ಗುಜರಾತಿನ ಮೋದಿ ಆಡಳಿತ ಇಡೀ ದೇಶಕ್ಕೇ ಮಾದರಿ

ಮೂರನೆ ಬಾರಿಗೆ ಮುಖ್ಯಮಂತ್ರಿಯಾಗಲು ತದನಂತರ ಎಲ್ಲವೂ ಕೂಡಿಬಂದರೆ ಪ್ರಧಾನಿ ಪಟ್ಟ ಅಲಂಕರಿಸಲೂ ಸಜ್ಜಾಗುತ್ತಿರುವ ಗುಜರಾತ್ ಮುಖ್ಯಮಂತ್ರಿ ಮೋದಿಗೆ ಚುನಾವಣೆ ಮೂರ್ನಾಲ್ಕು ದಿನವಿರುವಾಗ ಇಂತಹ ಪ್ರಶಂಸೆ ಸಿಕ್ಕಿರುವುದು ಅವರ ಯಶೋಗಾಥೆಗೆ ಹಿಡಿದ ಕನ್ನಡಿಯಾಗಿದೆ.
ಚಿತ್ರವೊಂದರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ವಡೋದರಾಗೆ ಬಂದಿದ್ದ 39 ವರ್ಷದ ಕನ್ನಡತಿ, ನಟಿ ಐಶ್ವರ್ಯಾ ಹಾಗೆ ಸಕಾಲಿಕವಾಗಿ ರಾಜ್ಯದಲ್ಲಿ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದ್ದಾರೆ.
'ಗುಜರಾತಿನ ಯಶಸ್ಸು, ಅದಕ್ಕೆ ಮೋದಿ ಪಟ್ಟಿರುವ ಶ್ರಮ ನನಗೆ ಚೆನ್ನಾಗಿ ತಿಳಿದಿದೆ. ರಾಜ್ಯಕ್ಕೆ ಬಂದರೆ ಮನೆಗೆ ಬಂದಂತೆ ಅನಿಸುತ್ತದೆ. ಗುಜರಾತ್ ದಿನೇ ದಿನೇ ಬಲಗೊಳ್ಳುತ್ತಿದೆ. ಒಟ್ಟಿನಲ್ಲಿ ಮೋದಿ ಆಡಳಿತ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ' ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಬಾಲಿವುಡ್ ಬಾದ್ ಷಾ ಅಮಿತಾಭ್ ಮತ್ತು ನಟಿ ಐಶ್ವರ್ಯಾ ರೈ ಗುಜರಾತಿನ ರಾಜಭಾರಿಗಳಾದ ಮೇಲೆ ಗುಜರಾತ್ ಹೆಚ್ಚಿನ ಮನ್ನಣೆ ಗಳಿಸುತ್ತಿದೆ.












Click it and Unblock the Notifications