ಆತ್ಮಹತ್ಯೆ ತಡೆಗೆ ಈ ಸಹಾಯವಾಣಿ ತಪ್ಪದೇ ಬಳಸಿ

India's Suicide Capital Bangalore
ಬೆಂಗಳೂರು, ನ.23: ಗಾರ್ಡನ್ ಸಿಟಿ ಈಗ ಸೂಸೈಡ್ ಸಿಟಿ ಆಗಿದೆ ಎಂದು ಅಂಕಿ ಅಂಶ ತೋರಿಸುತ್ತಾ ನಿಂದಿಸುವ ಬದಲು ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಹೆಜ್ಜೆ ಇಡುವುದು ಬೆಂಗಳೂರಿಗರಿಗೆ ಅತ್ಯವಶ್ಯವಾಗಿದೆ. ಗುರುವಾರ (ನ.22)ದ 'ಐಟಿ ಸಿಟಿಯಲ್ಲಿ ಒಂದೇ ದಿನ 6 ಆತ್ಮಹತ್ಯೆಗಳು' ಲೇಖನಕ್ಕೆ ಪೂರಕವಾಗಿ ಆತ್ಮಹತ್ಯೆಗೆ ಕಾರಣ ಹಾಗೂ ತಡೆಗಟ್ಟುವಿಕೆ ಬಗ್ಗೆ ಕೆಲವು ಅಂಶಗಳು ಇಲ್ಲಿದೆ...

ಬೆಂಗಳೂರಿಗರಲ್ಲಿ ಆತ್ಮಹತ್ಯೆ ಹೆಚ್ಚಾಗಲು ನಾನಾ ಕಾರಣಗಳು ಕಂಡು ಬಂದರೂ, ಮಾನಸಿಕ ಒತ್ತಡ, ಉದ್ಯೋಗದಲ್ಲಿ ಸ್ಪರ್ಧಾತ್ಮಕತೆ, ಆರ್ಥಿಕ ಸಂಕಷ್ಟವೇ ಮೂಲ ಕಾರಣ ಎಂದು ನಿಮ್ಹಾನ್ ಹೇಳಿದೆ.

ಆತ್ಮಹತ್ಯೆಗೆ ಏನು ಕಾರಣ: ಗುರುವಾರದ ಲೇಖನವನ್ನೇ ಗಮನಿಸಿದರೆ, ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹದಿಹರೆಯದವರೇ ಹೆಚ್ಚು ಮಂದಿ. ವಿದ್ಯಾರ್ಥಿ/ನಿ ಸಾವಿಗೆ ಓದಿನ ಒತ್ತಡ, ಪ್ರೇಮ ಪ್ರಕರಣ, ಮಾನಸಿಕ ಖಿನ್ನತೆ ಕಾರಣ ಇರಬಹುದು. ಉಳಿದಂತೆ ಗೃಹಿಣಿಯರ ಸಾವಿಗೆ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ ಪ್ರಮುಖ ಕಾರಣವಾಗಿದೆ.

ಕುಟುಂಬಕ್ಕೆ ಸೂಚನೆಯೂ ಸಿಗದಂತೆ ಎಲ್ಲಾ ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಮಾನಸಿಕ ಒತ್ತಡ ಸಹಿಸಲಾಗದೆ ಆತ್ಮಹತ್ಯ್ಗೆ ಶರಣಾಗುವವರ ಸಂಖ್ಯೆ ಶೇ 57ರಷ್ಟಿರುವುದು ಭಯ ಹುಟ್ಟಿಸುತ್ತದೆ.

