ಬದುಕಲಿಲ್ಲ ದಿಲ್ಲಿ ಅತ್ಯಾಚಾರ ಬಾಧಿತೆ; ಜನತೆಗೆ ಆಘಾತ

ಬಹುಅಂಗ ವೈಫಲ್ಯದಿಂದ 23 ವರ್ಷದ ಯುವತಿಯ ದೇಹಸ್ಥಿತಿ ತುಂಬಾನೇ ಬಿಗಡಾಯಿಸಿದೆ ಎಂದು ಅಲ್ಲಿನ ವೈದ್ಯರು ಆರಂಭದಲ್ಲೇ ಸ್ಪಷ್ಟಪಡಿಸಿದ್ದರು. ಆದರೂ ಸತತ ಚಿಕಿತ್ಸೆ ನೀಡಿದ್ದರೂ ಅದು ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
ಜನ ಯುವತಿಯ ಸಾವಿಗೆ ಶೋಕ ವ್ಯಕ್ತಪಡಿಸಿದ್ದು, ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತಿದ್ದಾರೆ. ಮೃತಳ ಗೌರವಾರ್ಥ ದೇಶದ ರಾಷ್ಟ್ರ ಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಬೇಕು ಎಂದು ಅಸಂಖ್ಯಾತ ಶೋಕತಪ್ತ ಜನ ಆಶಿಸಿದ್ದಾರೆ.
'ನಿರ್ಭಯ' (ಯುವತಿಗೆ ಮಾಧ್ಯಮಗಳು ನೀಡಿದ್ದ ಹೆಸರು) ಸಾವಿನ ಸುದ್ದಿ ಕೇಳಿ ಜನ ಮಮ್ಮಲಮರುಗಿದ್ದಾರೆ. ಅಲ್ಲಲ್ಲಿ ಸಭೆ ಸೇರಿ ಸಂತಾಪ ಸೂಚಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ಯುವತಿಯ ಸಾವಿನ ಸುದ್ದಿಯೇ. 15 ದಿನಗಳ ಕಾಲ ಸಾವು ಬದುಕಿನ ಮಧ್ಯೆ ದಿಟ್ಟ ಹೋರಾಟ ನಡೆಸಿದರೂ ನತದೃಷ್ಟಳು ಬದುಕಲಿಲ್ಲವಲ್ಲಾ ಎಂದು ಜನ ಬೇಸರಿಸಿಕೊಳ್ಳುತ್ತಿದ್ದಾರೆ.
ಈ ಮಧ್ಯೆ, ಯುವತಿಯ ಶವವನ್ನು ಇಂದು ದೆಹಲಿಗೆ ತರಲಾಗುವುದು. ಅಲ್ಲಿಂದ ಮುಂದಕ್ಕೆ ಯುವತಿಯ ಕುಟುಂಬದವರು ಇಚ್ಚಿಸಿದ ಜಾಗದಲ್ಲಿ ಯುವತಿಯ ಅಂತಿಮ ಸಂಸ್ಕಾರ ನೆರವೇರಿಸಲು ಸರಕಾರ ನಿರ್ಧರಿಸಿದೆ. ಆದರೆ ಯಾವುದೇ ಅಹಿತಕರ ಘಟನೆಗಳು ನಡೆಯುವುದು ಬೇಡವೆಂದು ಯುವತಿಯ ಕುಟುಂಬದವರು ಅಂತ್ಯಕ್ರಿಯೆ ಜಾಗವನ್ನು ಗೌಪ್ಯವಾಗಿಟ್ಟಿದ್ದಾರೆ.












Click it and Unblock the Notifications