ಅಪ್ಪ ಸ್ಕೂಟರ್ ಕೊಡಿಸಲಿಲ್ಲ; ಬಾಲಕ ನೇಣಿಗೆ ಶರಣು

ಎಸ್ಎಸ್ಎಲ್ ಸಿ ಓದುತ್ತಿದ್ದ ರಾಜಧಾನಿ ದೆಹಲಿಯ ಈ ಬಾಲಕ ತನ್ನಪ್ಪನನ್ನು ಸ್ಕೂಟರ್ ಕೊಡ್ಸೂ ಅಂತ ಪೀಡಿಸಿದ್ದಾನೆ. ಬಡಪಾಯಿ ಅಪ್ಪ, ಆದೆಲ್ಲಾ ಆಗೊಲ್ಲಾ ಮಗನೇ ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ ಅವನು ಕೇಳಬೇಕಲ್ಲಾ. After all ಅಪ್ಪಾ ನನಗೊಂದು ಸ್ಕೂಟರ್ ಕೊಡ್ಸೂಲ್ಲ ಅಂತಾನಲ್ಲಾ. ಇರು ಇವನಿಗೆ ಬುದ್ಧಿ ಕಲಿಸ್ತೀನಿ ಎಂದು ತನ್ನ ಬದುಕನ್ನೇ ನಾಶ ಮಾಡಿಕೊಂಡಿದ್ದಾನೆ.
ದೆಹಲಿಯ ಉತ್ತರ ಭಾಗದ ನರೇಲಾ ಭಾಗದಲ್ಲಿ ಮಹಾರಾಜ ಅಗ್ರಸೇನ ಶಾಲೆಯಲ್ಲಿ ಓದುತ್ತಿದ್ದ ಈ ಅರಿವುಗೇಡಿ ಬಾಲಕನ ಹೆಸರೂ ಕುತೂಹಲಕಾರಿಯಾಗಿದೆ. ಅವನ ಹೆಸರು Happy ಅಂತೆ! ಇವ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಸಾಯುವುದಕ್ಕೂ ಮುನ್ನ 'ಅಪ್ಪಾ ಈಗ ಎಷ್ಟು ಬೇಕಾದರೂ ಹಣ ಕೂಡಿಟ್ಟುಕೋ' ಎಂದು ಬೇರೆ ಬರೆದಿಟ್ಟು ಸತ್ತಿದ್ದಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ Happy ಅಪ್ಪ ಪ್ರವೀಣ್ ಕುಮಾರರ ಬಾಳಲ್ಲಿ ಈಗ Happy ಶಾಶ್ವತವಾಗಿ ಕಣ್ಮರೆಯಾಗಿದೆ.












Click it and Unblock the Notifications