3500 ಕೋಟಿ ಎಲ್ಲಿ ಹೋಯ್ತು? ಉತ್ತರವಿಲ್ಲ

ಕಬ್ಬಿಣ ಅದಿರಿನ ಗಣಿಗಾರಿಕೆ ಅಕ್ರಮ ಕುರಿತಂತೆ ಲೋಕಾಯುಕ್ತ ಸಂಸ್ಥೆ ಹಾಗೂ ಸಿಬಿಐ ತನಿಖೆ ನಡೆಸಿದ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಅಕ್ರಮಗಳನ್ನು ಕುರಿತ ವರದಿಯನ್ನು ತಯಾರಿಸಿ ಸಿಎಜಿ ಸರ್ಕಾರಕ್ಕೆ ನೀಡಿದೆ.
ಅದರೆ, ವಿಧಾನಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರು ಇದೇ ವರದಿಯನ್ನು ಮಂಡಿಸಿದಾದರೂ ಚರ್ಚೆಗೆ ಅವಕಾಶ ನೀಡಲಿಲ್ಲ. ಗುರುವಾರ ಕೂಡಾ ಸಿಎಜಿ ವರದಿ ಬಗ್ಗೆ ಚರ್ಚೆ ನಡೆಯದ ಕಾರಣ ವಿಪಕ್ಷಗಳು ಕೆರಳಿ ಸದನದಿಂದ ಹೊರ ನಡೆದವು.
ಸಿಎಜಿ ನೀಡಿದ ವರದಿಯ ಮುಖ್ಯಾಂಶಗಳು ಇಂತಿದೆ:
* ತುಮಕೂರಿನಲ್ಲಿ ಐದು, ಚಿತ್ರದುರ್ಗದಲ್ಲಿ ಎಂಟು, ಹೊಸಪೇಟೆಯಲ್ಲಿ ನಾಲ್ಕು ಸೇರಿದಂತೆ ಒಟ್ಟು 17 ಉಲ್ಲಂಘನಾ ಪ್ರಕರಣಗಳು ಪತ್ತೆ
* ಭಾರತೀಯ ಗಣಿ ಸಂಸ್ಥೆ ಪ್ರಕಟಿಸಿದ ಕಬ್ಭಿಣ ಅದಿರು ದರವನ್ನು ತಪ್ಪಾಗಿ ಅರ್ಥೈಸಿ ಮೂರು ವಿಭಾಗಗಳ 36 ಘಟಕಗಳಲ್ಲಿ 13.11 ಕೋಟಿ ರೂ. ರಾಜ ಧನ ಕಡಿಮೆ ವಿಧಿಸಿದೆ
* 120 ಕಲ್ಲು ಗಣಿಗಾರಿಕೆ ಯೋಜನೆಗಳಲ್ಲಿ 104 ಗ್ರಾನೈಟ್ ಗಣಿಗಾರಿಕೆ ಯೋಜನೆಗಳನ್ನು ಪರೀಕ್ಷೆ ಮಾಡದೆ ಅನುಮತಿ ನೀಡಲಾಗಿದೆ.
* ಶಾಸನಬದ್ಧ ಪರವಾನಗಿ ಇಲ್ಲದೆ ಅಕ್ರಮವಾಗಿ 562.79 ಕೋಟಿ ರು ಮೌಲ್ಯದ ಅದಿರು ಸಾಗಾಟ.
* ಚಿತ್ರದುರ್ಗ, ಬಳ್ಳಾರಿಯಲ್ಲಿ ನಾಲ್ವರು ಗುತ್ತಿಗೆದಾರರು 150.59 ಕೋಟಿ ರು ಮೌಲ್ಯದ 14.68 ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ಅಕ್ರಮವಾಗಿ ಹೊರ ತೆಗೆದಿದ್ದಾರೆ.
* 212.39 ಎಕರೆ ಭೂಮಿ ಡಿನೋಟಿಫಿಕೇಷನ್ ನಿಂದ ಬಿಡಿಎಗೆ 499.67 ಕೋಟಿ ರು ನಷ್ಟ
* 2007ರಿಂದ ಸುಮಾರು 438 ಜಿ ಕೆಟಗೆರಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಹಲವು ನಿಯಮಬಾಹಿರ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರು. ನಷ್ಟ.
* ಒಟ್ಟಾರೆ 3,414 ಕೋಟಿ ರು ರಾಜಸ್ವ ನಷ್ಟ. ಈ ಪೈಕಿ 1,212 ಕೋಟಿ ರು ನಷ್ಟವನ್ನು ಸರ್ಕಾರ ಒಪ್ಪಿಕೊಂಡಿದೆ. 7.22 ಕೋಟಿ ರು ಮಾತ್ರ ವಸೂಲಿ ಮಾಡಲಾಗಿದೆ.
ರಾಜ್ಯದಲ್ಲಿ ಮರಳು ಗಣಿಗಾರಿಕೆ ಕುರಿತಂತೆ 14 ಪ್ರಮುಖ ಶಿಫಾರಸ್ಸುಗಳನ್ನು ಮಾಡಿರುವ ಮಹಾಲೇಖಪಾಲರು ಗುತ್ತಿಗೆ ಪಡೆದವರು ಅರಣ್ಯ ಇಲಾಖೆಯ ಸಹಕಾರದೊಂದಿಗೆ ನೆಡು ತೋಪು ಬೆಳೆಸಿ ಪರಿಸರ ಸಂರಕ್ಷಿಸಬೇಕೆಂದು ಸೂಚಿಸಿದ್ದಾರೆ.












Click it and Unblock the Notifications