ಆನ್ ಲೈನ್, ಮೊಬೈಲ್ ನಲ್ಲಿ ಕನ್ನಡ ಉಚಿತ ಕ್ಯಾಲೆಂಡರ್

ಈ ಕ್ಯಾಲೆಂಡರ್ ಗಳ ಬಳಕೆದಾರರು ವಿಶ್ವದಾದ್ಯಂತ ತಮ್ಮ ಆನ್ ಲೈನ್ ಮತ್ತು ಮೊಬೈಲ್ ನಲ್ಲಿ ಪಂಚಾಂಗ ಮಾಡಿಕೊಡಲಾಗಿದೆ ಎಂದು ಬೆಂಗಳೂರು ಪ್ರೆಸ್ ನ ವ್ಯವಸ್ಥಾಪಕ ನಿರ್ದೇಶಕ ಎಚ್ ಆರ್ ಅನಂತ್ ತಿಳಿಸಿದರು.
ವಿಂಡೋಸ್, ಮ್ಯಾಕ್ ಮತ್ತು ಲೈನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಈ ಕ್ಯಾಲೆಂಡರ್ ಗಳು ಲಭ್ಯವಿರುತ್ತದೆ. ಹಿಂದೂ ಪಂಚಾಗ ಆಧರಿಸಿ ಈ ಕ್ಯಾಲೆಂಡರ್ ಗಳನ್ನು ರೂಪಿಸಲಾಗಿದೆ.
ತಿಥಿ, ವಾರ, ನಕ್ಷತ್ರ, ಸಾರ್ವಜನಿಕಾ ರಜಾ ದಿನಗಳು, ಜಾತ್ರೆ ಮಹೋತ್ಸವಗಳನ್ನು ಸುಲಭವಾಗಿ ಗುರುತಿಸಿಕೊಳ್ಳಬಹುದಾಗಿದೆ. ಆನ್ ಲೈನ್ ಕ್ಯಾಲೆಂಡರ್ ಉಚಿತವಾಗಿ ಲಭ್ಯವಿದ್ದು, ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಮೊಬೈಲ್ ಕ್ಯಾಆನ್ ಲೈನ್, ಮೊಬೈಲ್ ನಲ್ಲಿ ಕನ್ನಡ ಉಚಿತ ಕ್ಯಾಲೆಂಡರ್ಲೆಂಡರ್ ಗಳಲ್ಲಿ ರಿಮೈಂಡರ್, ಇವೆಂಟ್ ಅಲರ್ಟ್, ಕಾರ್ಯಸೂಚಿ ಪಟ್ಟಿಯಂಥ ಸೌಲಭ್ಯಗಳು ಲಭ್ಯವಿರುತ್ತದೆ. 2006ರಲ್ಲಿ ಪ್ರಕಟಿಸಿದ ಇಂಗ್ಲೀಷ್ ಕ್ಯಾಲೆಂಡರ್ ಸುಮಾರು 2 ಲಕ್ಷಕ್ಕೂ ಅಧಿಕ ಡೌನ್ ಲೋಡ್ ಮಾಡಿ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿತ್ತು ಎಂದು ಅನಂತ್ ಹೇಳಿದರು.
ಮುದ್ರಣ ಕ್ಷೇತ್ರದಲ್ಲಿ ಸುಮಾರು 92ಕ್ಕೂ ಅಧಿಕ ವರ್ಷಗಳ ಅನುಭವ ಇರುವ ಬೆಂಗಳೂರು ಪ್ರೆಸ್ ನ ಆನ್ ಲೈನ್ ಕ್ಯಾಲೆಂಡರ್ ಡೌನ್ ಲೋಡ್ ಮಾಡಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗೆ www.bangalorepress.com ಸಂಪರ್ಕಿಸಿ












Click it and Unblock the Notifications