ಕೇಜ್ರಿವಾಲಾಗೆ ಸ್ವಿಸ್ ಖಾತೆಗಳ ರಹಸ್ಯ ಸಿಕ್ಕಿದ್ದು ಹೇಗೆ?

swiss-accts-iac-kejriwal-disclose-information-source
ಬೆಂಗಳೂರು, ನ.10: ಮಾಜಿ ರೆವನ್ಯೂ ಅಧಿಕಾರಿ ಕೇಜ್ರಿವಾಲಾಗೆ ಅತ್ಯಂತ ಗೌಪ್ಯ ಸ್ವಿಸ್ ಖಾತೆಗಳ ವಿವರ ಅಷ್ಟು ಸಲೀಸಾಗಿ/ನಿಖರವಾಗಿ ಸಿಕ್ಕಿದ್ದಾದರೂ ಹೇಗೆ ಎಂದು ನಾಡಿನ ಜನತೆ ಕೇಳುತ್ತಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಸಮರವ ಸಾರಿರುವ ಇಂಡಿಯಾ ಅಗನೆಸ್ಟ್ ಕರಪ್ಷನ್ ಸಂಘಟನೆಯ ಅರವಿಂದ್ ಕೇಜ್ರಿವಾಲಾ ಅವರು ನಿನ್ನೆ ಕಪ್ಪು ಹಣದ ಕರಾಳ ಮುಖಗಳನ್ನು ಹೊರಹಾಕುತ್ತಿದ್ದಂತೆ ಆಶ್ಚರ್ಯದ ಮಡುವಿಗೆ ಬಿದ್ದ ಜನ ಈ ಪ್ರಶ್ನೆ ಕೇಳಿದ್ದಾರೆ.

ಸರಕಾರ ಕಪ್ಪು ಹಣವಂತರ ಜಾತಕ ಬಯಲು ಮಾಡುವುದು ಎಷ್ಟು ಸಮಂಜಸ/ನೈತಿಕವೋ ಅದೇ ಮಾದರಿ AK ಸಹ ತಮ್ಮ ಮಾಹಿತಿಯ ಮೂಲವನ್ನೂ ಬಹಿರಂಗಗೊಳಿಸಬೇಕು ಎಂದು ಅರ್ಥಶಾಸ್ತ್ರಜ್ಞರೂ ಕೇಳುತ್ತಿದ್ದಾರೆ. ಅಂದಹಾಗೆ HSBC ಆಡಳಿತ ಮಂಡಳಿಯ ನಿರ್ದೇಶಕರಾಗಿ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಸೇವೆ ಸಲ್ಲಿಸಿದ್ದಾರೆ.

AK ಎಲ್ಲಿಂದ ಈ ಮಾಹಿತಿ ಹೆಕ್ಕಿದ್ದಾರೆ ಎಂಬುದನ್ನು ಘೋಷಿಸದ ಹೊರತು ಅವರು ಅಷ್ಟೂ ಶ್ರಮ ವ್ಯರ್ಥವಾಗುವ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಅವರ ಆರೋಪಗಳಿಗೆ ಏನಾದರೂ 'ಅರ್ಥ' ಬರಬೇಕು ಅಂದರೆ ಮೊದಲು ಅವರು ತಮ್ಮ ಗೌಪ್ಯ ಮಾಹಿತಿಯ ಸತ್ಯಾಸತ್ಯತೆಯನ್ನು ವಿವರಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಕೇಳುತ್ತಿದ್ದಾರೆ.

