ಕಾಂಗ್ರೆಸ್ಸಿನಿಂದ ಸಿಎಂ ಅಭ್ಯರ್ಥಿ ಆಯ್ಕೆ ಕಷ್ಟ ಕಷ್ಟ

Congress Karnataka CM Candidate
ಮಂಗಳೂರು, ಜ.18: ಬಿಜೆಪಿಯಿಂದ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ತಾಕತ್ತಿದ್ದರೆ ಕಾಂಗ್ರೆಸ್ ನವರು ಘೋಷಿಸಲಿ ಎಂದು ಸಿಟಿ ರವಿ ಹಾಕಿದ್ದ ಸವಾಲಿಗೆ ಕಾಂಗ್ರೆಸ್ ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.. ಆದರೆ,

ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಯಾರಿದ್ದಾರೆಂದು ಈಗ ಹೇಳೋದು ಹೇಗೆ? ಬಹಳಷ್ಟು ಮಂದಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಗಾಗಿ ಪಾದಯಾತ್ರೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕರ ತಲೆಯಲ್ಲೂ ಯಾರು ಮುಂದಿನ ಸಿಎಂ ಎಂಬ ಚಿಂತೆ ಎದ್ದು ಕಾಣುತ್ತಿದೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಮುಖ್ಯಮಂತ್ರಿ ಆಗ್ತೀನಿ ಅಂತ ಯಾರಾದ್ರೂ ಅಂದಿದ್ದಾರೆಯೇ ಎಂದು ಮರು ಪ್ರಶ್ನಿಸಿದರು. ಚುನಾವಣೆಯ ಬಳಿಕವೇ ಪಕ್ಷದ ಹೈಕಮಾಂಡ್ ಯಾರು ಮುಖ್ಯಮಂತ್ರಿಯಾಗಬೇಕೆಂದು ನಿರ್ಧರಿಸಲಿದೆ ಎಂದರು.

ಎಸ್.ಎಂ.ಕೃಷ್ಣಉತ್ತಮ ರಾಜಕಾರಣಿ. ನಾವೆಲ್ಲಾ ಸೇರಿ ಜೊತೆಯಲ್ಲಿ ಕೆಲಸ ಮಾಡುತ್ತೇವೆ. ಅವರಿಗೆ ಯಾವ ಸ್ಥಾನಮಾನ ನೀಡಬೇಕೆಂದು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ಬಿಜೆಪಿಗೆ ನಿಜಕ್ಕೂ ಬಹುಮತವಿಲ್ಲ. ರಾಜ್ಯಪಾಲರು ಕೂಡಾ ಮುಂದೊಂದು ದಿನ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅವರದ್ದೇ ಆದ ಕ್ರಮಕೈಗೊಳ್ಳಲಿದ್ದಾರೆ ಎಂದು ಧರಂ ಸಿಂಗ್ ಹೇಳಿದರು.

ಲಭ್ಯ ಮಾಹಿತಿಯಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ,ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅಲ್ಲದೆ, ಪರಮೇಶ್ವರ್, ಶಾಮನೂರು ಶಿವಶಂಕರಪ್ಪ ಕೂಡಾ ಸಿಎಂ ರೇಸ್ ನಲ್ಲಿದ್ದಾರಂತೆ. ಅಂಬರೀಷ್ ಕೂಡಾ ನಾನು ರೆಡಿ ಎಂದಿದ್ದಾರೆ. ಶಾಮನೂರು ಅವರಿಗೆ ಸಿಎಂ ಹುದ್ದೆಗಿಂತ ಕೆಪಿಸಿಸಿ ಅಧ್ಯಕ್ಷ ಪದವಿ ಬೇಕಾಗಿದೆ. ಆದರೆ, ಸೋನಿಯಾ ಮೇಡಂ ಅವರ ಕಡೆ ಕೃಪೆ ತೋರುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+