministry
ಬೆಂಗಳೂರು, ಜ.22: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಇದೇ ಶುಭ ಶುಕ್ರವಾರದೊಳಗೆ ಬಿಜೆಪಿ ಸಂಪುಟಕ್ಕೆ ರಾಜೀನಾಮೆ ನೀಡುವುದು ಖಚಿತ ಎನ್ನಲಾಗಿದ್ದು, ಈ ಮಧ್ಯೆ, ತನ್ನನ್ನು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಸಿ, ಪೊರೆದ RSS ಮುಖಂಡರನ್ನು ಭೇಟಿ ಮಾಡಿ ವಿದಾಯದ ಹೂಗುಚ್ಚವನ್ನು ಅವರ ಕೈಗಿಟ್ಟು ಬಂದಿದ್ದಾರೆ ಎಂದು ತಿಳಿದುಬಂದಿದೆ.

ಅಲ್ಲಿಗೆ ಶೋಭಾ ರಾಜೀನಾಮೆ ಪ್ರಹಸನ ಬಹುತೇಕ ಅಂತಿಮ ಘಟ್ಟ ಪ್ರವೇಶಿಸಿದ್ದು, ಕೆಜೆಪಿ ಅಧಿನಾಯಕಿಯಾಗಿ ಹೊರಹೊಮ್ಮುವ ದಿನಗಳು ದೂರವಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೇಡಂ ಶೋಭಾ ಅವರು ಇತ್ತೀಚೆಗೆ ಆರ್ ಎಸ್ಎಸ್ ನಾಯಕರನ್ನು ಭೇಟಿ ಮಾಡಿ, 'ಸಂಪುಟದಲ್ಲಿ ಬಿಜೆಪಿ ನಾಯಕರು ತಮಗೆ ಸಹಕಾರ ತೋರುತ್ತಿಲ್ಲ. ಬಿಜೆಪಿಯಲ್ಲಿ ಈಗ ತನಗೆ ರಕ್ಷಣೆ ನೀಡುವವರು ಯಾರು? ಯಾರನ್ನು ನಂಬಿ ತಾನು ಬಿಜೆಪಿಯಲ್ಲಿ ಮುಂದುವರಿಯಬೇಕು?' ಎಂದು ಇಂಧನ ಸಚಿವೆ ಶೋಭಾ ಅಲವತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

'ನೋಡಿ, ಪಕ್ಷ ಅಥವಾ ಸರಕಾರದಲ್ಲಿ ನನಗೆ ಯಾವುದೇ ಪದವಿ, ಅಧಿಕಾರ ಬೇಕಾಗಿಲ್ಲ. ಸಚಿವ ಸ್ಥಾನವೂ ಬೇಡ. ಆದರೆ, ನನಗೆ ರಕ್ಷಣೆ ಒದಗಿಸಬಹುದಾದ ಯಾವುದಾದರೂ ಒಬ್ಬ ನಾಯಕನ ಹೆಸರಿಸಿ' ಎಂದು ಶೋಭಾ ಪ್ರಶ್ನಿಸಿದ್ದಾರೆ. ಇದಕ್ಕೆ ಸಂಘ ಪರಿವಾರದವರು ನಿರುತ್ತರರಾದರು ಎಂದು ಹೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ (KJP) ವಲಸೆ ಹೋಗಲು ಸಿದ್ಧತೆಗಳನ್ನು ನಡೆಸುತ್ತಿರುವ ಶಾಸಕರು, ಸಚಿವರೊಂದಿಗೆ ಸಂಘ ಪರಿವಾರದ ಮುಖಂಡರು ಮಾತುಕತೆ ನಡೆಸಿದ ವೇಳೆ ಶೋಭಾ ಕರಂದ್ಲಾಜೆ ಅವರು ಹೀಗೆ ತಮ್ಮ ದುಃಖದುಮ್ಮಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+