ಭಾರತದ ಪ್ರಖ್ಯಾತ ಉದ್ಯಮಪತಿಗಳು/ರಾಜಕಾರಣಿಗಳು HSBCಯಲ್ಲಿ ಅಪಾರ ಪ್ರಮಾಣದಲ್ಲಿ ಹಣ ಶೇಖರಿಸಿಟ್ಟಿದ್ದಾರೆ ಎಂಬುದು ಭಾರತ ಸರಕಾರದ ಗಮನಕ್ಕೆ ಬಂದಿದ್ದು 2011ರಲ್ಲಿ. ಫ್ರಾನ್ಸ್ ಸರಕಾರ ಅಧಿಕೃತವಾಗಿಯೇ ಭಾರತ ಸರಕಾರಕ್ಕೆ ಈ ಮಾಹಿತಿಯನ್ನು ಗೌಪ್ಯವಾಗಿ ಹಸ್ತಾಂತರಿಸಿತ್ತು. ಹಾಗಿರುವಾಗ ದಿಢೀರನೆ India Against Corruptionಗೆ ಈ ಮಾಹಿತಿ ಎಲ್ಲಿಂದ ಸಿಕ್ಕಿತ್ತು ಎಂಬುದು ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಗಮನಾರ್ಹವೆಂದರೆ ಭಾರತಕ್ಕೆ ಫ್ರಾನ್ಸ್ ಸರಕಾರ ನೀಡಿದ್ದ ಮಾಹಿತಿಯಲ್ಲಿ ಖಾತೆಗಳ ಸಂಖ್ಯೆ (782) ಬಗ್ಗೆ ಹೇಳಲಾಗಿತ್ತಾದರೂ ವೈಯಕ್ತಿಕ ಖಾತೆದಾರರ ಹೆಸರುಗಳು ಎಲ್ಲೂ ನಮೂದಾಗಿರಲಿಲ್ಲ. ಫ್ರಾನ್ಸ್ ಜತೆಗಿನ ಒಪ್ಪಂದದ ಪ್ರಕಾರ ಭಾರತಕ್ಕೆ ಹಾಗೆಲ್ಲ ಖಾತೆಗಳ ವೈಯಕ್ತಿಕ ವಿವರ ಸಿಗುವುದು ದುರ್ಲಭವೇ ಸರಿ. ಈ ಹಿನ್ನೆಲೆಯಲ್ಲಿ AK ತಮ್ಮ ಮಾಹಿತಿಯ ಮೂಲವನ್ನು ಬಹಿರಂಗಗೊಳಿಸಬೇಕು ಎಂಬುದಕ್ಕೆ ಹಚ್ಚಿನ ಒತ್ತು ಸಿಕ್ಕಿದೆ.

ಉದಾಹರಣೆಗೆ ಮುಕೇಶ್ ಅಂಬಾನಿಯನ್ನೇ ತೆಗೆದುಕೊಳ್ಳಿ- ಮುಕೇಶ್ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದಾರೆ ಎನ್ನುವುದಾದರೆ ಆ ಖಾತೆಯನ್ನು ನಿರ್ವಹಿಸುತ್ತಿರುವ ಬ್ಯಾಂಕಿನ ಅಧಿಕಾರಿಯೇ ಆ ವಿವರವನ್ನು ನೀಡಬೇಕು. ಬ್ಯಾಂಕಿನ ಅಧಿಕಾರಿ ಆತ ಆ ಬ್ಯಾಂಕಿನ CEO ಮಟ್ಟದ ಅಧಿಕಾರಿ ಆಗಿರುತ್ತಾರೆ. ಅಂತಹ ಹಿರಿಯ ಅಧಿಕಾರಿ ಕೇಜ್ರಿವಾಲಾ ಅಂಥಹವರಿಗೆ ಸುಲಭವಾಗಿ ಮುಕೇಶ್ ಖಾತೆಯ ವಿವರವನ್ನು ನೀಡುತ್ತಾರೆ ಎಂಬುದು ಊಹಿಸಲೂ ಸಾಧ್ಯವಿಲ್ಲ.

ಇನ್ನೊಂದು ಏಕೈಕ ಸಾಧ್ಯತೆ ಅಂದರೆ ಆದಾಯ ತೆರಿಗೆ ಇಲಾಖೆಯ ಮೂಲಗಳು. ಕೇಂದ್ರ ಸರಕಾರಿ ಮಟ್ಟದಲ್ಲಿ ಈ ಮಾಹಿಯನ್ನು AK ಪಡೆದರಾ ಎಂಬುದನ್ನು ಖುದ್ದು ಅವರೇ ತಿಳಿಸಬೇಕು. ಈ ಮಧ್ಯೆ Reserve Bank of India ಏನ್ಮಾಡ್ತಿದೆ ಎಂದು ಜನ ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+