ಮೌಂಟ್ ಕಾರ್ಮಲ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ

ಒಂದು ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದ ಲತಾಶ್ರೀ (19) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. ಈಕೆ ಮೂಲತಃ ಬಿಜಾಪುರದವರು.
ಅರಮನೆ ರಸ್ತೆಯಲ್ಲಿ5ರುವ ಹಾಸ್ಟೆಲಿನಲ್ಲಿ ವಾಸವಬಾಗಿದ್ದ ಲತಾಶ್ರೀ, ಶುಕ್ರವಾರ ರಾತ್ರಿ ಕೀಟನಾಶಕ ಸೇವಿಸಿ ನೋವಿನಿಂದ ನರಳುತ್ತಿದ್ದಾಗ ಸಹಪಾಠಿಗಳು ತಕ್ಷಣ ಹಾಸ್ಟೆಲ್ ವಾರ್ಡನಿಗೆ ವಿಷಯ ತಿಳಿಸಿದ್ದಾರೆ. ಲತಾಶ್ರೀಳನ್ನು ತಕ್ಷಣ ಸಮೀಪದ ಜೈನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಹೈ ಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲತಾಶ್ರೀ ಕೀಟನಾಶಕವನ್ನು ಎಲ್ಲಿಂದ ತಂದಳು, ಅಂಗಡಿಯವರು ಹೇಗೆ ಅದನ್ನು ಆಕೆ ಮಾರಾಟ ಮಾಡಿದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ. ಸದ್ಯಕ್ಕೆ ಲತಾಶ್ರೀ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ.












Click it and Unblock the Notifications