ನಿಮ್ಮ PF ಪಾಸ್‌ಬುಕ್ ಅಂತರ್ಜಾಲದಲ್ಲಿ ಲಭ್ಯ
ಹೊಸದಿಲ್ಲಿ,
ಡಿ.6: ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ಹೊಸ ಅಂತರ್ಜಾಲ ಸೇವೆಯೊಂದನ್ನು ಆರಂಭಿಸಿದೆ. ಇದರಿಂದ ಸದಸ್ಯರು ಅಂದರೆ ಪ್ರಾವಿಡೆಂಟ್ ಫಂಡ್ ಚಂದಾದಾರರು ಆನ್‌ಲೈನ್ ಮೂಲಕ ತಮ್ಮ ಖಾತೆಗಳನ್ನು ತಾಜಾ ಆಗಿ ಪರಿಶೀಲಿಸಬಹುದಾಗಿದೆ. id="toptextpromo">ದೇಶದಲ್ಲಿ
ಸುಮಾರು 5 ಕೋಟಿಗೂ ಹೆಚ್ಚು ಪ್ರಾವಿಡೆಂಟ್ ಫಂಡ್ ಚಂದಾದಾರರು ಇದ್ದಾರೆ. e-pass bookಗಾಗಿ ಇಪಿಎಫ್‌ಒ ಸದಸ್ಯರು ತಮ್ಮ ಪಾನ್ ಕಾರ್ಡ್, ಆಧಾರ್, ಚಾಲನಾ ಪರವಾನಿಗೆ, ಪಾಸ್‌ಪೋರ್ಟ್, ಚುನಾವಣಾ ಗುರುತು ಚೀಟಿ, ಪಡಿತರ ಚೀಟಿಗಳಂತಹ ಭಾವಚಿತ್ರವಿರುವ ಗುರುತಿನ ಸಂಖ್ಯೆಯನ್ನು ಉಪಯೋಗಿಸಿ ಸದಸ್ಯತ್ವ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮೊಬೈಲ್ ಸಂಖ್ಯೆಯನ್ನು ಪಾಸ್‌ವರ್ಡ್ ಆಗಿ ಉಪಯೋಗಿಸಬೇಕು. id='are-slot-1' class='oiad oi-axt oiadv'> id='top-searched-articles'>ಆದರೆ
ಒಂದೇ ಕಂಡೀಷನ್. ನಿಮ್ಮ PF ಖಾತೆ ಸಂಸ್ಥೆಯ ಲೆಕ್ಕಪುಸ್ತಕದಲ್ಲಿ ಚಾಲ್ತಿಯಲ್ಲಿದ್ದು, ಅದು update ಆಗಿರಬೇಕು ಅಷ್ಟೇ. ಇದಕ್ಕಾಗಿ ಸದಸ್ಯರು ತಾವು ನೌಕರಿ ಮಾಡುವ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗ ಅಥವಾ ಲೆಕ್ಕ ವಿಭಾಗದಿಂದ ತಮ್ಮ PF ಖಾತೆಯ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಈ ಸೇವೆ ಪಡೆಯಲು ಇಲ್ಲಿಗೆ ಭೇಟಿ ನೀಡಿ: www.epfindia.gov.in











Click it and Unblock the Notifications