ಈಶ್ವರಪ್ಪ ಬಂಡಾಯ: ಅನಂತ್ ವಿರುದ್ಧ RSSಗೆ ಪತ್ರ

ಬಿಜೆಪಿ ಕಟ್ಟಾಳು ಎಂದೇ ಬಿಂಬಿಸಿಕೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರು ಪಕ್ಷದ ಇಬ್ಬರು ನಾಯಕರ ವಿರುದ್ಧ ಸಿಡಿದೆದ್ದಿದ್ದಾರೆ. ಈ ಸಂಬಂಧ RSSಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಇದರಿಂದ, ಯಡಿಯೂರಪ್ಪ ಪಕ್ಷ ಬಿಟ್ಮೇಲೆ ಒಂದೇ ಕುಟುಂಬದಂತೆ, ಒಂದೇ ಯಜಮಾನಿಕೆಯ ಸೌಹಾರ್ಧ ಕುಟುಂಬದಂತೆ ಕಂಡುಬಂದಿದ್ದ ಬಿಜೆಪಿಯಲ್ಲೀಗ ಬಂಡಾಯದ ಬಿರುಗಾಳಿ ಬೀಸಿದಂತಾಗಿದೆ.
ಮುಖ್ಯವಾಗಿ ಮುಂದಿನ ಚುನಾವಣೆಗೆ ಜಗದೀಶ್ ಶೆಟ್ಟರ್ ಅವರ ನಾಯಕತ್ವವನ್ನು ಘೋಷಿಸಿರುವುದು ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಅವರು ಪಕ್ಷದಲ್ಲಿ ತಮ್ಮ ಹಿಡಿತ ಸಾಧಿಸುತ್ತಿರುವುದರ ವಿರುದ್ಧ ಉಪ ಮುಖ್ಯಮಂತ್ರಿಯೂ ಆದ ಹಿರಿಯ ಆರೆಸ್ಸಿಸಿಗ ಈಶ್ವರಪ್ಪ ಅವರು ಆರ್ ಎಸ್ಎಸ್ ಗೆ ಸುದೀರ್ಘ ಪತ್ರ ಬರೆದಿದ್ದಾರೆ ಎಂದು 'ಪಬ್ಲಿಕ್ ಟಿವಿ' ಇದೀಗತಾನೆ ವರದಿ ಮಾಡಿದೆ.












Click it and Unblock the Notifications