ಸಾನ್ವಿ ತಾಯಿ ಜತೆ ಯಂಡಮೂರಿಗೆ ಸಂಬಂಧವಿತ್ತೇ?

ಈಗ ಹಾಲುಗಲ್ಲದ ಕಂದನ ಅಪಹರಿಸಿ, ಸಾಯಿಸಿದ ಯಂಡಮೂರಿ ಕಥೆಗೆ ಟ್ವಿಸ್ಟ್ ದೊರೆತಿದೆ. ಏನಪಾ ಅಂದರೆ ಪ್ರಕರಣದ ಖಳನಾಯಕ ರಘುನಂದನ ಯಂಡಮೂರಿಗೂ ಅಬೋಧ ಮಗುವಿನ ತಾಯಿ ಸಾನ್ವಿಗೂ ಅಕ್ರಮ ಸಂಬಂಧವಿತ್ತಂತೆ.
ಮಗುವಿನ ತಂದೆ ವೆಂಕಟಕೊಂಡ ಶಿವ ಪ್ರಸಾದ್ ವೆನ್ನಾ ತನ್ನ ತಾಯಿ ಸತ್ಯವತಿ ಮತ್ತು ಮುದ್ದುಕಂದ ಸಾನ್ವಿಯನ್ನು ಕಳೆದುಕೊಂಡು ಪರಿತಪಿಸುತ್ತಿರುವ ಘಳಿಗೆಯಲ್ಲೇ ಹಂತಕ ರಘುನಂದನ ಯಂಡಮೂರಿಗೆ ತನ್ನ ಹೆಂಡತಿ ಲತಾ ಜತೆ ಅಕ್ರಮ ಸಂಬಂಧವಿತ್ತು ಎಂಬ ಆಘಾತಕಾರಿ ಸುದ್ದಿ ಅವರ ಕಿವಿಗೆ ಬಿದ್ದಿದೆ.
ಪ್ರಕಾಶಂ ಜಿಲ್ಲೆಯ ಕುಡುಮಲಕುಂಟ ಗ್ರಾಮದಲ್ಲಿ ನಿನ್ನೆ ಸತ್ಯವತಿ ಅವರ ಅಂತ್ಯಸಂಸ್ಕಾರ ನಡೆಸಿದ ಸಾನ್ವಿ ಕುಟುಂಬಸ್ಥರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಾಮುಖ್ಯತೆ ಪಡೆದಿದೆ.
'ಯಂಡಮೂರಿ ತೆಲುಗುದವನಾಗಿದ್ದರಿಂದ ಜತೆಗೆ ಒಂದೇ ಅಪಾರ್ಟ್ ಮೆಂಟಿನಲ್ಲಿದ್ದರಿಂದ ಒಮ್ಮೆ ಅವನನ್ನು ತಮ್ಮ ಭಾವ ಊಟಕ್ಕೆ ಕರೆದಿದ್ದರು. ಹಂತಕನ ದುರಾಸೆಗೆ ನಮ್ಮ ಕುಡಿ ಬಲಿಯಾಯಿತು. ಹಣಕಾಸು ತೊಂದರೆಯಲ್ಲಿದ್ದ ಯಂಡಮೂರಿ ಒತ್ತೆ ಹಣಕ್ಕಾಗಿ ಅಜ್ಜಿ ಮತ್ತು ಮಗುವನ್ನು ಸಾಯಿಸಿದ್ದಾನಷ್ಟೇ' ಎಂದು ಲತಾ ಸಾನ್ವಿ ಅವರ ಸೋದರ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಲತಾ ತಾಯಿ ಹೇಳುವುದೇ ಬೇರೆ: ಆದರೆ ಲತಾ ಅವರ ತಾಯಿ ಮಹಾಲಕ್ಷ್ಮಿ ಹೇಳುವುದೇ ಬೇರೆ. 35 ವರ್ಷದ ಲತಾ ಮತ್ತು ಅವಳ ಗಂಡ (41 ವರ್ಷದ ವೆಂಕಟ ಕೊಂಡ ಶಿವ ವೆನ್ನಾ) ಕೌಟುಂಬಿಕ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮದುವೆಯಾಗಿ 10 ವರ್ಷ ಕಳೆದರೂ ಅವರಿಗೆ ಮಗುವಾಗಿರಲಿಲ್ಲ. ನನ್ನ ಮಗಳು ಚೆಂಚು ಲತಾ 10 ವರ್ಷದ ಬಳಿಕ ಸಾನ್ವಿಗೆ ಜನ್ಮ ನೀಡಿದ್ದಳು' ಎಂದು ಗುಪ್ತ್ ಗುಪ್ತ್ ಆಗಿ ಮಾತನಾಡುತ್ತಾರೆ.
ಗಮನಾರ್ಹವೆಂದರೆ ಹಂತಕ ಯಂಡಮೂರಿ ಕಳಿಸಿದ್ದ ಅಪಹರಣ ಪತ್ರದಲ್ಲಿ 'ಲತಾ' ಎಂದು ಸಂಬೋಧಿಸಿದ್ದ. ಜತೆಗೆ ಶಿವಾ ಎಂದೂ ಕರೆದಿದ್ದ. ಕೊನೆಗೆ ಆಪ್ಯಾಪಮಾನವಾಗಿ ಹಾಗೆ ಕರೆದಿದ್ದೇ ಅವನಿಗೆ ಮುಳುವಾಗಿ ಅಮೆರಿಕ ಪೊಲೀಸರಿಗೆ ಸುಲಭದ ತುತ್ತಾದ.
Interestingly ಯಂಡಮೂರಿ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಟೆಕ್ಕಿ. ತನ್ನ ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಯಂಡಮೂರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಸಾನ್ವಿ ಹತ್ಯೆಗೂ ಮುನ್ನ ತನ್ನ ಸ್ನೇಹಿತನೊಬ್ಬನಿಗೆ ಫೋನ್ ಮಾಡಿ 'ಕಷ್ಟದಲ್ಲಿದ್ದೇನೆ. 1 ಲಕ್ಷ ರೂ. ಸಾಲ ನೀಡುವಂತೆ' ಅಲವತ್ತುಕೊಂಡಿದ್ದ.












Click it and Unblock the Notifications