ತಲೆಮರೆಸಿಕೊಂಡಿದ್ದ ಸಚಿವರ ಪುತ್ರ ಕೋರ್ಟಿಗೆ ಶರಣು

ನಾಲ್ಕು ತಿಂಗಳಿನಿಂದ ತಲೆಮೆರೆಸಿಕೊಂಡಿದ್ದ ದೊರೈ ದಯಾನಿಧಿಗೆ ನಾಲ್ಕು ದಿನಗಳ ಹಿಂದೆಯಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿತ್ತು.
ವಕೀಲರ ದೊಡ್ಡ ದಂಡು ಮತ್ತು ಡಿಎಂಕೆ ಕಾರ್ಯಕರ್ತರೊಂದಿಗೆ ಮೇಲೂರು ಕೋರ್ಟಿಗೆ ಆಗಮಿಸಿದ ದೊರೈ ಹತ್ತು ಸಾವಿರ ರೂಪಾಯಿ ಭದ್ರತಾ ಠೇವಣಿ ಕೋರ್ಟಿಗೆ ನೀಡಿದರು.
ನಾಳೆಯಿಂದ (ಡಿ 15) ಮುಂದಿನ ಆದೇಶದವರೆಗೆ ಮೇಲೂರು ಸಮೀಪವಿರುವ ಕೆಷವಾಳವುರ್ ಪೋಲೀಸ್ ಠಾಣೆಗೆ ಪ್ರತಿದಿನ ಹಾಜರಾಗುವಂತೆ ಕೋರ್ಟ್ ಆದೇಶ ನೀಡಿದೆ.
ದೊರೈ ದಯಾನಿಧಿ ಸೇರಿದಂತೆ 14 ಜನರ ಮೇಲೆ ಬಹುಕೋಟಿ ಗ್ರಾನೈಟ್ ಹಗರಣದ ಕೇಸ್ ದಾಖಲಾಗಿತ್ತು.












Click it and Unblock the Notifications