ಎಲ್.ಕೆ ಅಡ್ವಾಣಿ ಕ್ಷಮೆಯಾಚಿಸಿದ ಯಡಿಯೂರಪ್ಪ

BS Yeddyurappa
ದಾವಣಗೆರೆ, ನ.19: ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ವಿರುದ್ಧ ಧಿಕ್ಕಾರ ಕೂಗಿದ್ದ ಯಡಿಯೂರಪ್ಪ ಈಗ ತಮ್ಮ ವರಸೆ ಬದಲಾಯಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ (ನ.19) ಅಡ್ವಾಣಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

ಭಾನುವಾರ ವೆಂಕಯ್ಯ ನಾಯ್ಡು ಅವರು ಕೂಡಾ ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ನಾನು ಧಿಕ್ಕಾರ ಹಾಕಿದ್ದು ಅನಂತ್ ಕುಮಾರ್ ಅವರ ವಿರುದ್ಧ, ಎಲ್ ಕೆ ಅಡ್ವಾಣಿ ಅವರ ವಿರುದ್ಧ ಅಲ್ಲ. ಬಾಯ್ತಪ್ಪಿನಿಂದ ಪ್ರಮಾದವಾಗಿದೆ. ಮಾತಿನ ಭರದಲ್ಲಿ ಅಡ್ವಾಣಿ ಅವರ ಹೆಸರು ತೇಲಿ ಬಂತು. ಅಡ್ವಾಣಿ ಅವರಿಗೆ ನಾನು ಧಿಕ್ಕಾರ ಹಾಕಿಲ್ಲ ಎಂದು ಯಡಿಯೂರಪ್ಪ ಅವರು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕೆಜೆಪಿ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬಿಜೆಪಿ ನಾಯಕರ ಪರ ಹೇಳಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಬೆಂಬಲಿಗರಲ್ಲಿ ಮತ್ತೆ ಗೊಂದಲ ಮೂಡಿಸಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಅಡ್ವಾಣಿ ಅವರು ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿಕೆ ನೀಡಿದ್ದಾರೆ. ಅದರೆ, ಇದಕ್ಕೂ ಮುನ್ನ ಅಡ್ವಾಣಿ ಅವರದ್ದು ಹಿತ್ತಾಳೆ ಕಿವಿ, ಅನಂತ್ ಕುಮಾರ್ ಅವರ ಮಾತು ಕೇಳಿ ನನ್ನ ವಿರುದ್ಧ ಕಿಡಿಕಾರಿದ್ದಾರೆ.

ಭ್ರಷ್ಟಾಚಾರ ಆರೋಪ ಹೊತ್ತ ತಕ್ಷಣ ರಾಜೀನಾಮೆ ನೀಡಿದೆ. ಆದರೆ, ಎಲ್ಲರಿಗೂ ಇದೇ ಮಾನದಂಡ ಅನುಸರಿಸಲಿಲ್ಲ ಎಂದು ಯಡಿಯೂರಪ್ಪ ಹೇಳಿದ್ದರು.

ನಮ್ಮ ತಂಟೆಗೆ ಬಂದರೆ ಶೆಟ್ಟರ್ ಸರ್ಕಾರ ಉಳಿಯುವುದಿಲ್ಲ .ಈಶ್ವರಪ್ಪ ಅವರು ಸುತ್ತಿ ಬಳಸಿ ಮಾತನಾಡುವುದನ್ನು ಬಿಟ್ಟು ವಿಧಾನಸಭೆ ವಿಸರ್ಜನೆ ಮಾಡಲಿ. ಬಿಜೆಪಿಗೆ ಈಗ ಈಶ್ವರಪ್ಪ ಅವರೇ ಎಲ್ಲವೂ ಆಗಿದ್ದಾರೆ.

ಈಶ್ವರಪ್ಪ ಅವರು ಮಂತ್ರಿಯಾಗಿದ್ದು ನನ್ನಿಂದಲೇ ಎಂಬುದನ್ನು ಮರೆತಿದ್ದಾರೆ. ಈಗ ಅವರ ಕೈಲಿ ಅಧಿಕಾರವಿದೆ. ಸರ್ಕಾರ ಪತನಗೊಳಿಸಲಿ, ವಿಧಾನಸಭೆ ವಿಸರ್ಜಿಸಿ, ಜನತಾ ಜನಾರ್ದನದ ಮುಂದೆ ನಿಲ್ಲಲಿ.

ಮುಂದಿನ ಚುನಾವಣೆಯಲ್ಲಿ ತಮ್ಮ ತಾಕತ್ ತೋರಿಸಲಿ ಎಂದು ಬಿಎಸ್ ಯಡಿಯೂರಪ್ಪ ಅವರು ನೇರವಾಗಿ ಸವಾಲು ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಎಸ್ ಯಡಿಯೂರಪ್ಪ ಅವರು ತಳಮಟ್ಟದಿಂದ ಬೆಳೆದು ಬಂದ ನಾಯಕ. ಅವರು ರಾಜಕೀಯ ಕ್ಷೇತ್ರದಲ್ಲಿ ಕಂಡ ಪ್ರಗತಿ ಹಾಗೂ ತಂದ ಸುಧಾರಣೆಗಳು ಅನುಕರಣೀಯ. ಅದರೆ, ಪಕ್ಷದ ಬಲದಿಂದ ಬೆಳೆದ ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರನ್ನೇ ದೂಷಿಸುವುದು ಸರಿಯಲ್ಲ ಎಂದು ವೆಂಕಯ್ಯ ನಾಯ್ಡು ಅವರು ಹೇಳಿದರು.

ಬಿಜೆಪಿ ಮಟ್ಟಿಗೆ ಅಡ್ವಾಣಿ ಅವರು ಪಕ್ಷದ ಸರ್ವೋಚ್ಛ ನಾಯಕರಾಗಿದ್ದಾರೆ. ಅಡ್ವಾಣಿ ಅವರ ಬಗ್ಗೆ ಬಿಎಸ್ ವೈ ಯಾಕೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ಅಡ್ವಾಣಿ ಅವರಾಗಲಿ, ಪಕ್ಷದ ಹಿರಿಯ ನಾಯಕರಾಗಲಿ ಬಿಎಸ್ ವೈ ಅವರಿಗೆ ಅನ್ಯಾಯ ಮಾಡಿಲ್ಲ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+