ಕೆಜೆಪಿ ಚುನಾವಣಾ ಚಿನ್ಹೆಗೆ ಒಕ್ಕಲಿಗರ ಕೊಕ್ಕೆ

ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ಹಾಸನದ ಒಕ್ಕಲಿಗ ಹಿತರಕ್ಷಣಾ ಸೇನೆ ಹೇಳಿದೆ.
ರೈತರನ್ನು ಯಾಮಾರಿಸಿ ಮತಗಳನ್ನು ಪಡೆಯಬಹುದೆಂದು ಉಳುವ ರೈತನ ಚಿಹ್ನೆಯ ಹಿಂದೆ ಬಿದ್ದಿದ್ದಾರೆ. ಆದರೆ ನಮ್ಮ ಒಕ್ಕಲಿಗರ ಸೇನೆ ಉಳುವ ರೈತರ ಚಿಹ್ನೆಯನ್ನು ಕುಲದೇವರು ಎಂದು ನಂಬಿದೆ.
ಹಬ್ಬ-ಹರಿದಿನಗಳಲ್ಲಿ ಎತ್ತು ಮತ್ತು ನೇಗಿಲು ಮುಟ್ಟುಗಳನ್ನು ಪೂಜೆ ಮಾಡುವುದು ಸಂಪ್ರದಾಯ. ಇದರ ಜೊತೆಗೆ ಒಕ್ಕಲಿಗರ ಸೇನೆ ಹೆಗ್ಗುರುತನ್ನಾಗಿ ನಾಡಪ್ರಭು ಕೆಂಪೇಗೌಡರು ಮತ್ತು ಉಳುವ ರೈತನ ಗುರುತನ್ನು ಪ್ರಚಾರಕ್ಕೆ ಬಳಸುತ್ತಿದೆ ಎಂದು ಪ್ರಕಟಣೆಯಲ್ಲಿ ಸೇನೆಯ ಅಧ್ಯಕ್ಷ ಮೈಲನಹಳ್ಳಿ ಮಂಜೇ ಗೌಡ ತಿಳಿಸಿದ್ದಾರೆ.
ಹಿಂದಿನಿಂದಲೂ ರಾಜಕೀಯ ಪಕ್ಷ ಗಳು ರೈತರನ್ನು ದಾಳಗಳನ್ನಾಗಿ ಮಾಡಿಕೊಂಡು ಅವರ ಹೆಸರೇಳಿ ಅಧಿಕಾರಕ್ಕೆ ಬಂದು ಅವರನ್ನು ಕೊಂದಂತಹ ಉದಾಹರಣೆಗಳು ಸಾಕಷ್ಟಿವೆ. ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರೈತರನ್ನು ಮನಬಂದಂತೆ ಕೊಂದು ಹಾಕಿತು.
ನಂತರ ಜನತಾದಳ ಸರ್ಕಾರ ಶಿರಾದಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿ ಸಾಯಿಸಿತು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಾನೇನು ಕಮ್ಮಿ ಇಲ್ಲ ಎಂದು ಹಾವೇರಿಯಲ್ಲಿ ಮನ ಬಂದಂತೆ ಕೊಂದುಹಾಕಿತು. ಈ ಎಲ್ಲಾ ರಾಜಕೀಯ ಪಕ್ಷಗಳನ್ನು ನೋಡಿದರೆ ಭಾರತದಲ್ಲಿ ಇದುವರೆವಿಗೂ ಎಲ್ಲಾ ಪಕ್ಷ ಗಳು ತಮ್ಮ ಹಿತಕ್ಕಾಗಿ ರೈತರನ್ನು ಬಳಸಿ
ಕೊಳ್ಳುತ್ತಾ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿವೆ ಎಂದು ಅವರು ಹೇಳಿದ್ದಾರೆ.
ಕೆ.ಜೆ.ಪಿ. ಪಕ್ಷ ಉಳುವ ರೈತನ ಚಿಹ್ನೆಗೆ ಹೋರಾಟ ನಡೆಸುತ್ತಿದೆ. ಒಕ್ಕಲಿಗರ ಹಿತರಕ್ಷಣಾ ಸೇನೆಯು ಉಳುವ ರೈತನ ಚಿಹ್ನೆಯನ್ನು ಯಾವುದೇ ರಾಜಕೀಯ ಪಕ್ಷಗಳಿಗೂ ಕೊಡದಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡುತ್ತದೆ.
ಕೆ.ಜೆ.ಪಿ. ಅಥವಾ ಬೇರೆ ಇನ್ಯಾವುದೇ ಪಕ್ಷಕ್ಕೂ ಈ ಚಿಹ್ನೆಯನ್ನು ಚುನಾವಣಾ ಆಯೋಗವು ಕೊಟ್ಟಿದ್ದ ಪಕ್ಷದಲ್ಲಿ ನ್ಯಾಯಾಲಯದಲ್ಲಿ ದಾವಾ ಸಲ್ಲಿಸಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗದ ಸ್ವತಂತ್ರ ಪಟ್ಟಿಯಲ್ಲಿರುವ ಚಿಹ್ನೆಗಳನ್ನು ನೋಂದಾಯಿತ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಪಡೆಯಲು ರಾಜ್ಯಾದ್ಯಂತ ಪಡೆಯಲು ರಾಜ್ಯದಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ 10ಕ್ಕೂ ಹೆಚ್ಚು ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಬೇಕು.
ಚುನಾವಣಾ ಅಯೋಗ ಪ್ರಾದೇಶಿಕ ಪಕ್ಷ ಒಟ್ಟು ವಿಧಾನಸಭಾ ಕ್ಷೇತ್ರದಲ್ಲಿ ಶೇ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಯಾವುದೇ ಪ್ರಾದೇಶಿಕ ಪಕ್ಷದ ಅಭ್ಯರ್ಥಿಯಾಗಲಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಆ ಪಕ್ಷಕ್ಕೆ ಸ್ವತಂತ್ರ ಪಟ್ಟಿಯಲ್ಲಿರುವ ಚಿಹ್ನೆಗಳನ್ನು ನೀಡಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ಪಕ್ಷ ರಾಜ್ಯದಲ್ಲಿ ಸ್ವತಂತ್ರ ಪಟ್ಟಿಯಲ್ಲಿರುವ 'ಸೈಕಲ್' ಅಥವಾ 'ಹೊಲ ಉಳುವ ರೈತ' ಚಿಹ್ನೆ ಪಡೆಯಲು ನಿರ್ಧರಿಸಿದೆ.












Click it and Unblock the Notifications