ಕೆಲಸದ ಒತ್ತಡದಿಂದ ಸಂಸಾರದ ಸಣ್ಣ ಸಮಸ್ಯೆಗೆ ಪರಿಹಾರ ಸಿಗದೆ ಟೆಕ್ಕಿಗಳು ಸಾಯುತ್ತಿದ್ದರೆ, ಅಪ್ಪ ಅಮ್ಮ ಓದು ಎಂದು ಬೈದರು ಎಂಬ ಕೊರಗಿನಲ್ಲಿ ವಿದ್ಯಾರ್ಥಿಗಳು ಸಾವನ್ನಪ್ಪುತ್ತಿರುವುದು ಬೆಂಗಳೂರಿನ ಪಾಲಿಗೆ ಅರಿಗಿಸಿಕೊಳ್ಳದ ದುಃಖವಾಗಿದೆ.

ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿಗರಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿದೆ. ಐಟಿ ವೃತ್ತಿಪರರಲ್ಲಂತೂ ಇದು ತುಂಬಾ ಹೆಚ್ಚಾಗಿದೆ. ಸಾಮಾಜಿಕ ಹಾಗೂ ಮಾನಸಿಕ ಭದ್ರತೆ ಇಲ್ಲದೆ ಅನೇಕ ಇಂಜಿನಿಯರ್ ಗಳು, ಟೆಕ್ಕಿಗಳು, ಉನ್ನತ ವ್ಯಾಸಂಗ ಮಾಡಿದ ವಿದ್ಯಾವಂತರೇ ದುಡುಕಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕೌನ್ಸಿಲರ್ ಮಂಜುಳಾ ರಾಮನ್ ಹೇಳಿದ್ದಾರೆ.

ಪರಿಹಾರ ಏನು?: 2002ರಲ್ಲೇ ಈ ರೀತಿ ಮಾನಸಿಕ ಒತ್ತಡ ನಿವಾರಣೆಗಾಗಿ ಆತ್ಮಹತ್ಯೆ ಯೋಚನೆ ನಿರ್ಮೂಲನೆಗಾಗಿ ಬೆಂಗಳೂರಿನಲ್ಲಿ SAHAI ಸಹಾಯವಾಣಿ ಆರಂಭಿಸಲಾಗಿದೆ.

ನಿಮ್ಹಾನ್ಸ್ ಸಂಸ್ಥೆ ಸಲಹೆ ಮೇರೆಗೆ ಕಾರ್ಯ ನಿರ್ವಹಿಸುವ ಈ ಸಹಾಯವಾಣಿಗೆ ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಾಯಕವಾಗಿ ನಿಂತಿದೆ. SAHAI ಸಹಾಯವಾಣಿ ಇಂತಿದೆ: 080 - 25497777

ಏಕಾಂಗಿತನ, ಕೆಲಸದ ಒತ್ತಡ, ಆರ್ಥಿಕ-ಮಾನಸಿಕ ಭದ್ರತೆ, ಮಾನಸಿಕ ಖಿನ್ನತೆ ಮುಂತಾದ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವತ್ತ ನಮ್ಮ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಬೆಂಗಳೂರಿಗೆ ಆತ್ಮಹತ್ಯಾ ರಾಜಧಾನಿ ಎಂಬ ಟ್ಯಾಗ್ ಆದಷ್ಟು ಬೇಗ ಕಳಚಲಿ ಎಂದು SAHAI ಸಂಸ್ಥೆ ವಕ್ತಾರರು ಆಶಿಸಿದ್ದಾರೆ. SAHAI ವೆಬ್ ತಾಣ ಕ್ಲಿಕ್ಕಿಸಿ

ಆತ್ಮಹತ್ಯೆ ಮಹಾ ಪಾಪ ಎನ್ನುವವರು ಮಾನಸಿಕ ಒತ್ತಡಕ್ಕೆ ಸಿಲುಕಿದವರನ್ನು SAHAI ಕಚೇರಿ ಅಥವಾ ನಿಮ್ಹಾನ್ಸ್ ಗೆ ಕರೆದುಕೊಂಡು ಸೂಕ್ತ ಚಿಕಿತ್ಸೆ ನೀಡಿದರೆ ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+