ವೀರಪ್ಪ ಮೊಯ್ಲಿಗೆ ಪೆಟ್ರೋಲಿಯಂ, ಸಲ್ಮಾನ್ ಗೆ ವಿದೇಶಾಂಗ

Veerappa Moily
ನವದೆಹಲಿ, ಅ.28: ಪ್ರಧಾನಿ ಮನಮೋಹನ್ ಸಿಂಗ್ ಅವರ ಸಚಿವ ಸಂಪುಟ ಭಾನುವಾರ (ಅಕ್ಟೋಬರ್ 28)ರಂದು ಪುನಾರಚನೆ ಜೊತೆಗೆ ಹಲವು ಹಿರಿಯ ಸಚಿವ ಖಾತೆಗಳು ಬದಲಾಗಿದೆ. ಕರ್ನಾಟಕದ ಎಂ ವೀರಪ್ಪ ಮೊಯ್ಲಿ ಅವರಿಗೆ ಪೆಟ್ರೋಲಿಯಂ ಸಚಿವ ಸ್ಥಾನ ಲಭಿಸಿದ್ದರೆ, ಕೆಎಚ್ ಮುನಿಯಪ್ಪ ಅವರಿಗೆ ಡಿಮೋಷನ್ ಆಗಿದ್ದು, ರೈಲ್ವೇ ಖಾತೆಯಿಂದ ಕಿತ್ತು ಸಣ್ಣ ಕೈಗಾರಿಕೆಗೆ ಹಾಕಲಾಗಿದೆ. ಕೃಷ್ಣ ಅವರ ಸ್ಥಾನ ಸಲ್ಮಾನ್ ಖುರ್ಷೀದ್ ಅವರಿಗೆ ಲಭಿಸಿದೆ.

ಉಳಿದಂತೆ ಮನೀಶ್ ತಿವಾರಿ ಅವರಿಗೆ ಮಾಹಿತಿ ಮತ್ತು ಪ್ರಸಾರ ಖಾತೆ ಸಿಕ್ಕಿದೆ. ಕಪಿಲ್ ಸಿಬಲ್ ಅವರಿಗೆ ಯಾವ ಖಾತೆ ದೊರೆಯಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಪಿಲ್ ಸಿಬಲ್ ಕೈಯಲ್ಲಿದ್ದ ಮಾನವ ಸಂಪನ್ಮೂಲ ಖಾತೆ ಆಂಧ್ರಪ್ರದೇಶದ ಪಲ್ಲಂರಾಜು ಪಾಲಾಗಿದೆ. [

ಎನ್ ಟಿಆರ್ ಪುತ್ರಿ ಡಿ ಪುರಂದೇಶ್ವರಿ ಅವರಿಗೆ ಆನಂದ್ ಶರ್ಮಾ ಅವರ ಬಳಿ ಇದ್ದ ವಾಣಿಜ್ಯ ಖಾತೆ ಲಭಿಸಿದೆ. ಚಿರಂಜೀವಿ ಅವರಿಗೆ ನಿರೀಕ್ಷೆಯಂತೆ ಪ್ರವಾಸೋದ್ಯಮ ಖಾತೆ ಲಭಿಸಿದೆ.

ಯುಪಿಎ II ಕ್ಯಾಬಿನೆಟ್, ರಾಜ್ಯ ಸಚಿವರು ಹಾಗೂ ಅವರ ಖಾತೆ ವಿವರ ಇಂತಿದೆ:
* ಎಂ ವೀರಪ್ಪ ಮೊಯ್ಲಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
* ಕಪಿಲ್ ಸಿಬಲ್: ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಟೆಕ್ನಾಲಜಿ
* ಸಿಪಿ ಜೋಶಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ
* ವಯಾಲಾರ್ ರವಿ : ಸಾಗರೋತ್ತರ ಭಾರತೀಯ ವ್ಯವಹಾರ
* ಕುಮಾರಿ ಸೆಲ್ಜಾ : ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
* ಪವನ್ ಕುಮಾರ್ ಬನ್ಸಾಲ್ : ರೈಲ್ವೇ ಖಾತೆ
* ಸಲ್ಮಾನ್ ಖುರ್ಷೀದ್: ವಿದೇಶಾಂಗ ಖಾತೆ
* ಜೈರಾಮ್ ರಮೇಶ್: ಗ್ರಾಮೀಣಾಭಿವೃದ್ಧಿ
* ಎಸ್ ಜೈಪಾಲ್ ರೆಡ್ಡಿ: ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ
* ಕಮಲ್ ನಾಥ್ : ನಗರಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರ
* ಕೆ ರೆಹಮಾನ್ ಖಾನ್ : ಅಲ್ಪಸಂಖ್ಯಾತರ ವ್ಯವಹಾರ
* ದಿನ್ಶಾ ಜೆ ಪಟೇಲ್ : ಗಣಿಗಾರಿಕೆ
* ಅಜಯ್ ಮಾಕೆನ್ : ವಸತಿ ಮತು ನಗರ ಬಡತನ ನಿರ್ಮೂಲನೆ
* ಎಂಎಂ ಪಲ್ಲಂ ರಾಜು: ಮಾನವ ಸಂಪನ್ಮೂಲ ಅಭಿವೃದ್ಧಿ
* ಅಶ್ವಿನ್ ಕುಮಾರ್ : ಕಾನೂನು* ಹರೀಶ್ ರಾವತ್ : ಜಲ ಸಂಪನ್ಮೂಲ
* ಚಂದ್ರೇಶ್ ಕುಮಾರಿ ಕಟೋಚ್ : ಸಂಸ್ಕೃತಿ ಖಾತೆ

