ಸಿಸಿಟಿವಿ: ಮಕ್ಕಳೊಂದಿಗೆ ಪತ್ನಿಯ ಶವ ಸಾಗಿಸಿದ್ದವ ಸಿಕ್ಕಿಬಿದ್ದ

ಮುಂಬೈನ ಜುಹು ಕೋಳಿವಾಡಾದಲ್ಲಿ ಸಂತಕ್ರೂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹತ್ಯೆಯ ವೃತ್ತಾಂತ ಹೀಗಿದೆ:
* ಆರೋಪಿ ಪತಿಯ ಹೆಸರು ಶಶಿ ರಾಮ್ ಸಿಂಗ್ (36). ವೃತ್ತಿಯಲ್ಲಿ ಆಟೋ ಡ್ರೈವರ್.
* ಮೃತಳು ಛಾಯಾ ಸಿಂಗ್ (31).
* ಮೃತ ಮಹಿಳೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯಲ್ಲಿ ಕೆಲಸದಲ್ಲಿದ್ದಳು.
* 'ಮುಂಬೈನಲ್ಲಿ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಊರು ಬಿಟ್ಟು ಹೋಗೋಣ' ಎಂದು ಹೆಂಡತಿಗೆ ಅನೇಕ ಬಾರಿ ಹೇಳಿದ್ದೆ. ಆದರೆ ಪತ್ನಿಗೆ ಮುಂಬೈ ಬಿಟ್ಟು ಹೋಗುವುದು ಇಷ್ಟವಿರಲಿಲ್ಲ. ಇದರಿಂದ ಬೇಸತ್ತು ಕೊನೆಗೆ ಅವಳನ್ನು ಈ ಲೋಕದಿಂದಲೇ ಕಳಿಸಿಬಿಟ್ಟೆ (ಡಿ. 7ರಂದು)'.
* ತಾಯಿಯ ಶವ ಸಾಗಿಸಲು ಮಕ್ಕಳು ಸಹಕರಿಸಿದ್ದು ಹೇಗೆ? ಎಂದು ಕೇಳಿದ್ದಕ್ಕೆ... ಶುಕ್ರವಾರ ಮಧ್ಯಾಹ್ನ 3 ಗಂಟೆ ಸಮಯ. 12 ವರ್ಷದ ಮಗಳು ಶಾಲೆಗೆ ಹೋಗಿದ್ದಳು. 6 ವರ್ಷದ ಮಗ ಮಧ್ಯಾಹ್ನದ ನಿದ್ದೆ ಮಾಡುತ್ತಿದ್ದ. ಆಗ ಛಾಯಾಳನ್ನು ಸಾಯಿಸಿಬಿಟ್ಟೆ ಎಂದು ರಾಮ ಹೇಳಿದ್ದಾನೆ.
* ಮುಂದೆ... ರಾತ್ರಿ ವೇಳೆಗೆ ಮಕ್ಕಳಿಗೆ 'ಅಮ್ಮ ಸತ್ತಿದ್ದಾಳೆ' ಎಂದು ಹೇಳಿದೆ. ಆದರೆ ಅವಳು ಸಹಜವಾಗಿ ಸತ್ತುಬಿಟ್ಟಿದ್ದಾಳೆ. ಅವಳ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಯಾರಿಗೂ ಹೇಳದೆ ಅವಳ ಶವವನ್ನು ಮನೆಯಿಂದ ಹೊರಹಾಕಬೇಕು ಎಂದು ಮಕ್ಕಳನ್ನು ನಂಬಿಸಿದೆ. ಅಮಾಯಕ ಮಕ್ಕಳು ಅಪ್ಪನ ಮಾತನ್ನು ನಂಬಿಬಿಟ್ಟವು.
* ಮಕ್ಕಳಿಬ್ಬರೂ ಈಗ ಉತ್ತರಪ್ರದೇಶದಲ್ಲಿ ಬಂಧುಗಳ ಮನೆಯಲ್ಲಿದ್ದಾರೆ.
* ಪಾಪಿಷ್ಠ ಗಂಡ ತನ್ನ ಪತ್ನಿ ಛಾಯಾಳ ಬಲಗಾಲಿಗೆ ಮೊಳೆ ಹೊಡೆದು ಸಾಯಿಸಿದ್ದ. ಯಾಕೋ ಹೀಗೆ ಮಾಡಿದ್ದೆ ಎಂದು ಪೊಲೀಸರು ಕೇಳಿದ್ದಕ್ಕೆ 'ಬಿಹಾರದಲ್ಲಿ ನಮ್ಮ ಕಡೆ ಜನ ಮಾತನಾಡಿಕೊಳ್ಳುತ್ತಾರೆ.
ಏನಪ್ಪಾ ಅಂದರೆ ವ್ಯಕ್ತಿ ಅಸಹಜ ಸಾವು ಸತ್ತರೆ ದೆವ್ವವಾಗಿ ಕಾಡುತ್ತದೆ. ಅದಕ್ಕೆ ಪರಿಹಾರಾರ್ಥವಾಗಿ ಆ ದೇಹಕ್ಕೆ ಮೊಳೆ ಹೊಡೆದರೆ ದೆವ್ವದ ಕಾಟವಿರುವುದಿಲ್ಲ' ಎಂದು. ಹಾಗಾಗಿ ನಾನೂ ನನ್ನ ಹೆಂಡತಿಯ ಕಾಲಿಗೆ ಮೊಳೆ ಹೊಡೆದೆ. ಇದರಿಂದ ಅವಳು ದೆವ್ವವಾಗಿ ನನಗೆ ಕಾಟ ಕೊಡುವುದು ತಪ್ಪುತ್ತದೆ ಎಂದು ಭಾವಿಸಿದ್ದೆ ಎಂದಿದ್ದಾನೆ ಭೂಪ.












Click it and Unblock the Notifications