ಉಮಾ, ಕಲ್ಯಾಣರಂತೆ ಬಿಎಸ್‌ವೈ ವಾಪಸ್: ಅಶೋಕ್

yeddyurappa-will-returfn-to-bjp-like-uma-kalyan-ashok-r
ಬೆಂಗಳೂರು, ಡಿ.5: ಬೆಜೆಪಿಯಲ್ಲಿ ಹಿರಿಯತಲೆ ಆಗಿದ್ದ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ, ಕಳೆದ ತಿಂಗಳು ಪಕ್ಷಕ್ಕೆ ಗುಡ್ ಬೈ ಹೇಳಿದಾಗ ಗೃಹ ಸಚಿವ ಆರ್ ಅಶೋಕ್ ಅವರು 'ಯಡಿಯೂರಪ್ಪ ರಾಜೀನಾಮೆ ಅತ್ಯಂತ ನೋವಿನ ಸಂಗತಿಯಾಗಿದೆ' ಎಂದು ಪ್ರತಿಕ್ರಿಯಿಸಿದ್ದರು.

ಆ ಹಿರಿಯತಲೆ ಬಗ್ಗೆ ಈಗಲೂ ಅದೇ ಅಭಿಮಾನ ಉಳಿಸಿಕೊಂಡಿರುವ ಅಶೋಕ್ 'ನೋಡ್ತಿರಿ, ಮಧ್ಯಪ್ರದೇಶದಲ್ಲಿ ಉಮಾ ಭಾರತಿ, ಉತ್ತರಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ಅವರಂತೆ ಯಡಿಯೂರಪ್ಪನವರೂ ಬಿಜೆಪಿ ಮನೆಗೆ ವಾಪಸಾಗುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪನವರ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಬಿಜೆಪಿಗೆ ಕಂಟಕವಾಗುವುದಿಲ್ಲ. ಕೆಜೆಪಿ ಸ್ಥಾಪನೆಯಿಂದ ಬಿಜೆಪಿ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಿಲ್ಲ' ಎಂದು ಉಪಮುಖ್ಯಮಂತ್ರಿಯೂ ಆಗಿರುವ ಆರ್. ಅಶೋಕ್ ಇತ್ತೀಚೆಗೆ ಹೇಳಿದ್ದಾರೆ.

'ಬಿಜೆಪಿ ರಾಷ್ಟ್ರಮಟ್ಟದ ಪಕ್ಷ. ಅದರ ಬೇರುಗಳು ಆಳವಾಗಿ ಬೇರೂರಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅದು ಕಾರ್ಯಕರ್ತರ ಪಕ್ಷ. ವೈಯಕ್ತಿಕ ನೆಲೆಯಲ್ಲಿ ಯಾರೂ ಇಲ್ಲಿ ಮುಖ್ಯವಾಗುವುದಿಲ್ಲ. ಆದ್ದರಿಂದ ಯಾರೋ ಒಬ್ಬಿಬ್ಬರಿಂದ ಪಕ್ಷಕ್ಕೆ ಮುಳುಗುತ್ತದೆ ಎಂಬುದರಲ್ಲಿ ಅರ್ಥವಿಲ್ಲ' ಎಂದೂ ಪರೋಕ್ಷವಾಗಿ ಯಡಿಯೂರಪ್ಪ ಅವರ ನಡೆಯನ್ನು ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಗಾದರೆ ಪ್ರಾದೇಶಿಕ ನೆಲೆಯ ಕೆಜೆಪಿ, ಬಿಜೆಪಿ ಸರಕಾರವನ್ನು ಉರುಳಿಸುತ್ತದಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ 'ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರಕಾರವನ್ನು ಬೀಳಿಸಲು ಎಷ್ಟೋ ಪ್ರಯತ್ನಗಳು ನಡೆದವು. ಆದರೆ ಸರಕಾರ ಸ್ಥಿರವಾಗಿದೆ. ಈಗಲೂ ಅಷ್ಟೇ ಕೆಜೆಪಿ ಪ್ರಯತ್ನಗಳು ಫಲ ನೀಡುವುದಿಲ್ಲ' ಎಂದು ಅಶೋಕ್ ಗುಡುಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+