ಕರ್ನಾಟಕದ ರೆಹಮಾನ್ ಖಾನ್ ಅವರಿಗೆ ಕ್ಯಾಬಿನೆಟ್ ದರ್ಜೆ

ಕರ್ನಾಟಕದ ರೆಹಮಾನ್ ಖಾನ್ ಅವರಿಗೆ ಅಲ್ಪಸಂಖ್ಯಾತ ಕಲ್ಯಾಣ ಖಾತೆ ಸಿಗುವ ಸಾಧ್ಯತೆ ಹೆಚ್ಚಿದೆ. ಸಲ್ಮಾನ್ ಖುರ್ಷಿದ್ ಅವರ ಬಳಿ ಇದ್ದ ಈ ಖಾತೆ ಈಗ ರೆಹಮಾನ್ ಖಾನ್ ಗೆ ಸಿಗುವುದು ನಿಚ್ಚಳವಾಗಿದೆ.
ಭಾನುವಾರ(ಅ.28) ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರ ಪಟ್ಟಿ ಇಂತಿದೆ;
ಕ್ಯಾಬಿನೆಟ್ ಸಚಿವರು:
1. ಕೆ ರೆಹಮಾನ್ ಖಾನ್
2. ದಿನ್ಶಾ ಪಟೆಲ್
3. ಅಜಯ್ ಮಾಕೆನ್
4. ಪಲ್ಲಂ ರಾಜು,
5. ಅಶ್ವಿನ್ ಕುಮಾರ್
6. ಹರೀಶ್ ರಾವತ್
7. ಚಂದ್ರೇಶ್ ಕುಮಾರಿ ಕಟೋಜ್
ರಾಜ್ಯಸಚಿವರು(ಸ್ವತಂತ್ರ ಖಾತೆ)
1. ಮನೀಶ್ ತಿವಾರಿ
2. ಚಿರಂಜೀವಿ
ರಾಜ್ಯ ಸಚಿವರು
1. ಶಶಿ ತರೂರ್
2. ಕೊಡಿಕುನ್ನಿಲ್ ಸುರೇಶ್
3. ತಾರೀಖ್ ಅನ್ವರ್,
4. ಕೆ ಜಯಸೂರ್ಯ ಪ್ರಕಾಶ ರೆಡ್ಡಿ
5. ರಾಣಿ ನರಾಹ್
6. ಅಧೀರ್ ರಂಜನ್ ಚೌಧುರಿ
7. ಅಬು ಹಸೆಮ್ ಖಾನ್ ಚೌಧುರಿ,
8. ಸರ್ವೆ ಸತ್ಯನಾರಾಯಣ,
9. ನಿನಾಂಗ್ ಎರಿಂಗ್,
10. ದೀಪಾ ದಾಸ್ ಮುನ್ಶಿ,
11. ಪೊರಿಕಾ ಬಲರಾಮ್ ನಾಯಕ್,
12. ಡಾ. ಕೃಪಾರಾಣಿ ಕಿಲ್ಲಿ
13. ಲಾಲ್ ಚಂದ್ ಕಟಾರಿಯಾ
ಆಂಧ್ರಕ್ಕೆ ಸಿಂಹಪಾಲು : ಬಹು ನಿರೀಕ್ಷಿತ ಯುಪಿಎ II ಸಂಪುಟ ವಿಸ್ತರಣೆಯಲ್ಲಿ ಆಂಧ್ರಪ್ರದೇಶ ಸಿಂಹಪಾಲು ಪಡೆದಿದೆ. ಒಟ್ಟಾರೆ 17 ಹೊಸ ಮುಖಗಳನ್ನು ಮನಮೋಹನ್ ಸಿಂಗ್ ಕ್ಯಾಬಿನೆಟ್ ಸೇರಿಸಿಕೊಳ್ಳಲಾಗಿದೆ. ಒಟ್ಟಾರೆ ಆಂಧ್ರ ಹಾಗೂ ಪಶ್ಚಿಮ ಬಂಗಾಳ ತಲಾ 22 ಸಚಿವರನ್ನು ಹೊಂದಿದೆ.
ಆಂಧ್ರದಿಂದ 6 ಜನ ಹೊಸಬರು ಅದರಲ್ಲಿ ಇಬ್ಬರು ತೆಲಂಗಾಣದ ಮೂಲದವರು ಪ್ರಮಾಣ ವಚನೆ ಸ್ವೀಕರಿಸಿದ್ದಾರೆ. ಆದರೆ, ಇಬ್ಬರಿಗೂ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ತೆಲಂಗಾಣ ಬಿಸಿ, ಮಮತಾ ಹೋರಾಟಕ್ಕೆ ಪ್ರತಿಯಾಗಿ ಈ ಎರಡು ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ.
ಯುವಕರ ಸೇರ್ಪಡೆ ಇಲ್ಲ: ರಾಹುಲ್ ಗಾಂಧಿ ಅವರ ಯುವ ಪಡೆಯ ಕೆಲವರು ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಮನಮೋಹನ್ ಸಿಂಗ್ ಅವರ ಸಂಪುಟಕ್ಕೆ ಹಿರಿಯ ನಾಯಕರು ಮಾತ್ರ ಸೇರ್ಪಡೆಗೊಂಡಿದ್ದಾರೆ.
ಸಂಪುಟ ಸೇರಿದವರಲ್ಲಿ ಹರೀಶ್ ರಾವತ್(65 ವರ್ಷ), ದಿನ್ಶಾ ಪಟೇಲ್ (75), ಅಧೀರ್ ರಂಜನ್ (56 ವರ್ಷ) ಹಾಗೂ ದೀಪಾ ದಾಸ್ ಮುನ್ಶಿ ಅವರಿಗೆ 52 ವರ್ಷ ಸರಾಸರಿ ವಯೋಮಿತಿ 50 ದಾಟುತ್ತದೆ.
ಆದರೆ, ಈಗಾಗಲೇ ರಾಹುಲ್ ಯುವಪಡೆಯ ಜ್ಯೋತಿರಾಧಿತ್ಯಾ ಸಿಂಧಿಯಾ, ಸಚಿನ್ ಪೈಲಟ್ ಅವರು ಸಂಪುಟದಲ್ಲಿ ಇರುವುದರಿಂದ ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುವ ಅವಶ್ಯಕತೆ ಏಕೆ? ಹಾಗೆ ಬಡ್ತಿ ನೀಡಿ ಕ್ಯಾಬಿನೆಟ್ ದರ್ಜೆಗೇರಿಸಬಹುದಲ್ಲದೆ ಎಂದು ಯುಪಿಎ ವರಿಷ್ಠರು ಯೋಚಿಸಿದ ಹಾಗೆ ತೋರುತ್ತದೆ.
ಈ ನಡುವೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಸಂಪುಟ ಸೇರದಿರುವ ಬಗ್ಗೆ ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಹುಲ್ ಅವರು ಪಕ್ಷದ ಬಲವರ್ಧನೆಯತ್ತ ಗಮನ ಹರಿಸಲಿದ್ದಾರೆ ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.












Click it and Unblock the Notifications