ರಾಜ್ಯ ಸಚಿವರು (ಸ್ವತಂತ್ರ ಖಾತೆ) :
* ಮನೀಶ್ ತಿವಾರಿ : ಮಾಹಿತಿ ಮತ್ತು ಪ್ರಸಾರ
* ಡಾ ಕೆ. ಚಿರಂಜೀವಿ : ಪ್ರವಾಸೋದ್ಯಮ
* ಜ್ಯೋತಿರಾಧಿತ್ಯಾ ಸಿಂಧಿಯಾ: ಇಂಧನ
* ಕೆಎಚ್ ಮುನಿಯಪ್ಪ: ಸಣ್ಣ ಮತ್ತು ಮಧ್ಯಮ ಕೈಗಾರಿಕೆ
* ಬಿಎಂ ಸೋಲಂಕಿ : ಕುಡಿಯುವ ನೀರು ಹಾಗೂ ಒಳಚರಂಡಿ
* ಸಚಿನ್ ಪೈಲಟ್: ಕಾರ್ಪೋರೇಟ್ ವ್ಯವಹಾರ
* ಜಿತೇಂದ್ರ ಸಿಂಗ್: ಕ್ರೀಡಾ ಮತ್ತು ಯುವಜನ ಖಾತೆ

ರಾಜ್ಯ ಸಚಿವರುಗಳು :
* ಡಾ. ಶಶಿ ತರೂರ್ : ಮಾನವ ಸಂಪನ್ಮೂಲ ಖಾತೆ
* ಕೊಡಿಕುನ್ನಿಲ್ ಸುರೇಶ್: ಕಾರ್ಮಿಕ ಕಲ್ಯಾಣ ಖಾತೆ
* ತಾರೀಖ್ ಅನ್ವರ್ : ಕೃಷಿ ಮತ್ತು ಆಹಾರ ಸಂಸ್ಕರಣ ಕೈಗಾರಿಕೆ
* ಕೆಜೆ ಸೂರ್ಯ ಪ್ರಕಾಶ್ ರೆಡ್ಡಿ : ರೈಲ್ವೇ
* ರಾಣಿ ನರಾಹ್ : ಬುಡಕಟ್ಟು ವ್ಯವಹಾರ
* ಅಧೀರ್ ರಂಜನ್ ಚೌಧುರಿ : ರೈಲ್ವೇ
* ಎಎಚ್ ಖಾನ್ ಚೌಧುರಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಸರ್ವೆ ಸತ್ಯನಾರಾಯಣ : ರಸ್ತೆ ಸಾರಿಗೆ ಮತ್ತು ಹೆದ್ದಾರಿ
* ನಿನಾಂಗ್ ಎರಿಂಗ್ : ಅಲ್ಪಸಂಖ್ಯಾತರ ವ್ಯವಹಾರ
* ದೀಪಾ ದಾಸ್ ಮುನ್ಶಿ : ನಗರಾಭಿವೃದ್ಧಿ
* ಪೊರಿಕಾ ಬಲರಾಮ್ ನಾಯ್ಕ್ : ಸಮಾಜಿಕ ನ್ಯಾಯ ಮತ್ತು ಸಬಲೀಕರಣ
* ಡಾ. ಕೃಪಾರಾಣಿ ಕಿಲ್ಲಿ : ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ
* ಲಾಲ್ ಚಂದ್ ಕಟಾರಿಯಾ : ರಕ್ಷಣಾ ಖಾತೆ
* ಇ. ಅಹಮದ್ : ವಿದೇಶಾಂಗ ಖಾತೆ
* ಡಿ ಪುರಂದೇಶ್ವರಿ : ವಾಣಿಜ್ಯ ಮತ್ತು ಕೈಗಾರಿಕೆ
* ಜಿತೇಂದ್ರ ಪ್ರಸಾದ : ರಕ್ಷಣೆ ಹಾಗೂ ಮಾನವ ಸಂಪನ್ಮೂಲ

* ಡಾ. ಎಸ್ ಜಗತ್ ರಕ್ಷಕನ್ : ಹೊಸ ಮತ್ತು ಪುನರ್ ಬಳಕೆ ಇಂಧನ
* ಆರ್ ಪಿಎನ್ ಸಿಂಗ್ : ಗೃಹ
* ಕೆಸಿ ವೇಣುಗೋಪಾಲ್ : ನಾಗರೀಕ ವಿಮಾನಯಾನ
* ರಾಜೀವ್ ಶುಕ್ಲಾ : ಸಂಸದೀಯ ವ್ಯವಹಾರ ಮತ್ತು ಯೋಜನಾ ಖಾತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+