ರಾರಾ ನಗರ: ಇನ್ಫಿ ಟೆಕ್ಕಿ ಅರುಣ್ ವರದಕ್ಷಿಣೆ ಬಲೆಯಲ್ಲಿ

ನಿನ್ನೆ ರಾತ್ರಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅರುಣ್ ಕುಮಾರ್ ಆರೋಪಿ ಪತಿರಾಯ. ಈತ ಇನ್ಫೋಸಿಸ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.
ಮದುವೆಯಾದ ಹೊಸದರಲ್ಲೇ ತವರು ಮನೆಯಿಂದ ಲಕ್ಷಾಂತರ ರೂಪಾಯಿ ದುಡ್ಡು ತಂದುಕೊಡು. ಮದುವೆಗೆ ಮಾಡಿಕೊಂಡಿದ್ದ ಸಾಲ ತೀರಿಸಬೇಕಾಗಿದೆ. ನನಗೆ ನಿವೇಶನವೂ ಬೇಕಾಗಿದೆಯೆಂದು ತನ್ನ ಪತಿ ಅರುಣ್ ಕುಮಾರ್ ಕಿರುಕುಳ ನೀಡಿದ್ದಾನೆ ಎಂದು ಆತನ ಪತ್ನಿ ವನಜಾಕ್ಷಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮದುವೆ ಸಮಯದಲ್ಲೇ ಲಕ್ಷಾಂತರ ರೂ. ಚಿನ್ನಾಭರಣ, ನಗದು ನೀಡಲಾಗಿತ್ತು. ಆದರೂ ದಿನಕಳೆದಂತೆ ಇನ್ನೂ ಹೆಚ್ಚು ಹಣ ತೆಗೆದುಕೊಂಡು ಬಾ ಎಂದು ಪೀಡಿಸಲಾರಂಭಿಸಿದ. ಜತೆಗೆ, ನನಗೆ ಬೇರೆ ಮದುವೆ ಮಾಡಿಕೊಳ್ಳುವ ಆಸೆಯೂ ಬಂದಿದೆ. ಇನ್ನೂ ಹೆಚ್ಚು ವರದಕ್ಷಿಣೆ ಕೊಟ್ಟು ಮದುವೆಯಾಗಲು ಹುಡುಗಿಯರು ಮುಂದೆ ಬಂದಿದ್ದಾರೆ. ನನಗೆ ನೀನು ಬೇಡ ಎಂದೆಲ್ಲ ತನ್ನ ಗಂಡ ಕಾಟ ಕೊಡುತ್ತಿರುವುದಾಗಿ ವನಜಾಕ್ಷಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ವನಜಾಕ್ಷಿ ಸೋದರ ಸಹ ಪಬ್ಲಿಕ್ ಟಿವಿ ಜತೆ ಮಾತನಾಡಿದ್ದು ಧನದಾಹಿ ಅರುಣ್ ಕುಮಾರನ 'ಗುಣಗಾನ' ಮಾಡಿದ್ದಾರೆ.












Click it and Unblock the Notifications