ಬೇಳೂರು ಕಾಂಗ್ರೆಸ್ ಸೇರ್ಪಡೆಗೆ ಭಾರಿ ವಿರೋಧ

Congressmen oppose MLA Belur Gopalakrishna
ಶಿವಮೊಗ್ಗ, ಜ.11: ಪಕ್ಷದಿಂದ ಪಕ್ಷಕ್ಕೆ ಹಾರಲು ಸದಾ ಹಾತೊರೆಯುವ, ಕ್ಷಣಾರ್ಧದಲ್ಲಿ ಪಕ್ಷ ನಿಷ್ಠೆ ಬದಲಾಯಿಸುವ ಸಾಗರ ಕ್ಷೇತ್ರ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೆ ಸ್ಥಳೀಯ ಕಾಂಗ್ರೆಸ್ಸಿಗರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಬೇಳೂರು ಆವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಂತೆ ವರಿಷ್ಠರನ್ನು ಆಗ್ರಹಿಸಿದ್ದಾರೆ. ಬೇಳೂರು ಕಾಂಗ್ರೆಸಿಗೆ ಕಾಲಿಟ್ಟರೆ ಪಕ್ಷದ ಶಕ್ತಿ ಕ್ಷೀಣಿಸುತ್ತದೆ. ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವ ಬೇಳೂರು ಅವರು ಈಗ ಕಾಂಗ್ರೆಸಿನತ್ತ ಮುಖ ಮಾಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ನಾಯಕ ರತ್ನಾಕರ್ ಕಲ್ಲೋಡು ಅವರು ಮಾತನಾಡಿ, ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವಾರು ಅತೃಪ್ತ ಶಾಸಕರು, ಸಚಿವರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹಾಗೆಯೇ ಅವರ ಹಿಂಬಾಲಕರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಯತ್ನಿಸುತ್ತಿದ್ದಾರೆಂದು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೇಳೂರು ಗೋಪಾಲಕೃಷ್ಣ ಅವರ ಅವಶ್ಯಕತೆ ಇಲ್ಲ.

ಹೊಸಪೇಟೆಯಲ್ಲಿ ಇತ್ತೀಚೆಗೆ 50ಕ್ಕೂ ಅಧಿಕ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಬೇಳೂರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಜಿ.ಪರಮೇಶ್ವರ್ ಅವರು ಭರವಸೆ ನೀಡಿದ್ದಾರೆ.

ಸಾಗರ ತಾಲೂಕಿನ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಪಕ್ಷದಲ್ಲಿ ಬಲಿಷ್ಠರಾಗಿದ್ದಾರೆ. ಅವರು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ ಎಂದು ರತ್ನಾಕರ್ ಹೇಳಿದರು.

ಬೇಳೂರು ಮಂತ್ರಿ ಸೀಟು ಕಥೆ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಂತ್ರಿ ಕಿರೀಟ ಧರಿಸಿ ಮೆರೆಯುವ ಕನಸು ಹೊತ್ತಿ ಶಾಸಕ ಬೇಳೂರು ಗೋಪಾಲಕೃಷ್ಣ ತಿರುಗುತ್ತಿರುವುದು ಸುಳ್ಳಲ್ಲ. ಬಂಡಾಯ ಮಾಡಿದಾಗ ಸಿಗದ ಪಟ್ಟಕ್ಕೆ ಈಗ ರೇಣುಕಾಚಾರ್ಯ ಮೂಲಕ ಗೋಪಾಲಕೃಷ್ಣ ಲಾಬಿ ನಡೆಸಿದ್ದರು.

ಮಾರಿಷಸ್ ನಿಂದ ಯಡಿಯೂರಪ್ಪ ಬಿಐಎಎಲ್ ನಿಲ್ದಾಣದಲ್ಲಿ ಬಂದಿಳಿದಾಗ ಬೆನ್ನ ಹಿಂದೆ ನಿಂತು ಹಲ್ಲುಗಿಂಜಿದ ಗೋಪಾಲಕೃಷ್ಣ ನಂತರ ಸದಾನಂದ ಗೌಡರ ಅಕ್ಕ ಪಕ್ಕ ಓಡಾಡಿ ಕೊಂಡಿದ್ದರು. ಯಡಿಯೂರಪ್ಪ ಜೈಲು ಸೇರಿದಾಗ, ಅವರಿಗೆ ಅವಮಾನ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದರು.

ಬಿಜೆಪಿ ಸರಕಾರದಲ್ಲಿ ನನಗೆ ಎರಡು ಸಾರಿ ಸಚಿವ ಸ್ಥಾನ ಸಿಗಬೇಕಿದ್ದುದನ್ನು ತಪ್ಪಿಸಿದ್ದೇ ಯಡಿಯೂರಪ್ಪನವರ ಮಗ ರಾಘವೇಂದ್ರ. ನನ್ನ ನಾಯಕರು ಎಂದುಕೊಂಡಿದ್ದ ಯಡಿಯೂರಪ್ಪನವರೇ ನನಗೆ ಎರಡು ಬಾರಿ ಗೂಟ ಹೊಡೆದಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಕಿಡಿ ಕಾರಿದ್ದರು.

ಎಷ್ಟೇ ಜನ ಬಿಜೆಪಿಯಿಂದ ಕೆಜೆಪಿ ಸೇರಿಕೊಂಡರೂ ಸರಕಾರ ಬೀಳುವುದಿಲ್ಲ. ಬೀಳದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ,ಈಗ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ.

ಅರಣ್ಯ ಸಚಿವ ಯೋಗೀಶ್ವರ್ ಸೇರಿ 8 ಸಚಿವರು, ಒಟಾರೆ 20 ಜನ ಶಾಸಕರು, ಸಚಿವರು ಕಾಅಂಗ್ರೆಸ್ ಕದ ತಟ್ಟುತ್ತಿದ್ದಾರೆ. ಬೊಮ್ಮಾಯಿ, ವಿ ಸೋಮಣ್ಣ, ಪುಟ್ಟೇಗೌಡ, ಶಿವರಾಜ್ ತಂಗಡಗಿ, ನಾರಾಯಣ ಸ್ವಾಮಿ ಅವರ ಹೆಸರನ್ನು ಕೆಪಿಸಿಸಿಯಿಂದ ಎಐಸಿಸಿಗೆ ರವಾನೆ ಮಾಡಲಾಗಿದೆ. ಜನವರಿ 15ರ ನಂತರ ಅಧಿಕೃತ ಪ್ರಕಟಣೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+