ಟಾಟಾ ಬಸ್ ವಿನ್ಯಾಸ ಘಟಕ, ಸ್ಥಳೀಯರಿಗೆ ಉದ್ಯೋಗ

Global Bus Design Centret Dharwad
ಹುಬ್ಬಳ್ಳಿ, ನ.27: ಟಾಟಾ ಮಾರ್ಕೋ ಪೋಲೊ ಮೋಟರ್ಸ್ ಲಿ. ಸಂಸ್ಥೆ ಧಾರವಾಡದಲ್ಲಿ ಹೊಸ ಗ್ಲೋಬಲ್ ಬಸ್ ಡಿಸೈನ್ ಘಟಕ ಆರಂಭಿಸಲು ಚಿಂತನೆ ನಡೆಸಿದೆ. ಸ್ಥಳೀಯರಿಗೆ ಉದ್ಯೋಗ, ಜಾಗತಿಕ ಗುಣಮಟ್ಟ ಕಾಯ್ದುಕೊಳ್ಳುವುದು ನಮ್ಮ ಗುರಿ ಎಂದು ಟಾಟಾ ಮಾರ್ಕೋ ಪೋಲೊ ಸಂಸ್ಥೆ ಸಿಇಒ ವಿನಯ್ ಕೆ ಪಾಠಕ್ ಹೇಳಿದ್ದಾರೆ.

ಇಲ್ಲಿನ ಗೋಕುಲ ಕೈಗಾರಿಕಾ ವಲಯದಲ್ಲಿ ಟಾಟಾ ಸಂಸ್ಥೆಯ ಹಾರ್ನೆಸ್ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಬೇಲೂರು ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ. ರೈತರ ಭೂಮಿ ಕಬಳಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದ್ಯಕ್ಕೆ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಿನ್ಯಾಸ ಘಟಕ ಆರಂಭಿಸಲಾಗಿದ್ದು, ಸುಮಾರು 80 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಉದ್ಯೋಗಿಗಳ ಸಂಖ್ಯೆಯನ್ನು 250ಕ್ಕೆ ಏರಿಸಲಾಗುವುದು. ಸುಸಜ್ಜಿತ ವಿನ್ಯಾಸ ಘಟಕ ಸ್ಥಾಪನೆ ಸಕಲ ಸಿದ್ಧತೆ ಪೂರ್ಣಗೊಂಡಿದೆ ಎಂದು ವಿನಯ್ ಹೇಳಿದರು.

ಸ್ಥಳೀಯ ಇಂಜಿನಿಯರ್ ಗಳ ಜೊತೆಗೆ ಬ್ರೆಜಿಲ್ ನಿಂದ ಬರುವ ನುರಿತ ವಿನ್ಯಾಸಗಾರರು ಈ ಬಸ್ ವಿನ್ಯಾಸ ಘಟಕದಲ್ಲಿ ಕಾರ್ಯ ನಿರ್ವಹಿಸಲಿದಾರೆ. ಜಾಗತಿಕ ಮಟ್ಟದಲ್ಲಿ ಹೊಸ ಬಗೆಯ ವಿನ್ಯಾಸವುಳ್ಳ ಬಸ್ ಗಳನ್ನು ಪರಿಚಯಿಸಲು ಟಾಟಾ ಹಾಗೂ ಮಾರ್ಕೊಪೋಲೊ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಸುಮಾರು 300 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ. ಇನ್ನೂ ಸುಮಾರು 160 ಕೋಟಿ ರು ಹೂಡಿಕೆ ಮಾಡಿ ಧಾರವಾಡದ ಘಟಕವನ್ನು ವಿಸ್ತರಿಸುವ ಯೋಜನೆಯಿದೆ. ಇದರಲ್ಲಿ 50 ಕೋಟಿ ರು ವಿಶೇಷವಾಗಿ ಗ್ಲೋಬಲ್ ವಿನ್ಯಾಸ ಘಟಕಕ್ಕೆ ಮೀಸಲಿಡಲಾಗಿದೆ ಎಂದರು.

ಸದ್ಯಕ್ಕೆ ಪ್ರತಿ ದಿನಕ್ಕೆ 75 ಬಸ್ ಗಳನ್ನು ತಯಾರಿಸಲಾಗುತ್ತಿದೆ. ಈ ಸಂಖ್ಯೆಯನ್ನು ಮುಂಬರುವ ಜೂನ್ ವೇಳೆಗೆ 125 ಬಸ್/ದಿನಕ್ಕೆ ಏರಿಸಲಾಗುವುದು ಎಂದರು.

ಪ್ರಸಕ್ತ ವರ್ಷ 700 ಕೋಟಿ ರು ಟರ್ನ್ ಓವರ್ ಗುರಿ ಹೊಂದಿದ್ದೆ. ಸದ್ಯ ವಿನ್ಯಾಸ ಘಟಕದಲ್ಲಿ ಶೇ 97 ರಷ್ಟು ನೌಕರರು ಕರ್ನಾಟಕದವರೇ ಆಗಿದ್ದಾರೆ. ಕಂಪನಿಯಲ್ಲಿ ಸುಮಾರು 1,500 ಉದ್ಯೋಗಿಗಳಿದ್ದಾರೆ. ಹೊಸ ಘಟಕಕ್ಕೆ ಇನ್ನಷ್ಟು ಸ್ಥಳೀಯರನ್ನು ಆಯ್ಕೆ ಮಾಡಲಾಗುವುದು ಎಂದು ವಿನಯ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+