ರಾಖಿ ಕೆಣಕಿದ ದಿಗ್ವಿಜಯ್ ಗೆ 50 ಕೋಟಿ ದಂಡ?
ದಿಗ್ವಿಜಯ್ ಹೇಳಿಕೆ ಖಂಡಿಸಿದ ರಾಖಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮುಂಬೈ ಕಮೀಷನರ್ ಕಚೇರಿ ಹಾಗೂ ಮಹಾರಾಷ್ಟ್ರ ಗೃಹ ಇಲಾಖೆ ಕಾರ್ಯದರ್ಶಿ ಭೇಟಿ ಮಾಡಿ ದೂರು ಪತ್ರ ನೀಡಿದ್ದಾರೆ. ಕಾಂಗ್ರೆಸ್ ನಾಯಕ ದಿಗ್ವಿಜಯ್ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ರಾಖಿ ಸಾವಂತ್ ಅವರಿಂದ ಲಿಖಿತ ದೂರು ಸ್ವೀಕರಿಸಲಾಗಿದೆ. ಅದರೆ, ಇನ್ನೂ ಕೇಸು ದಾಖಲಿಸಿಲ್ಲ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಗೋರೆ ಗಾಂವ್ ಪೊಲೀಸ್ ಠಾಣಾಧಿಕಾರಿ ಅರುಣ್ ಜಾಧವ್ ಹೇಳಿದ್ದಾರೆ.
ಸಾವಂತ್ ಅವರು ವೃತ್ತಿಪರ ಕಲಾವಿದೆ, ಸಮಾಜಿಕ ಕಾರ್ಯಕರ್ತೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದರಿಂದ ಅವರ ಇಮೇಜ್ ಹಾಳಾಗುತ್ತದೆ ಎಂದು ರಾಖಿ ಸಾವಂತ್ ಪರ ವಕೀಲ ಇಜಾಜ್ ನಖ್ವಿ ಹೇಳಿದ್ದಾರೆ.
ಭ್ರಷ್ಟಾಚಾರ ವಿರೋಧಿ ಭಾರತ(IAC) ಸಂಘಟನೆಯ ಮುಖಂಡ, ಸಾಮಾಜಿಕ ಹೋರಾಟಗಾರ ಅರವಿಂದ್ ಕೇಜ್ರಿವಾಲ ಹಾಗೂ ಬಾಲಿವುಡ್ ನಟಿ ಕಮ್ ಐಟಂ ಡ್ಯಾನ್ಸರ್ ರಾಖಿ ಸಾವಂತ್ ಅವರನ್ನು ಹೋಲಿಸಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದರು.
"Arvind Kejriwal is like Rakhi Sawant. They both try and expose but with no substance. Apologies to Rakhi Sawant I am an old fan of hers !" ಎಂದು ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ ನಡೆಸಿರುವ ಸರಣಿ ಸುದ್ದಿಗೋಷ್ಠಿಗಳಿಂದ ಪರಿಣಾಮ ದಿಗ್ವಿಜಯ್ ಸಿಂಗ್ ಈ ರೀತಿ ಹೇಳಿಕೆ ನೀಡಿದ್ದರು.
ಎಐಸಿಸಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವದ್ರಾ ಹಾಗೂ ಡಿಎಲ್ ಎಫ್ ಸಂಸ್ಥೆ ನಡುವಿನ ಅಕ್ರಮ ವ್ಯವಹಾರಗಳನ್ನು ಅರವಿಂದ್ ಕೇಜ್ರಿವಾಲ ಮೊದಲಿಗೆ ಬಯಲಿಗೆಳೆದರು.
ನಂತರ ಪ್ರಮುಖ ಉದ್ಯಮಿ ರಿಲಯನ್ಸ್ ಕಂಪನಿಯ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಜೊತೆಗೆ ಯುಪಿಎ ಸರ್ಕಾರ ಅಕ್ರಮ ವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.













Click it and Unblock the Notifications