ಮಳೆರಾಯನಿಗೂ ಡಿಪ್ರೆಶನ್! ಚಂಡಮಾರುತದ ಭೀತಿ

Hurricane Sandy ನಿಜಕ್ಕೂ ಅಮೆರಿಕವನ್ನು ಬೆಚ್ಚಿಬೀಳಿಸಿದೆ. ಇತಿಹಾಸದಲ್ಲೆಂದೂ ಕಂಡುಕೇಳರಿಯದ ಭೀಕರ ಚಂಡಮಾರುತ ಇದಾಗಿದೆ. ಇನ್ನು ಭಾರತದಲ್ಲಿ ನಿನ್ನೆಯಿಂದಲೇ ಮೋಡ ಹಾಕಿಕೊಂಡಿದೆ. ಯಾವಾಗ ಬೇಕಾದರೂ ಧೋ ಎಂದು ಮಳೆ ಸುರಿಯಬಹುದಾಗಿದೆ. ಮಳೆಯ ಜತೆಗೆ ಬಿರುಗಾಳಿಯೂ ಏಳುತ್ತಿದೆ. ಎಲ್ಲ ಬಂಗಾಳ ಕೊಲ್ಲಿಯಲ್ಲಿ ನಿನ್ನೆ ಕಾಣಿಸಿಕೊಂಡಿರುವ ವಾಯುಭಾರ ಕುಸಿತದ ಪ್ರಭಾವ.
ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮುಖ್ಯವಾಗಿ ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಚಂಡಮಾರುತ ಆತಂಕ ಸೃಷ್ಟಿಯಾಗಿದೆ. ಸದ್ಯಕ್ಕೆ ಸಾವು ನೋವು ಸಂಭವಿಸಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು.
ಕೊಲ್ಲಿಯಲ್ಲಿ ವಾಯುಭಾರ ಕುಸಿತ ಮೊದಲು ತನ್ನ ಪ್ರಭಾವ ತೋರುವುದು ತಮಿಳುನಾಡು ಮೇಲೆ. ಹಾಗಾಗಿ ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಶಾಲಾ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಿರುವ ಸರಕಾರ ಕರವಾಳಿ ಜನರ ರಕ್ಷಣೆಗೆ ಸನ್ನದ್ಧವಾಗಿದೆ.
ಇಂದು ಸಂಜೆ ಆಂಧ್ರಕ್ಕೂ ಕಾಲಿಡುವ ಮಳೆ ಮಾರುತಗಳು ಮುಂದೆ ಕರ್ನಾಟಕಕ್ಕೂ ಅಪ್ಪಳಿಸಲಿವೆ. ಹಾಗಾಗಿ ಇನ್ನು ಮೂರು ದಿನ ಕರ್ನಾಟಕದಲ್ಲೂ ಭರ್ಜರಿ ಮಳೆ ನಿರೀಕ್ಷಿತ ಎಂದು ಹವಾಮಾನ ಇಲಾಖೆ ಮೂಲಗಳು ಎಚ್ಚರಿಸಿವೆ.












Click it and Unblock the Notifications