ಕೆಜೆಪಿ ಚಪ್ಪಾಳೆ ಗಿಟ್ಟಿಸಲಷ್ಟೇ ಲಾಯಕ್ಕು: ಎಚ್ಡಿಕೆ

ಪ್ರಚಾರಕ್ಕೆ ಜನರು ಯಾವ ರೀತಿ ಬೆಲೆ ನೀಡುತ್ತಾರೆ ಎಂಬುದು ಮುಂದೆ ತಿಳಿಯಲಿದೆ. ಜೆಡಿಎಸ್ ಗೆ ಕೆಜೆಪಿ ಪ್ರತಿಸ್ಪರ್ಧಿಯಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ 224 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಜೆಡಿಎಸ್ ಸ್ಪರ್ಧಿಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಪ್ರತಿಪಕ್ಷ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಪಕ್ಷ ಎದುರಾಳಿ ಎಂಬುದು ನಿಜ ಎಂದರು.
ಜಗದೀಶ್ ಶೆಟ್ಟರ್ ಅವರು ಇನ್ನೂ ತಾವು ಸಿಎಂ ಎಂಬುದನ್ನು ಸಾಬೀತು ಮಾಡಿಲ್ಲ. ಕಸ ವಿಲೇವಾತಿ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬೆಳಗಾವಿಯಲ್ಲಿ 6 ದಿನ ಅಧಿವೇಶನ ಮಾಡಿದ ತಕ್ಷಣ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಾಗಲಿದೆ ಎಂಬುದು ಭ್ರಮೆ ಎಂದರು.
ನಿದ್ರಾವಸ್ಥೆಯಲ್ಲಿರುವ ಕಾಂಗ್ರೆಸ್ ಪಕ್ಷದವರು ವಿರೋಧ ಪಕ್ಷವಾಗಿ ಪರಿಣಾಮಕಾರಿ ಕೆಲಸ ಮಾಡಲು ವಿಫಲವಾಗಿದ್ದು 3ನೇ ಮಹಡಿಯೇರುವ ಕನಸು ಕಾಣುತ್ತಿದ್ದಾರೆ. ಬೆಳಗಾವಿ ಅಧಿವೇಶನದಿಂದ ಹೆಚ್ಚಿನ ಸಂಚಲನ ಸೃಷ್ಟಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯ ಇದೇ ಅಥವಾ ಇಲ್ಲ ಎಂಬುದನ್ನು ಮತದಾರ ನಿರ್ಧರಿಸುತ್ತಾನೆ. ಜನರೇನು ದಡ್ದರಲ್ಲ, ನಮ್ಮ ರಾಜ್ಯದ ಮತದಾರರು ಪ್ರಜ್ಞಾವಂತರು ಎನ್ನುವುದನ್ನು ಬಿಜೆಪಿ ತಿಳಿದುಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications