ಬಿಜೆಪಿಗೆ ಆಘಾತ:ಬಸವಕಲ್ಯಾಣ ಶಾಸಕ ರಾಜೀನಾಮೆ

ತನ್ನ ಅಸಂಖ್ಯಾತ ಬೆಂಬಲಿಗರೊಂದಿಗೆ ಬಸವರಾಜ ಪಾಟೀಲ ಅವರು ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದ ಅಟ್ಟೂರ, ನಾಲ್ವರು ಜಿಲ್ಲಾ ಪಂಚಾಯತಿ ಸದಸ್ಯರು, ಹತ್ತು ತಾಲೂಕು ಪಂಚಾಯತಿ ಸದಸ್ಯರು ಮತ್ತು ತಾಲೂಕಿನ ವಿವಿಧ ಮುಖಂಡರ ಜೊತೆ ಕೆಜೆಪಿಗೆ ಸೇರ್ಪಡೆ ಯಾಗುತ್ತಿದ್ದೇನೆ ಎಂದು ಹೇಳಿಕೆ ನೀಡಿದರು.
ಯಡಿಯೂರಪ್ಪ ಅವರು ಈ ರಾಜ್ಯದ ಆಶಾಕಿರಣ, ಅವರ ಮುಂದಾಳುತ್ವದಲ್ಲಿ ತಾಲೂಕಿನ ಜನತೆಯ ಆಶೋತ್ತರ ಈಡೇರಿಸುತ್ತೇನೆ. ಬಿಜೆಪಿ ಈಗ ಒಡೆದ ಮನೆ, ಅಲ್ಲಿ ಉಸಿರುಗಟ್ಟಿಸುವ ಸನ್ನಿವೇಶ ಇರುವುದರಿಂದ ಪಕ್ಷ ತೊರೆಯುತ್ತಿದ್ದೇನೆ ಎಂದು ಬಸವರಾಜ ಪಾಟೀಲ ಹೇಳಿದ್ದಾರೆ.
ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಸ್ಥಿತಿಗೆ ಬರಲಿದೆ. ಕಳೆದ ಬಾರಿ ಚುನಾವಣೆಗೆ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡದೆ ಇದ್ದಾಗ ಯಡಿಯೂರಪ್ಪ ಕರೆದು ನನಗೆ ಟಿಕೆಟ್ ನೀಡಿದರು.
ಅವರಿಗೆ ನಾನು ಆಭಾರಿಯಾಗಿದ್ದೇನೆ ಮತ್ತು ಯಡಿಯೂರಪ್ಪ ಎಲ್ಲಿ ಇರುತ್ತಾರೋ ನಾನೂ ಕೂಡ ಅಲ್ಲೇ ಇರುತ್ತೇನೆ ಎಂದು ಬಿಎಸ್ವೈ ಮೇಲೆ ಬಸವರಾಜ ಪಾಟೀಲ ಅಟ್ಟೂರ ನಿಷ್ಠೆ ಮೆರೆದಿದ್ದಾರೆ.












Click it and Unblock the Notifications